11/12/2025
IMG-20251020-WA0020

ಬೆಳಗಾವಿ-20: ಕಿತ್ತೂರು ಉತ್ಸವದ ಅಂಗವಾಗಿ ರಾಜ್ಯದಾದ್ಯಂತ ಸಂಚರಿಸುತ್ತಿರುವ ವೀರಜ್ಯೋತಿಯನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.

ಖಾನಾಪುರ ತಾಲ್ಲೂಕಿನ ನಂದಗಡ ಮೂಲಕ ಬೆಳಗಾವಿ ನಗರವನ್ನು ಪ್ರವೇಶಿಸಿದ ಜ್ಯೋತಿಯನ್ನು ಮಹಾಪೌರರಾದ ಮಂಗೇಶ್ ಪವಾರ್ ಅವರು ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಪೂಜೆ ಸಲ್ಲಿಸಿ ಬರಮಾಡಿಕೊಂಡರು.

ಕಿತ್ತೂರು ಉತ್ಸವ: ಬೆಳಗಾವಿ ನಗರದಲ್ಲಿ ವೀರಜ್ಯೋತಿಗೆ ಸ್ವಾಗತ

ಮಹಾನಗರ ಪಾಲಿಕೆ ಆಯುಕ್ತರಾದ ಶುಭ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ತಹಶೀಲ್ದಾರ ಬಸವರಾಜ ನಾಗರಾಳ, ಮುರುಗೇಶ್ ಶಿವಪೂಜಿ, ಕಸ್ತೂರಿ ಭಾಂವಿ ಮತ್ತಿತರರು ಹಾಜರಿದ್ದರು.

Screenshot 2025 1020 203807 - Screenshot 2025 1020 203807

ಕಲಾತಂಡಗಳ ಜತೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಜ್ಯೋತಿಯು ಕಾಕತಿಗೆ ತೆರಳಿತು.
ಕಾಕತಿಯಿಂದ, ಹಿರೇ ಬಾಗೇವಾಡಿ, ಚಿಕ್ಕ ಬಾಗೇವಾಡಿ, ತಿಗಡಿ, ಮರೀಕಟ್ಟಿ, ಸಂಪಗಾಂವ ಮತ್ತಿತರ ಗ್ರಾಮಗಳ ಮೂಲಕ ಬೈಲಹೊಂಗಲಕ್ಕೆ ತೆರಳಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅ.9 ರಂದು ಬೆಂಗಳೂರಿನ ವಿಧಾನಸೌಧದ ಬಳಿ ಜ್ಯೋತಿಯಾತ್ರೆಗೆ ಚಾಲನೆ ನೀಡಿದ್ದರು. ಅ.23 ರಂದು ಜ್ಯೋತಿಯು ಕಿತ್ತೂರು ತಲುಪಲಿದೆ.

error: Content is protected !!