ಬೆಳಗಾವಿ-02*ಡಾ. ಅಂಜಲಿತಾಯಿ ಹೇಮಂತ್ ನಿಂಬಾಳ್ಕರ್ ಅವರು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಬೆನಕನಹಳ್ಳಿ ಗ್ರಾಮದಲ್ಲಿಯ ಧರ್ಮವೀರ್ ಸಂಭಾಜಿ ಗಣೇಶೋತ್ಸವ ಮಂಡಳದ ಶ್ರೀ ಗಣಪತಿ ದರ್ಶನ ಪಡೆದರು*..
ಮೊನ್ನೆ ಬೆನಕನಹಳ್ಳಿ ಗ್ರಾಮದಲ್ಲಿ (ಬೆಳಗಾವಿ ಗ್ರಾಮೀಣ ಕ್ಷೇತ್ರ) ಧರ್ಮವೀರ್ ಸಂಭಾಜಿ ಗಣೇಶೋತ್ಸವ ಮಂಡಳದ ಶ್ರೀ ಗಣೇಶನ ಆರತಿಯನ್ನು ಮಾನ್ಯ ಡಾ ಅಂಜಲಿತಾಯಿ ಅವರ ಹಸ್ತದಿಂದ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಂಡಳದ ಕಾರ್ಯಕರ್ತರು ಹಾಗೂ ಗ್ರಾಮದ ಗುರು ಹಿರಿಯರು, ಕಾರ್ಯಕರ್ತರು, ನಾರಾಯಣ್ ಕಾಲಕುಂದ್ರಿ, ಮತ್ತು ಸುರೇಶ್ ರಾಜೂರ್ಕರ್ ಮತ್ತು ಸುನಿಲ್ ಬುವಾನ್ ಹಾಗೂ 2023 ರ ವಿಧಾನಸಭೆಯ ಅಭ್ಯರ್ಥಿ ಶ್ರೀ ಆರ್ ಎಂ ಚೌಗುಲೆ ಅವರು ಹಾಗೂ ಗ್ರಾಮಸ್ಥರು ಮತ್ತು ಗ್ರಾಮದ ಮಹಿಳೆಯರು ಎಲ್ಲರೂ ಉಪಸ್ಥಿತರಿದ್ದರು.
ಬೇನಕನಹಳ್ಳಿ ಗ್ರಾಮದ ಶ್ರೀ ಗಣೇಶನ ಆಶೀರ್ವಾದದ ನಂತರ ಮಾನ್ಯ ಡಾ ಅಂಜಲಿತಾಯಿ ಅವರು *ಸುಳಗಾ* ಗ್ರಾಮದ ದಲ್ಲಿರುವ ಡಾ ಅಂಜಲಿತಾಯಿ ಅವರ ಅಭಿಮಾನಿಗಳ ಮನೆಗಳಿಗೆ ಹೋಗಿ ಅವರನ್ನು ಭೇಟಿಯಾದರು.
