ಬೆಳಗಾವಿ-16:ಅಂತರಾಷ್ಟ್ರೀಯ ವೈದ್ಯ ವಿಜ್ಞಾನಿ, তো. ಬಿ.ಸಿ.ರಾಯ್ ಪ್ರಶಸ್ತಿ ವಿಭೂಷಿತ স্তে. ಸ.ಜ.ನಾಗಲೋಟಿಮಠ ಮೂರ್ತಿ ಅನಾವರಣ ಸಮಾರಂಭವು ಬೆಳಗಾವಿ ಬಸವ ಕಾಲನಿಯಲ್ಲಿ ದಿನಾಂಕ ೧೮-೮-೨೦೨೫ ಸೋಮವಾರ ೧೧ ಗಂಟೆಗೆ ಜರುಗುವುದು. ಪೂಜ್ಯ ಶ್ರೀ ಮ.ನಿ.ಪ್ರ. ಗುರುಸಿದ್ಧ ಮಹಾಸ್ವಾಮಿಗಳು ಕಾರಂಜಿಮಠ, ಬೆಳಗಾವಿ ಪೂಜ್ಯ ಶ್ರೀ ಮ.ನಿ.ಪ್ರ. ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ನಾಗನೂರು ರುದ್ರಾಕ್ಷಿಮಠ, ಬೆಳಗಾವಿ ಪೂಜ್ಯ ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಗುರುಶಾಂತೇಶ್ವರ ಸಂಸ್ಥಾನ ಹಿರೇಮಠ, ಹುಕ್ಕೇರಿ-ಬೆಳಗಾವಿ ಇವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು. ಮಾನ್ಯಶ್ರೀ ಆಸೀಫ್ (ರಾಜು) ಸೇರ್ ಜನಪ್ರಿಯ ಶಾಸಕರು, ಬೆಳಗಾವಿ (ಉತ್ತರ) ಇವರು ಅಧ್ಯಕ್ಷತೆ ವಹಿಸುವರು. ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ್, ಸಂಸದರಾದ ಜಗದೀಶ ಶೆಟ್ಟರ, ಶಾಸಕ ಅಭಯ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರರಾದ ಮಾನ್ಯ ಶ್ರೀ ಮಂಗೇಶ ಪವಾರ, ಮಹಾಂತೇಶ ಕವಟಗಿಮಠ, ಬಸಪ್ಪ ಚಿಕ್ಕಲದಿನ್ನಿ, ಅನಿಲ ಬೆನಕೆ, ಡಾ. ರವಿ ಪಾಟೀಲ, ಮಹಾಂತೇಶ ವಕ್ಕುಂದ, ಶ್ರೀಮತಿ ರೇಖಾ ಮೋಹನ ಹೂಗಾರ, ಶ್ರೀಮತಿ ರೂಪಾ ಸಂತೋಷ ಚಿಕ್ಕಲದಿನ್ನಿ ಅತಿಥಿಗಳಾಗಿ ಆಗಮಿಸುವರು. ಶ್ರೀಮತಿ ಶಾಂತಾತಾಯಿ ಸ. ನಾಗಲೋಟಿಮಠ, ಶ್ರೀ ಕೆ.ಆಯ್. ಗಾಣಿಗೇರ, ಕು. ಇಂಪನಾ ಸಂಜಯ ನಾಗಲೋಟಿಮಠ, ಶ್ರೀಕಾಂತ ಕದಮ್ ಅವರು ಪಾಲ್ಗೊಂಳುವರು.
