ಬೆಳಗಾವಿ-29: ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಅನುದಾನಿತ ಯೋಜನೆ ರೂಪಿಸಲು ಪ್ರಸ್ತಾವನೆ ತಯಾರಿಸಲು ತಂಡವು ಜಿಲ್ಲೆಗೆ ಆಗಮಿಸಿದ್ದು, ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಲ್ಲಿನ ಸವಾಲುಗಳು, ತೋಟಗಾರಿಕೆ ಬೆಳೆಗಳನ್ನು ಪ್ರೋತ್ಸಾಹಿಸುವ ಕುರಿತು ಯೋಜನೆಗಳು ಮಾರುಕಟ್ಟೆ, ವ್ಯಾಪಾರ ಸಂಪರ್ಕ ಮತ್ತು ಮೌಲ್ಯ ವರ್ಧಿತ ಸಂಸ್ಕರಣಾ ಘಟಕಗಳನ್ನು ಹೆಚ್ಚಿಸುವ ಕುರಿತಾಗಿ ರೈತರು, ರೈತ ಉತ್ಪಾದಕ ಸಂಸ್ಥೆಗಳು ಮತ್ತು ರೈತ ಸ್ವಸಹಾಯಕ ಗುಂಪುಗಳು ಎದುರಿಸುತ್ತಿರುವ ಮೌಲ್ಯ ಸರಪಳಿಯಾದ್ಯಂತ ಸವಾಲುಗಳು ಕುರಿತಾಗಿ ಸಂವಾದ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಅವರು ತಿಳಿಸಿದರು.
ನಗರದ ಜಿಪಂ ಸಭಾಂಗಣ ಮಂಗಳವಾರ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಅನುದಾನಿತ ಯೋಜನೆ ರೂಪಿಸಲು ಪ್ರಸ್ತಾವನೆಯನ್ನು ತಯಾರಿಸುವ ಕುರಿತು ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ತೋಟಗಾರಿಕೆ ಬೆಳೆಗಳ ಉತ್ಪಾದನೆ ರೈತರ ಆದಾಯದಲ್ಲಿ ದ್ವಿಗುಣಗೊಳಿಸುವುದು ಮೌಲ್ಯ ಸರಪಳಿಯಲ್ಲಿನ ಸವಾಲುಗಳು ಮತ್ತು ಅವುಗಳ ಬಗ್ಗೆ ಸಹಯೋಗ ಮತ್ತು ಪ್ರತಿಕ್ರಿಯೆ ಮೂಲಕ ರೂಪಾಂತರ ಚಾಲನೆ ಮಾಡುವಲ್ಲಿ ಸಾರ್ವಜನಿಕ, ಖಾಸಗಿ ಸಹ ಭಾಗಿತ್ವದ ಪಾತ್ರಗಳ ಮಹತ್ವದಾಗಿದೆ ಎಂದರು.
ಕೃಷಿ ಮತ್ತು ನೈಸರ್ಗಿಕ ಸಂಪನ್ಮೂಲ ತಜ್ಞ ರಾಘವೇಂದ್ರ ನಡುವಿನಮನಿ, ಕೃಷಿ ವ್ಯವಹಾರ ತಜ್ಞ ಮತ್ತು ಸಿಬ್ಬಂದಿ ಸಲಹೆಗಾರ ಮೇಘನಾ ಪಾಂಡೆ, ಗ್ರಾಮೀಣ ಹಣಕಾಸು ತಜ್ಞ ಅಲೋಕ ಕುಮಾರ ಸಿಂಘ, ರಾಜ್ಯ ಕೃಷಿ ಇಲಾಖೆ-ಯೋಜನೆ ಮೊನಪ್ಪ, ಬೆಳಗಾವಿ ವಿಭಾಗ ತೋಟಗಾರಿಕೆ ಜಂಟಿ ನಿರ್ದೇಶಕ ಐ.ಕೆ ದೊಡ್ಡಮನಿ, ಧಾರವಾಡ ತೋಟಗಾರಿಕೆ ಉಪನಿರ್ದೇಶಕ ಕಾಶಿನಾಥ ಭದ್ರನ್ನವರ, ಮತ್ತು ಬೆಳಗಾವಿ ತೋಟಗಾರಿಕೆ ಉಪನಿರ್ದೇಶಕ ಮಾಹಾಂತೇಶ ಮುರಗೋಡ ಹಾಗೂ ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಯ ಪ್ರಗತಿಪರ ರೈತರು, ರೈತ ಉತ್ಪಾದಕ ಸಂಘಗಳ ಪ್ರತಿನಿಧಿಗಳು, ಲೀಡ್ ಬ್ಯಾಂಕ್ ಮ್ಯಾನೇಜರ್, ನಬಾರ್ಡ್ ಸಂಸ್ಥೆಯ ಮುಖ್ಯಸ್ಥರು, ಅಗ್ಗಮಾರ್ಕ್ ಸಂಸ್ಥೆಯ ಮುಖ್ಯಸ್ಥರು ಮತ್ತಿತರರು ಹಾಜರಿದ್ದರು.
