ಬೆಳಗಾವಿ-08: ಸರಕಾರದ ಆದೇಶದಂತೆ ನವೆಂಬರ್ 1 ರಿಂದ ಬೆಳಗಾವಿ ಜಿಲ್ಲೆಯ ಎಲ್ಲ ಕಾರ್ಖಾನೆ ಗಳು ಪ್ರಾರಂಭವಾಗಬೇಕೆಂದು ಜಿಲ್ಲಾಢಳಿತ ಆದೇಶ ಹೊರಡಿಸಿದರು, ಇಲ್ಲಿರ ವರೆಗೆ ಕಾರ್ಖಾನೆಯಿಂದ ಯಾವುದೇ ಮಾಹಿತಿ ಬರದೇ ಇರುವುದನ್ನು ಖಂಡಿಸಿ ರಾಷ್ಟ್ರೀಯ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಡಿಸಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ ಯಾವುದೇ ಒಂದು ಕಾರ್ಖಾನೆಯು ಒಂದು ಟನ್ ಗೆ ಕಬ್ಬಗೆ ಬೆಲೆ ನಿಗದಿ ಮಾಡಿಲ್ಲ. ಈ ವಿಚಾರವನ್ನು ಮುಂದಿಟ್ಟುಕೊಂಡ ರೈತ ಸೇನೆ ಅಕ್ಟೋಬರ್ 10ರಂದು ರಾಯಬಾಗ ತಾಲೂಕಿನ ಹಾರೊಗೇರಿ ಕ್ರಾಸ್ ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಬ್ಬಿಣ ಬೆಲೆ ನಿಗದಿಯಾಗುವವರೆಗೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಪ್ರತಿಭಟನೆಯಲ್ಲಿ ತಿಳಿಸಿದರು. 3500 ಕಾರ್ಖಾನೆಯಿಂದ, 2000 ರೂ ಸರಕಾರದಿಂದ, ಒಟ್ಟು ಒಂದು ಕಟ್ ಕಬ್ಬಿಗೆ 5500 ರೂ ನಿಗದಿಯಾಗಬೇಕೆಂದು ರೈತರ ಆಗ್ರಹವಿದೆ. ಸರಕಾರ, ಜಿಲ್ಲಾಡಳಿತ ಕಿತ್ತೂರಿನ ಸ್ಥಳೀಯ ಶಾಸಕರು ಸೇರಿ ಅದೆ ತಾಲೂಕಿನ ಕುಳ್ಳೊಳ್ಳಿ ಗ್ರಾಮದ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಕಿತ್ತೂರು ಉತ್ಸವದಲ್ಲಿ ಸಂಗೊಳ್ಳಿ ರಾಯಣ್ಣ ನನ್ನ ಹಿಡಿದು ಕೊಟ್ಟ ಕುಟುಂಬದವರು ಕಿತ್ತೂರು ಉಸ್ತವಕ್ಕೆ ಅವಕಾಶ ನೀಡಬಾರದೆಂದು ಜಿಲ್ಲಾಡಳಿತಕ್ಕೆ ರೈತ ಸಂಘಟನೆ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ರೈತ ಸಂಘಟನೆ ರಾಜ್ಯಾಧ್ಯಕ್ಷ ಚೂನಪ್ಪಾ ಪೂಜೇರಿ, ರೈತ ಸಂಘಟನೆಯ ರಾಷ್ಟ್ರೀಯ ನಾಯಕ, ಪ್ರಕಾಶ್ ನಾಯಕ, ಕಿಶನ ನಂದಿ ಸೇರಿದಂತೆ ರೈತ ಸಂಘಟನೆಯ ಸೇರಿದಂತೆ ಇತರರು ಹಾಜರಿದ್ದರು.
