ಬೆಳಗಾವಿ-10* ಬಹುದಿನಗಳಿಂದ ಬೇಡಿಕೆಯಾದ ಬೆಳಗಾವಿ ಬೆಂಗಳೂರು ವಂದೇ ಭಾರತ ರೈಲು ಆಗಸ್ಟ್ 10 ರಂದು ಅಂದರೆ (ಇಂದಿನಿಂದ) ಪ್ರಾರಂಭವಾಗಲಿದೆ. ಪ್ರಧಾನಿ ರಾಜ್ಯದ 3 ರೈಲುಗಳಿಗೆ ಚಾಲನೆ ನೀಡುತ್ತಿದ್ದು ಅದರಲ್ಲಿ ಬೆಂಗಳೂರು ಬೆಳಗಾವಿ ವಂದೇ ಭಾರತ ರೈಲಿಗೆ ಚಾಲನೆ ಸಿಗಲಿದೆ.

ಮುಂಜಾನೆ 11 ಘಂಟೆಗೆ ಬಿಟ್ಟು ಸಂಜೆ 8 ಘಂಟೆಗೆ ಬೆಳಗಾವಿ ತಲುಪಲಿದೆ ಮತ್ತು ನಾನು ಎಮ್ ಪಿ ಆಗಿ ಪ್ರಥಮ ಭಾರಿಗೆ ಪ್ರಧಾನಿ ಮೋದಿಜೀ ಅವರನ್ನು ಬೇಟಿ ಆಗಿ ಬೆಳಗಾವಿ ಅಭಿವೃದ್ಧಿ ಬಗ್ಗೆ, ರೈಲು ಯೋಜನೆ ಬಗ್ಗೆ ಚರ್ಚಿಸಿದ್ದೆ, ಅವರು ರೈಲು ಮಂತ್ರಿಗಳಿಗೆ ಹೇಳಿ ಮೇ 8 ರಂದು ಅನುಮೋದನೆ ದೊರಕಿತ್ತು. ಅದು ಈಗ ನಾಳೆಯಿಂದ ಕಾರ್ಯರೂಪಕ್ಕೆ ಬರ್ತಾ ಇದ್ದು ಇದ್ದಕ್ಕೆ ಕಾರಣ ದೇಶದ ಪ್ರಧಾನಿ ಮೋದಿಜೀ, ವಿ ಸೋಮಣ್ಣ, ಪ್ರಹ್ಲಾದ ಜೋಶಿ, ಶಾಸಕರಾದ ಅಭಯ ಪಾಟೀಲ, ಮಾಜಿ ಸಂಸದೆ ಮಂಗಳ ಅಂಗಡಿ, ಅನಿಲ ಬೆನಕೆ, ಸಂಜಯ ಪಾಟೀಲ, ಬಿಜೆಪಿ ಪದಾಧಿಕಾರಿಗಳು ಹಾಗೂ ನಾನು ಸತತ ಸಂಪರ್ಕದಿಂದ ಅನುಷ್ಠಾನವಾಗಿದೆ ಎಂದರು. ಪುಣಾ ಬೆಳಗಾವಿ ವಂದೇ ಭಾರತ ವಾರಕ್ಕೆ ಮೂರು ಬರೀ ಬರುತಿದ್ದು, ಸವದತ್ತಿ ಯಲ್ಲಮ್ಮ ತೆರಳಲು ಮತ್ತೊಮ್ಮೆ ಸರ್ವೇ ಮಾಡಲು ಪ್ರಯತ್ನ ಮಾಡಿ ಕೋಟ್ಯಂತರ ಜನರು ಬರುತ್ತಾರೆ ಎಂದು ವರದಿ ಕೊಡವ ಕೆಲಸ ಮಾಡುತ್ತೇವೆ. ಬೆಳಗಾವಿ ಕಿತ್ತೂರು ಧಾರವಾಡ ರೈಲು ಮಾರ್ಗ ನಿರ್ಮಾಣ 8 ತಿಂಗಳಲ್ಲಿ ಚಾಲನೆ ಸಿಗಲಿದೆ, ಪಾತ್ರಕಾಗೋಷ್ಟಿಯಲ್ಲಿ ಮಾಜಿ ಸಂಸದೆ ಮಂಗಳಾ ಅಂಗಡಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷಗೌಡ ಪಾಟೀಲ, ಮಹಾನಗರ ಅಧ್ಯಕ್ಷ ಗೀತಾ ಸುತಾರ, ಡಾ. ರವಿ ಪಾಟೀಲ,ಮಲ್ಲಿಕಾರ್ಜುನ ಮದಮ್ಮನವರ,ಜಿಲ್ಲಾ ಮಾಧ್ಯಮ ವಕ್ತಾರ ಸಚಿನ್ ಕಡಿ, ಹಣಮಂತ ಕೊಂಗಾಲಿ,ರಾಜಶೇಖರ ದೋಣಿ, ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
