12/12/2025

ಬೆಳಗಾವಿ-10: ಶ್ರವಣದೋಷವುಳ್ಳ ಮಕ್ಕಳ ಸರಕಾರಿ ಶಾಲೆ ವಿದ್ಯಾಗಿರಿ ಬೆಳಗಾವಿ ಶಾಲೆಯಲ್ಲಿ ಖಾಲಿ ಇರುವ-3 ಪದವೀಧರ ಸಹಾಯಕ ಶಿಕ್ಷಕರನ್ನು (ಪ್ರೌಢಶಾಲೆ ವಿಭಾಗಕ್ಕೆ) ಅಂಶಕಾಲಿಕವಾಗಿ ಮಾಸಿಕ ಗೌರವಧನ 6000 ದಂತೆ ಮತ್ತು ಮೂರು ಪದವಿಪೂರ್ವ ಸಹಾಯಕ ಶಿಕ್ಷಕರನ್ನು (ಪ್ರಾಥಮಿಕ ವಿಭಾಗಕ್ಕೆ) ಅಂಶಕಾಲಿಕವಾಗಿ ಮಾಸಿಕ ಗೌರವಧನ ರೂ: 5,000 ರಂತೆ ಗೌರವಧನ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಮತ್ತೊಮ್ಮೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರಾಥಮಿಕ ವಿಭಾಗಕ್ಕೆ ವಿಶೇಷ ಶಿಕ್ಷಣದಲ್ಲಿ ಡಿಇಡಿ(ಹೆಚ್ ಐ) ಹಾಗೂ ಪ್ರೌಢ ಶಾಲಾ ವಿಭಾಗಕ್ಕೆ ಬಿ ಎಡ್(ಹೆಚ್ ಅಯ್) ವಿದ್ಯಾರ್ಹತೆ ಮತ್ತು ಆರ್ ಸಿ ಐ ಪ್ರಮಾಣ ಪತ್ರ ಹೊಂದಿರುವವರಿಗೆ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು.

ಆಸಕ್ತರು ದಿನಾಂಕ: 14-08-2025 ರ ಒಳಗಾಗಿ ಅಧೀಕ್ಷಕರು ಶ್ರವಣದೋಷವುಳ್ಳ ಮಕ್ಕಳ ಸರಕಾರಿ ಶಾಲೆ ಅಜಮ್ ನಗರ, ವಿದ್ಯಾಗಿರಿ ಬೆಳಗಾವಿ-590010 ಇವರಿಗೆ ಅಗತ್ಯ ದೃಢೀಕೃತ ದಾಖಲಾತಿಗಳೊಂದಿಗೆ ಖುದ್ದಾಗಿ ಭೇಟಿ ನೀಡಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:-6361636212 ಅಥವಾ 9663711081 ಸಂಪರ್ಕಿಸಬಹುದಾಗಿದೆ. ಎಂದು ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!