ಬೆಳಗಾವಿ-10: ಶ್ರೀ ರಾಘವೇಂದ್ರ ಸ್ವಾಮಿಗಳ ನವ ವೃಂದಾವನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 354 ನೇ ಆರಾಧನಾ ಮಹೋತ್ಸವ ಈ ವರ್ಷವೂ ವಿಜೃಂಭಣೆಯಿಂದ ನಡೆಯಲಿದೆ. ಸ್ಥಳ ನವ ವೃಂದಾವನ ಶ್ರೀ ರಾಘವೇಂದ್ರ ಸ್ವಾಮಿ ಮಠ ರೈಲ್ವೆ ಓವರ್ ಬ್ರಿಜ್ ಹತ್ತಿರ ಗೋವಾ ವೇಸ್ ಬೆಳಗಾವಿ
ಇಂದಿನಿಂದ ಆಗಸ್ಟ್ 10,11,12 ರಂದು ವಿಶೇಷ ಪೂಜೆ, ಮಹಾಪಂಚಾಮೃತ, ವಿಶೇಷ ಅಲಂಕಾರ, ಭಜನೆ, ಪಲ್ಲಕ್ಕಿ ಉತ್ಸವ, ಅಷ್ಟೋತ್ತರ, ತುಳಸಿ ಅರ್ಚನೆ, ಪ್ರವಚನ,ಮಹಾಮಂಗಳಾರತಿ ಮಹಾಪ್ರಸಾದ ಜರುಗುವುದು.
10ರಂದು ಆಗಸ್ಟ್ ಪೂರ್ವಾರಾಧನೆ, 11 ಮಧ್ಯಾರಾಧನೆ, 12ರಂದು ಆಗಸ್ಟ್ ಉತ್ತರಾರಾಧನೆ ( ಸತ್ಯನಾರಾಯಣ ಪೂಜೆ)ನೆರವೇರುತ್ತದೆ.
ಸದ್ಭಕ್ತರು ಮೂರು ದಿನಗಳ ಕಾಲ ನಡೆಯಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀ ರಾಯರ ಅನುಗ್ರಹಕ್ಕೆ ಪಾತ್ರರಾಗುವಂತೆ ನಿವೇದನೆ.
