11/12/2025
IMG-20251007-WA0006

ಬೆಳಗಾವಿ-07:ಲಘು ಉದ್ಯೋಗ ಭಾರತಿ – ಕರ್ನಾಟಕ (ಬೆಳಗಾವಿ ಘಟಕ) ಮತ್ತು ಉದ್ಯಮ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಸರ್ಕಾರದ ಸಹಯೋಗದಿಂದ, ಭರತೇಶ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಒಂದುದಿನ ಇಂಕ್ಯುಬೇಷನ್ ಸೆಂಟರ್ ಜಾಗೃತಿ ಕಾರ್ಯಕ್ರಮವನ್ನು ನಾಳೆ, 8 ಅಕ್ಟೋಬರ್ 2025 ರಂದು ಆಯೋಜಿಸಲಾಗಿದೆ.

ಭವಿಷ್ಯದ ಉದ್ಯಮಿಗಳಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಇಂಕ್ಯುಬೇಷನ್ ಸೆಂಟರ್ ಕುರಿತು ಒಂದುದಿನದ ಜಾಗೃತಿ ಕಾರ್ಯಕ್ರಮ ಇದಾಗಿದೆ.

ಯುವ ಉದ್ಯಮಿಗಳು ಮತ್ತು ಕೈಗಾರಿಕಾ ಆಸಕ್ತರ ನಡುವೆ ಇಂಕ್ಯುಬೇಷನ್ ಸೆಂಟರ್‌ಗಳ ಮಹತ್ವ ತಿಳಿಸುವುದು, ನವೋದ್ಯಮಗಳಿಗೆ ಲಭ್ಯವಿರುವ ಸರ್ಕಾರದ ಸೌಲಭ್ಯಗಳು, ತಾಂತ್ರಿಕ ಸಹಾಯ ಮತ್ತು ಮಾರ್ಗದರ್ಶನದ ಬಗ್ಗೆ ಮಾಹಿತಿ ನೀಡುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ.

ಉದ್ಯಮಿ ಅಜಿತ ಪಾಟೀಲ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಭರತೇಶ ತಾಂತ್ರಿಕ ಸಂಸ್ಥೆಯ ಅಧ್ಯಕ್ಷ
ಶಶಾಂಕ ಲೆಂಗಡೆ, ಡಿಐಸಿ ಉಪ ನಿರ್ದೇಶಕ ಸತ್ಯನಾರಾಯಣ ಭಟ್, ಉದ್ಯಮಿ ಸಚಿನ ಸಬನಿಸ್ ಮತ್ತು ಬಾಹುಬಲಿ ರಾವನ್ನವರ ಉಪಸ್ಥಿತ ಇರಲಿದ್ದಾರೆ.

ಕಾರ್ಯಕ್ರಮದಲ್ಲಿ ಉದ್ಯಮ ತಜ್ಞರು, ಉದ್ಯಮ ಪ್ರಾರಂಭಿಸಲು ಇಚ್ಛಿಸುವ ಯುವಕರು ಮತ್ತು ಬೋಧಕವೃಂದದ ಸದಸ್ಯರು ಭಾಗವಹಿಸಲಿದ್ದಾರೆ.

error: Content is protected !!