ಕೌಜಲಗಿ-31: ಪಟ್ಟಣದ ಪ್ರೊ. ಕೆ ಜಿ ಕುಂದಣಗಾರ ಗಜಾನನ ಕಮಿಟಿ ವತಿಯಿಂದ ಪ್ರತಿಷ್ಠಾಪಿಸಲಾದ ಗಣಪತಿ ಉತ್ಸವಕ್ಕೆ ಸಂಗ್ಯಾ ಬಾಳ್ಯಾ ಸಣ್ಣಾಟ ಪ್ರದರ್ಶನ ನಡೆಯಿತು.
ರಾತ್ರಿಯ ಬದಲಾಗಿ ಹಗಲಿನಲ್ಲಿ ಈ ಸಂಗ್ಯಾ ಬಾಳ್ಯಾ ಸಣ್ಣಾಟವನ್ನು ಇಲ್ಲಿಯ ಯುವಕರು ಪ್ರದರ್ಶಿಸಿದರು. ಒಂದು ಹೆಜ್ಜೆ ಕಾಲಿಡಲು ಸಾಧ್ಯವಾಗದಷ್ಟು ಪ್ರೇಕ್ಷಕರು ಸಣ್ಣಾಟವನ್ನು ನೋಡಲು ನೆರೆದಿದ್ದರು.
ಪಿಕೆಪಿಎಸ್ ಅಧ್ಯಕ್ಷ ವೆಂಕಟೇಶ್ ದಳವಾಯಿ, ರಮೇಶ ಗಡ್ಡೇದಾರ, ಕರೆಪ್ಪ ಡೋಣಿ, ಬಾಳಪ್ಪ ಹುಂಡರದ ಸೇರಿದಂತೆ ಗಜಾನನ ಕಮಿಟಿಯವರು ಈ ಸಣ್ಣಾಟವನ್ನು ಆಯೋಜಿಸಿದ್ದರು.
ಸಣ್ಣಾಟ ರಂಗಭೂಮಿ ಹಿರಿಯ ಕಲಾವಿದ ಶಿವಪುತ್ರಪ್ಪ ಹಳ್ಳೂರ ಸಂಗ್ಯಾ ಬಾಳ್ಯಾ ಸಣ್ಣಾಟವನ್ನು ನಿರ್ದೇಶಿಸಿದ್ದರು. ಅಯ್ಯಪ್ಪ ದಳವಾಯಿ ( ಸಂಗ್ಯಾ), ಕೆಂಚಪ್ಪ ಬಳೋಲದಾರ ( ಬಾಳ್ಯಾ ), ಅಶೋಕ ಜೊತೆನ್ನವರ ( ಈರಪ್ಪ ), ಹನುಮಂತ ಡೋಣಿ (ವಿರೂಪಾಕ್ಷಿ), ಸಿದ್ದಪ್ಪ ಬಳೋಲದಾರ ( ಬಸವಂತ ), ಲಚ್ಚಪ್ಪ ಜಕ್ಕಣ್ಣವರ ( ಪೂಜಾರಿ), ಬಸು ಸಣ್ಣಕ್ಕಿ ( ಶೇಡಜಿ), ಮಲ್ಲವ್ವ ಸಾಲಹಳ್ಳಿ ( ಗಂಗಾ) ಮತ್ತು ಲಕ್ಷ್ಮೀಬಾಯಿ ಸಾಲಹಳ್ಳಿ ( ಪರಮ್ಮ) ಪಾತ್ರಗಳಲ್ಲಿ ಅಭಿನಯಿಸಿದರು. ಮಹದೇವಪ್ಪ ಕಂಬಾರ ಹಾರ್ಮೋನಿಯಂ ವಾದಕರಾಗಿ, ರಮೇಶ ಪಾತ್ರೋಟ ಡಪ್ಪು ವಾದಕರಾಗಿ ಮತ್ತು ಕಲ್ಲಯ್ಯಸ್ವಾಮಿ ಹಿರೇಮಠ ಮುಂತಾದವರು ತಾಳವಾದಕರಾಗಿ ಕಲಾಸೇವೆ ಸಲ್ಲಿಸಿದರು.
ಹಗಲಿನಲ್ಲಿ ಪ್ರದರ್ಶನಗೊಂಡ ಈ ಸಣ್ಣಾಟ ನೋಡಲು ಮಹಿಳೆಯರು, ಮಕ್ಕಳು ಆಗಮಿಸಿ ಸಂಭ್ರಮಿಸಿದ್ದು ಕಾರ್ಯಕ್ರಮದ ವೈಶಿಷ್ಟವಾಗಿತ್ತು.
ಇದೇ ಸಂದರ್ಭದಲ್ಲಿ ಊರಿನ ಹಲವಾರು ಗಣ್ಯರನ್ನು ಗಜಾನನ ಕಮಿಟಿ ವತಿಯಿಂದ ಸತ್ಕರಿಸಲಾಯಿತು.
