ಬೈಲಹೊಂಗಲ-24: ಮಲಪ್ರಭಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಪ್ರತಿವರ್ಷ ಜು26ರಂದು ಆಚರಿಸಿಸುವ ಭಾರತೀಯ ಯೋಧರ ಪರಾಕ್ರಮದ 26ನೇ ವರ್ಷದ “ಕಾರ್ಗಿಲ್ ವಿಜಯ ದಿವಸ್” ಕಾರ್ಯಕ್ರಮವನ್ನು ಶನಿವಾರ 26 ರಂದು ವೀರರಾಣಿ ಕಿತ್ತೂರು ಚನ್ನಮ್ಮನವರ ಐಕ್ಯ ಸ್ಥಳದ ಸಮೀಪದಲ್ಲಿರುವ ಗಣಾಚಾರಿ ಶಿಕ್ಷಣ ಸಂಸ್ಥೆಯಲ್ಲಿ ಮುಂಜಾನೆ10ಘಂಟೆಗೆ ಹಮ್ಮಿಕೊಳ್ಳಲಾಗಿದ್ದು ಮುಖ್ಯ ಅತಿಥಿಗಳಾಗಿ ರಾಜ್ಯಸಭಾ ಸದಸ್ಯ ಸಂಸದ ಈರಣ್ಣ ಕಡಾಡಿ ಆಗಮಿಸಲಿದ್ದಾರೆ. ಡಾ.ಸಿ.ಬಿ.ಗಣಾಚಾರಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಹಾಗೂ ಮಾಜಿ ಯೋಧರು, ರಜೆಯ ಮೇಲಿರುವ ರಕ್ಷಣಾ ಪಡೆಯ ಯೋಧರು, ವಿದ್ಯಾರ್ಥಿಗಳು ಹಾಗೂ ದೇಶಾಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ಆಯೋಜಕರು ತಿಳಿಸಿದ್ದಾರೆ.
