ಬೈಲಹೊಂಗಲ್ ಹಾಗೂ ಸವದತ್ತಿ-19 : ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ರವರು ಶನಿವಾರದಂದು ಬೈಲಹೊಂಗಲ್ ತಾಲೂಕಿನ ನೇಸರಗಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗಳ ಸ್ಥಳ ವೀಕ್ಷಣೆ ಮಾಡಿದರು ಮತ್ತು ಓ ಹೆಚ್ ಟಿ (OHT-Over Head Tank) ಸ್ವಚ್ಛತೆ ಬಗ್ಗೆ ಮತ್ತು ಸ್ವಚ್ಛಮಾಡಿದ ದಿನಾಂಕ ವನ್ನು ಓ ಹೆಚ್ ಟಿ ಮೇಲೆ ಬರಿಯಬೇಕು ಎಂದು ಮುಖ್ಯ ಕಾರ್ಯನಿರ್ವಾಹ ಅಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಂತರ ಕಾರ್ಯಾತ್ಮಕ ನಳ ಸಂಪರ್ಕ ಕುರಿತು ಸ್ಥಳೀಯ ಫಲಾನುಭವಿಗಳ ಜೊತೆ ಚರ್ಚೆಮಾಡಿ ಕಾರ್ಯತ್ಮಕ ನಳ ಸಂಪರ್ಕ ಬಗ್ಗೆ ರೇಖಾ ನಕ್ಷೆ ಮೂಲಕ ಮಾಹಿತಿ ಪಡೆದುಕೊಂಡರು. ನಂತರ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಮಾಡಿದರು.
ಸಂಜೀವಿನಿ – ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನದ ಅಡಿಯಲ್ಲಿ ರಚನೆಯಾದ ರಾಣಿ ಚನ್ನಮ್ಮ ಬೈಲಹೊಂಗಲ ಮಹಿಳಾ ಕಿಸಾನ ಉತ್ಪಾದಕರು ಕಂಪನಿ ನೇಸರಗಿಗೆ ಮಾನ್ಯರು ಬೇಟಿ ನೀಡಿದರು. ಕಂಪನಿಯ ಮಹಿಳಾ ಅಧ್ಯಕ್ಷರು ಮಾನ್ಯರೊಂದಿಗೆ ಮಾತನಾಡುತ್ತಾ ಕಂಪನಿಯು 1000 ರೈತ ಮಹಿಳೆಯಿಂದ ರೂ.1500 ಗಳಂತೆ ಒಟ್ಟು 15,00,000 ಮೊತ್ತ ಷೇರ ಬಂಡವಾಳ ಮೊತ್ತವನ್ನು ಸಂಗ್ರಹಿಸಿ ಕಂಪನಿ ಆ್ಯಕ್ಟ 2013 ರಡಿಯಲ್ಲಿ ನೊಂದಾಯಿಸಿಲಾಗಿದೆ ಹಾಗೂ FDVRC (Foundation for Development of Rural Value Chains is a Joint Initiative of Ministry of Rural development) ಯಿಂದ ಇಕ್ವಿಟಿ ಮೊತ್ತವನ್ನು ಸಹ ಪಡೆಯಲಾಗಿದೆ ಮತ್ತು ಗೊಬ್ಬರ, ರಾಸಾಯನಿಕ, ಹಾಗೂ ಬೀಜ ವ್ಯಾಪಾರ ಪರವಾಣಿಗೆಯನ್ನು ಪಡೆಯಲಾಗಿದೆ ಹಾಗೂ ಸಣ್ಣ ಪ್ರಮಾಣ ಇನ್ ಪುಟ್ಟ ವ್ಯಾಪಾರ ಪ್ರಾರಂಭಿಸಿದ್ದು 125 Spray Pump ಹಾಗೂ ಟಾರಪಲ್ ಗಳನ್ನು ರಿಯಾಯತಿ ದರದಲ್ಲಿ ರೈತರಿಗೆ ನೀಡಲಾಗಿದೆ ಎಂದು ಕಂಪನಿಯ ಅಧ್ಯಕರು ಶ್ರೀ ವಿಮಲಾ ಮೂಲಿಮನಿ ರವರು ಮಾನ್ಯರಿಗೆ ತಿಳಿಸಿದರು. ಮಾನ್ಯರು ಮಾತನಾಡಿ ಇನ್ನೂ ಬಹಳಷ್ಟು ಡೊಡ್ಡ ಪ್ರಮಾಣದಲ್ಲಿ ವ್ಯಾಪಾರ ಮಾಡಬೇಕು ಮತ್ತು ಕೃಷಿ ಇಲಾಖೆಯಿಂದ ಕೃಷಿ ಯಂತ್ರಧಾರೆ ಯೋಜನೆಯ ಸೌಲಭ್ಯ ನೀಡಲು ಕೃಷಿ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು. ಕಂಪನಿಯ ದಾಖಲಾತಿಗಳನ್ನು ಪರಿಶೀಲಸಿ ಉತ್ತಮವಾಗಿ ಕಾರ್ಯನಿರ್ವಹಿಸುತಿದ್ದು ನಮ್ಮಿಂದ ಯ್ಯಾವುದೇ ಸಹಕಾರ ಕೇಳಿದರು ಕೊಡಲಾಗುವುದು ಎಂದು ಕಂಪನಿಯ ನಿರ್ದೇಶಕರಿಗೆ ತಿಳಿಸದರು.
ನಂತರ ಮಲ್ಲಾಪುರ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಕಾರ್ಯಾತ್ಮಕ ನಳ ಸಂಪರ್ಕ ಸ್ಥಳ ಪರಿಶೀಲನೆ ಮಾಡಿದರು ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು ಜೊತೆ ಚರ್ಚೆ ಮಾಡಿ ಗ್ರಾಮದಲ್ಲಿ ಕುಡಿಯುವ ನೀರಿನ ಮೂಲಗಳ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕೆಂದು ಸೂಚನೆ ನೀಡಿ,ನಂತರ ಪಲಾನುಭವಿಗಳ ಜೋತೆ ಚರ್ಚೆ ಮಾಡಿ ನೀರು ಸರಿಯಾಗಿ ಬರುತಿದೆ ಇಲ್ಲೋ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡರು ತದ ನಂತರ ವನ್ನೂರ್ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ಅಧ್ಯಕ್ಷರು, ಸದಸ್ಯರು ಮತ್ತು ಜನಸಾಮಾನ್ಯರ ಜೊತೆ ಚರ್ಚೆ ಮಾಡಿ, ನಂತರ ಅಂಬೇಡ್ಕರ್ ವಸತಿ ಶಾಲೆ ಭೇಟಿ ನೀಡಿ ಶಾಲಾ ಶಿಕ್ಷಕರ ಜೊತೆ ಮತ್ತು ಮಕ್ಕಳ ಜೊತೆ ವಸತಿ ಶಾಲೆಯ ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚೆ ಮಾಡಿದರು.
ಸವದತ್ತಿ ತಾಲೂಕಿನ ಹಿರೇಬೂದನೂರು ಗ್ರಾಮ ಪಂಚಾಯತೆಗೆ ಭೇಟಿ ನೀಡಿ ವಿವರವಾದ ಯೋಜನಾ ವರದಿ (DPR-Detailed Project Report) ಪ್ರಕಾರ್ ಕಾಮಗಾರಿ ಆಗಿರುವ ಕುರಿತು ಗ್ರಾಮ ಪಂಚಾಯತ್ ಅಧಕ್ಷರು ಮತ್ತು ಸದಸ್ಯರ ಜೊತೆ ನಲ್ಲಿಯಲ್ಲಿ ನೀರು ಬರುವುದರ ಬಗ್ಗೆ ಮತ್ತು ರಸ್ತೆ ಪುನರ್ ರಚೆನೆ ಬಗ್ಗೆ ಚರ್ಚೆ ಮಾಡಿದರು. ತದನಂತರ ನರೇಗಾ ಯೋಜನೆಯ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು.
ಚಚಡಿ ಗ್ರಾಮ ಪಂಚಾಯತಗೆ ಭೇಟಿ ನೀಡಿ OHT(Over Head Tank), ಕಾರ್ಯಾತ್ಮಕ ನಳ ಸಂಪರ್ಕವನ್ನು ವೀಕ್ಷಣೆ ಮಾಡಿದರು ಮತ್ತು ಯೋಜನೆಯ ಮಾಹಿತಿ ಬೋರ್ಡ್ ನೋಡಿದರು ಮತ್ತು ಶಾಲಾ ಬಿಸಿ ಊಟದ ಕೋಣೆ ವೀಕ್ಷಣೆ ಮಾಡಿದರು ಫಲಾನುಭವಿಗಳ ಜೊತೆ ಯೋಜನೆಯ ಸಮರ್ಪಕ ಬಳಕೆ ಕುರಿತು ಚರ್ಚಿಸಿದರು.
ಇಂಚಲ ಗ್ರಾಮ ಪಂಚಾಯತಗೆ ಭೇಟಿ ನೀಡಿ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗಳನ್ನು ವಿವರವಾದ ಯೋಜನಾ ವರದಿ(DPR-Detailed Project Report) ಪ್ರಕಾರ ಕಾಮಗಾರಿ ಆಗಿರುವ ಕುರಿತು ಗ್ರಾಮ ಪಂಚಾಯತ್ ಅಧಕ್ಷರು, ಸದಸ್ಯರು ಮತ್ತು ಸಾರ್ವಜನಿಕರ ಜೋತೆ ಚರ್ಚೆ ಮಾಡಿ ಮಾಹಿತಿ ಪಡೆದುಕೊಂಡರು.
ಯರಝರ್ವಿ ಬಹುಗ್ರಾಮ ಕುಡಿಯುವ ನೀರು ಸರಬರಜುಗಳ OHT (Over Head Tank) ಕಾಮಗಾರಿ ವೀಕ್ಷಣೆ ಮಾಡಿದರು ಮತ್ತು ಇಂಚಲ್ ಗ್ರಾಮ ಪಂಚಾಯತ್ ಮತ್ತು ಮುತವಡ ಗ್ರಾಮಗಳಲಿ ಕಾರ್ಯಾತ್ಮಕ ನಳ ಸಂಪರ್ಕ ವೀಕ್ಷಣೆ ಮಾಡಿದರು ಮತ್ತು ಶಾಲಾ ಮಕ್ಕಳ ಜೋತೆ ಸಂವಹನ ನಡಿಸಿ ಬಿಸಿ ಊಟ,ಮೋಟ್ಟೆ ಸರಿಯಾಗಿ ನೀಡುತ್ತಾರೆ ಇಲ್ಲವೋ ಎಂಬುದರ ಕುರಿತಂತೆ ಮಕ್ಕಳಿಂದ ಮಾಹಿತಿ ಪಡೆದುಕೊಂಡರು.
ನಂತರ ಹಾರುಗೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಗೊಂತಮಾರ ಗ್ರಾಮಕ್ಕೆ ಭೇಟಿ ನೀಡಿ ಜಲಜೀವನ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಹಾಗೂ ಕಾರ್ಯಾತ್ಮಕ ನಳ ಸಂಪರ್ಕ ಪರಿಶೀಲಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಕಿರಣ ಘೋರ್ಪಡೆ ಕಾರ್ಯಪಾಲಕ ಅಭಿಯಂತರರು ಬೆಳಗಾವಿ ವಿಭಾಗದ ಹಾಗೂ ಬಸವರಾಜ್ ಅಯನಗೌಡರ್ ಮತ್ತು ಮಹೇಶ್ ಹುಲಿಮನಿ ಬೈಲಹೊಂಗಲ್ ಹಾಗೂ ಸವದತ್ತಿ ತಾಲೂಕಿನ ಸಹಾಯಕ ಕಾರ್ಯಪಾಲಕ ಅಭಿಯಂತರರು, ಸವದತ್ತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಆನಂದ್ ಬಡಕುಂದ್ರಿ, ಸಹಾಯಕ ನಿರ್ದೇಶಕರು ಪಂಚಾಯತ್ ರಾಜ್, ಸಹಾಯಕ ನಿರ್ದೇಶಕರು ನರೇಗಾ ಯೋಜನೆ ಸವದತ್ತಿ ಮತ್ತು ಬೈಲಹೊಂಗಲ್ ತಾಲೂಕು ಪಂಚಾಯತ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು, ತಾಲೂಕ್ ಪಂಚಾಯತಿ ಸಿಬ್ಬಂದಿಗಳು ಜಿಲ್ಲಾ ಯೋಜನಾ ವ್ಯವಸ್ಥಾಪಕರು ಹಾಗೂ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
