ಬೆಳಗಾವಿ-01:ಭೂಪಾಲದಲ್ಲಿ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶಾಂತಯ್ಯ ಚರಂತಿಮಠ ಅವರು ಇಂದು ತಮ್ಮ ಧರ್ಮಪತ್ನಿ ಶಶಿಕಲಾ ಶಾಂತಯ್ಯ ಚರಂತಿಮಠ ಅವರಿಗೆ ಮಕ್ಕಳಾದ ಕು. ಅಶ್ವಿನಿ ಶಾಂತಯ್ಯ ಚರಂತಿಮಠ ಅವರಿಗೆ ಕು. ಕಾವೇರಿ ಶಾಂತಯ್ಯ ಚರಂತಿಮಠ ಅವರಿಗೆ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರಿಂದ ಶಿವಾದಿಕ್ಷೆಯನ್ನು ಅನುಗ್ರಹಿಸಿ ಸಿದ್ಧಾಂತ ಶಿಖಾಮಣಿಯ ಗ್ರಂಥವನ್ನು ನೀಡಿ ಪಠಣ ಮಾಡಲು ಹಚ್ಚಿರುವ ದೇಶ ಪ್ರೇಮಿ ಮತ್ತು ಧರ್ಮ ಪ್ರೇಮಿ ಶಾಂತಯ್ಯ ಎಂದೇ ಹೇಳಬಹುದು.
ದೇಶವನ್ನು ರಕ್ಷಿಸಬೇಕಾಗಿದ್ದು ಎಂದರೆ ಧರ್ಮವಂತವರಾಗಬೇಕು. ಅದಕ್ಕಾಗಿ ದೇಶದಲ್ಲಿ ಇರುವವರು ಎಲ್ಲರೂ ಕೂಡ ತಮ್ಮ ತಮ್ಮ ಧರ್ಮವನ್ನು ತಪ್ಪದೆ ಪಾಲಿಸಬೇಕು. ಅಖಿಲ ಭಾರತ ವೀರಶೈವ ಶಿವಾಚಾರ್ಯ ಸoಸ್ಥೆಯ ಉಪಾಧ್ಯಕ್ಷರಾಗಿ, ಸಮಾಜಮುಖಿ ಕಾರ್ಯವನ್ನು ಮಾಡುತ್ತಿರುವ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ನಮಗೆ ಗುರುಗಳು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯುತಿದ್ದೇವೆ. ಇವತ್ತು ಮಕ್ಕಳಿಗೆ ಮೊಬೈಲ್ ಕೊಡುತ್ತೇವೆ. ಅವರು ಬೇಡಿದ್ದನ್ನೆಲ್ಲ ಕೊಡಿಸುತ್ತೇವೆ. ಆದರೆ ಧರ್ಮವನ್ನು ಕೊಡುವುದರಲ್ಲಿ ವಿಫಲವಾಗುತ್ತೇವೆ. ಇದು ಆಗಬಾರದು ಎಂದು ಗುರುಗಳು ಆಜ್ಞೆ ಮಾಡಿರುವ ಪ್ರಯುಕ್ತ ನಾನು ಇಂದು ನಮ್ಮ ಧರ್ಮ ಪತ್ನಿಗೆ ಮತ್ತು ನಮ್ಮ ಮಕ್ಕಳಿಗೆ ಶಿವದೀಕ್ಷೆಯನ್ನು ನೀಡಿ ಗುರುಗಳಿಂದ ಲಿಂಗ ಪೂಜಾ ವಿಧಾನವನ್ನು ಪಡೆದುಕೊಂಡಿದ್ದೇವೆ. ನಾನು ಈಗಾಗಲೇ ಐಯಾಚಾರವನ್ನು ಪಡೆದಿದ್ದೇನೆ. ದೇಶಭಕ್ತ ನಾಗಿ ದೇಶಸೇವೆಯನ್ನು ಮಾಡಲು ಖುಷಿಯಾಗುತ್ತದೆ. ಹಾಗೆಯೇ ಧರ್ಮವನ್ನು ಅನುಸರಿಸಲು ತುಂಬಾ ಸಂತೋಷ ವಾಗುತ್ತಿದೆ ಎಂದರು. ಅವರು ಇಲ್ಲಿಯ ಲಕ್ಷ್ಮೀ ಟೆಕ್ ಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಒಂದು ತಿಂಗಳ ಶ್ರಾವಣ ಮಾಸದಲ್ಲಿ ಜರುಗುವ ರುದ್ರಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿವಾದೀಕ್ಷೆ ಪಡೆದರು.
ಈ ಸಂದರ್ಭದಲ್ಲಿ ಶಿವದೀಕ್ಷೆಯನ್ನು ಅನುಗ್ರಹಿಸಿದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ನಾವು ಇವತ್ತು ನಮ್ಮ ನಮ್ಮ ಧರ್ಮಗಳ ಹೆಸರನ್ನು ಹೇಳುತ್ತಾ ಕುಳಿತುಕೊಂಡಿದ್ದೇವೆ ಅಷ್ಟೇ. ಆದರೆ ಅಷ್ಟಾವರಣ ಷಟಸ್ಥಲ ಪಂಚಾಚಾರ್ಯಗಳನ್ನು ಅಳವಡಿಸಿಕೊಂಡು ನಿತ್ಯ ಲಿಂಗಪೂಜೆ ಮಾಡುವುದಲ್ಲಿ ವಿಫಲವಾಗಿದ್ದೇವೆ. ನಮ್ಮ ಮಕ್ಕಳಿಗೆ ಮೊದಲು ಸಂಸ್ಕಾರವನ್ನು ಕೊಡುವುದು ಅವಶ್ಯ ಎಂದು ಶ್ರೀಗಳು ನುಡಿದರು.
ಇದೇ ಸಂದರ್ಭದಲ್ಲಿ ಮಹಾಂತೇಶ ಶಾಸ್ತ್ರಿಗಳು, ಆಸ್ಟ್ರೇಲಿಯ ದೇಶದ ಶಿಡ್ನಿ ರಾಜ್ಯದಲ್ಲಿರುವ ವಿಜಯಕುಮಾರ ಹಲಗಲಿ ಅವರ ಮಕ್ಕಳಾದ ಕು. ನೇತ್ರಾವತಿ ಹಾಗೂ ನಿರಂಜನ ಇವರ ಹುಟ್ಟು ಹಬ್ಬದ ನಿಮಿತ್ತ ದೀಕ್ಷಾ ಕಾರ್ಯಕ್ರಮದಲ್ಲಿ ಪ್ರಸಾದ ಸೇವೆಯನ್ನು ನೆರವೇರಿಸಿದರು.
