11/12/2025
IMG-20251011-WA0009

ಬೆಳಗಾವಿ-11:ಬೆಳಗಾವಿಯ ಮರಾಠಾ ಮಂದಿರದಲ್ಲಿ 3 ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಆವಿಷ್ಕಾರ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಎಲ್ಲ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಎಂಜಾಯ್ ಮಾಡಿದರು.

ಇದೇವೇಳೆ ಹಲವಾರು ವಸ್ತುಗಳನ್ನು ಖರೀದಿಸುವ ಮೂಲಕ ಉದ್ಯಮಗಳನ್ನು ಪ್ರೋತ್ಸಾಹಿಸಿದರು.

ತಾವು ಬೆಳೆಯುವ ಜೊತೆಗೆ ಬೇರೆಯವರೂ ಬೆಳೆಯುವ ಅವಕಾಶ ಮಾಡಿಕೊಡುತ್ತಿರುವ ಸಂಘಟಕರ ಕೆಲಸ ಶ್ಲಾಘನೀಯ ಎಂದು ಸಚಿವರು ಹೇಳಿದರು.

ಕಳೆದ 28 ವರ್ಷದಿಂದ ನಿರಂತರವಾಗಿ ಆವಿಷ್ಕಾರ ಉತ್ಸವ ಮುನ್ನಡೆಯುತ್ತಿದೆ.
ಇಂದು ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಮುಂದೆ ಬಂದಿದ್ದಾರೆ. ನಮ್ಮ ಸಮಾಜ ಮಹಿಳೆ- ಪುರುಷ ಭೇದವಿಲ್ಲದೆ
ಎಲ್ಲರೂ ಸಮಾನ ಎನ್ನುವ ಭಾವನೆ ಹೊಂದಿದೆ.
ಮೊದಲು ಮಹಿಳೆಯರಿಗೆ ಮನೆಯಿಂದ ಹೊರಗೆ ಹೋಗಲು ಅವಕಾಶವಿರಲಿಲ್ಲ
ಈಗ ಮಹಿಳೆಯರ ಭಾವನೆ, ಚಿಂತನೆ ಬದಲಾಗಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ನಮ್ಮ ಇಲಾಖೆಯಿಂದ ಬಹಳಷ್ಟು ಯೋಜನೆಗಳಿವೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಿ. ಎರಡೂವರೆ ವರ್ಷದಿಂದ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ನಿಮ್ಮೆಲ್ಲರ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಸಚಿವರು ಹೇಳಿದರು.

ಈ ವೇಳೆ ಯಶಶ್ರೀ ದೇಶಪಾಂಡೆ, ಸ್ವಾತಿ ಫಡಕೆ, ರೋಹಿಣಿ ಗೋಗಟೆ, ಆವಿಷ್ಕಾರ ಕಮಿಟಿಯ ಪದಾಧಿಕಾರಿಗಳು ಹಾಜರಿದ್ದರು.

error: Content is protected !!