ಬೈಲಹೊಂಗ-09:: ಅತಿವೃಷ್ಠಿಯಿಂದ ಜಿಲ್ಲೆಯ ರೈತರು ಕಂಗಾಲಾಗಿದ್ದು ಅವರ ನೇರವಿಗೆ ರಾಜ್ಯ ಸರ್ಕಾರ ಧಾವಿಸಿಬೇಕೆಂದು ವಿವಿಧ ಬೇಡಿಕೆಗಳನ್ನ ಒಳಗೊಂಡ ಮನವಿ ಪತ್ರವನ್ನು ರಾಜ್ಯ ರೈತ ಸಂಘ ಮತ್ತು ಕೂಲಿ ಕಾರ್ಮಿಕರ ಹಿತಾಸಕ್ತಿ ಸಂಘ ಹಾಗೂ ಪ್ರಗತಿಪ ರೈತರು ಉಪವಿಭಾಗಧಿಕಾರಿಗಳ ಮೂಲಕ,
ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ರವಾನಿಸಿದರು.
ಸಂಘದ ರಾಜ್ಯಾಧ್ಯಕ್ಷ ಮಹಾಂತೇಶ ಕಮತ ಮಾತನಾಡಿ,
ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾದರು ಬೆಳಗಾವಿ ಜಿಲ್ಲೆಯಲ್ಲಿ ವರ್ಷದ ವಾಡಿಕೆಗಿಂತ ನಾಲ್ಕು ಪಟ್ಟು ಹೆಚ್ಚು ಮಳೆ ಆಗಿದ್ದರಿಂದ ರೈತರ ಬೆಳೆಗಳಾದ , ಹೆಸರು, ಸೋಯಾಬೀನ ಹತ್ತಿ, ಉದ್ದು ಕಬ್ಬು ಮತ್ತು ತರಕಾರಿ ಬೆಳೆಗಳು ಸಂಪೂರ್ಣ ಹಾಳಾಗಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಖ್ಯಮಂತ್ರಿಗಳು ಸೋಮವಾರ ಸಭೆ ಸೇರಿ ಪರಿಹಾರಕ್ಕೆ ಆದೇಶಿಸಿದ್ದು ಸ್ವಾಗತ ಆದರೆ ಅದು ಹೇಳಿಕೆಯಾಗದೆ ತಕ್ಷಣ ಪರಿಹಾರ ವಿತರಿಸಬೇಕು. ಸಂಕಷ್ಟದಲ್ಲಿರುವ ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರೂಪಾಯಿ ಪರಿಹಾರ ನೀಡಬೇಕು. ಕೆಲ ರೈತರ ಅರ ಬರೆ ಬಂದ ಡ್ಯಾಮೆಜ್ ಹೆಸರು, ಸೋಯಾಬೀನ ಕಾಳುಗಳನ್ನು ವ್ಯಾಪಾರಗಾರರು ಅತ್ಯಂತ ಕನಿಷ್ಠ ದರಕ್ಕೆ ತಗೆದುಕೊಳ್ಳುತಿದ್ದಾರೆ. ತಕ್ಷಣ ಸರ್ಕಾರ ಖರೀದಿ ಕೇಂದ್ರ ತೆರೆದು ಯಾವುದೆ ಕಟ್ಟಳೆ ಹಾಕದೆ ಡ್ಯಾಮೇಜ್ ಹೆಸರು ಕಾಳು ಖರೀದಿಸಬೇಕು. ಬೆಳೆಹಾನಿಯಿಂದ ರೈತರು ಆತ್ಮಹತ್ಯೆ ದಾರಿ ಹಿಡಿಯುವ ಸಂದರ್ಭದಲ್ಲಿ ರೈತರ ಸಾಲ ವಸೂಲಾತಿಗಾಗಿ ಬ್ಯಾಂಕ್ ರವರ ಕಿರಕುಳ ಅಂತ್ಯವಾಗಬೇಕು. ರೈತರ ಬಲವಂತದ ಸಾಲ ವಸೂಲಾತಿ ಮಾಡದಂತೆ ರಾಷ್ಟ್ರೀಕೃತ, ಸಹಕಾರ ಮತ್ತು ಪ್ರಾದೇಶಿಕ ಹಾಗೂ ಖಾಸಗಿ ಬ್ಯಾಂಕುಗಳಿಗೆ ಆದೇಶಿಸಬೇಕು ಬಡ್ಡಿವ್ಯವಹಾರದಲ್ಲಿ ನಿರತರಾದವರಿಗೆ ಅಂಕುಶ ಹಾಕಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು
ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಮಾಜಿ ಎಪಿಎಂಸಿ ಅಧ್ಯಕ್ಷ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಅತಿವೃಷ್ಠಿಯಿಂದ ರೈತರ ಜಮೀನುಗಳ ಬದು ಹಾಳಾಗಿದ್ದು, ಕಸದಿಂದ ಜಮೀನು ತುಂಬಿ ಹೋಗಿವೆ. ಹಿಂಗಾರಿ ಬೆಳೆ ಬೆಳೆಯಲು ಜಮೀನು ಹದಗೊಳಿಸಲು ಹಣದ ಕೊರತೆ ಇದ್ದು ಸರ್ಕಾರ ಕೃಷಿ ಚಟುವಟಿಕೆಗೆ ನರೆಗಾ ಅಡಿ ಎಕರೆಗೆ 50ಕೃಷಿ ಕೂಲಿಕಾರ್ಮಿಕರನ್ನು ನೀಡಬೇಕು ಇದರಿಂದ ಕೂಲಿ ಕಾರ್ಮಿಕರಿಗೆ ಉದ್ಯೋಗದ ಭರವಸೆಯು ಸಿಗುತ್ತದೆ. ಕೃಷಿಗೆ ಉತ್ತೆಜನ ನೀಡುವದರೊಂದಿಗೆ ರೈತರ ಜೀವನಕ್ಕೆ ಆಸರೆ ಸಿಕ್ಕಂತಾಗುತ್ತದೆ. ಎಂದರು.
ಈ ಸಂದರ್ಭದಲ್ಲಿ ರೈತಮುಖಂಡರಾದ ಸುರೇಶ ಸಂಪಗಾಂವ, ಅಶೋಕ ಕಳಸಣ್ಣವರ, ಮುರಗೇಶ ಗೂಂಡ್ಲೂರ, ಬಸವರಾಜ ದುಗ್ಗಾಣಿ, ಉಳವಪ್ಪ ಕಲಭಾಂವಿ, ರಾಯಣ್ಣ ಮಾವಿನಕಟ್ಟಿ, ಮಡಿವಾಳಪ್ಪ ಚಿಕ್ಕೊಪ್ಪ, ಮಹಾಂತೇಶ ವಿವೇಕಿ, ಪರುಶರಾಮ ರಾಯಭಾಗ ಮುಂತಾದವರು ಉಪಸ್ಥಿತರಿದ್ದರು.
