ಬೆಳಗಾವಿ-25: ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠೆಯ ದಿನದಂದು ಬೆಳಗಾವಿಯ ಜೈನ ಇಂಟರ್‌ನ್ಯಾಷನಲ್ ಟ್ರೆಡ ಆರ್ಗನೈಝೇಶನ ಜಿತೋ ಲೇಡಿಜ ವಿಂಗ ವತಿಯಿಂದ “ಆಶಿಯಾನಾ-2” ಯೋಜನೆಯಡಿ 320 ಶಾಲಾ ಮಕ್ಕಳಿಗೆ ಸ್ವೇಟರ್ ವಿತರಿಸಲಾಯಿತು.
ಬೆಳಗಾವಿಯ ವಿಶ್ವೇಶ್ವರ ನಗರದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆ ನಂ 26 ರಲ್ಲಿ ಈ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸುಮಾರು 320 ಶಾಲಾ ಮಕ್ಕಳಿಗೆ ಸ್ವೇಟರ್ ವಿತರಿಸಲಾಯಿತು. ಈ ಸಂದರ್ಭದಲ್ಲಿಸ್ವೇಟರ್ ಪಡೆದ ಶಾಲಾ ಮಕ್ಕಳ ಮುಖದಲ್ಲಿ ಮಂದಹಾಸದೊಂದಿದೆ ಅತ್ಯಂತ ಖುಷಿ ವ್ಯಕ್ತ ಪಡಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉದ್ಯಮಿ ಸುನಿಲ ಕಠಾರಿಯಾ, ಹಿರಿಯ ಲೆಕ್ಕಪರೀಶೋಧಕ ಸತಿಶ ಮೆಹತಾ ಅವರು ಆಗಮಿಸಿ ಶಾಲಾ ಮಕ್ಕಳಿಗೆ ಸ್ವೇಟರ್ ವಿತರಿಸಿ ಮಾತನಾಡಿ, ಜಿತೋ ಸಂಸ್ಥೆಯ ಒಂದು ಮಹತ್ವದ ಕಾರ್ಯಕ್ರಮ ಇದಾಗಿದ್ದು, ಸರಕಾರಿ ಶಾಲಾ ಮಕ್ಕಳ ವಿದ್ಯಾಭ್ಯಾಸ, ಶೀಕ್ಷಣ, ಮತ್ತು ಅವರ ಓದಿಗೆ ಎಲ್ಲ ರೀತಿಯ ಸಹಕಾರ ನೀಡಲು ಜಿತೋ ಸಂಸ್ಥೆಯು ತತ್ಪರವಾಗಿದೆ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಆದಿತ್ಯ ಮಿಲ್ಕ ಸಂಸ್ಥೆಯ ವತಿಯಿಂದ ಶಾಲಾ ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಣಮೋಕಾರ ಮಂತ್ರದ ಪಠಣದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಜಿತೋ ಲೇಡಿಜ ವಿಂಗ ಅಧ್ಯಕ್ಷೆ ಮಾಯಾ ಜೈನ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮಮತಾ ಜೈನ ಅತಿಥಿಗಳನ್ನು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ಬಿಇಓ ಶ್ರೀಮತಿ ಲೀಲಾವತಿ, ಶಾಲೆಯ ಪ್ರಾಚಾರ್ಯ ಎನ್.ಬಿ.ತಳವಾರ, ಕಾರ್ಯಕ್ರಮ ಸಂಯೋಜಕಿ ಸುನಿತಾ ಕಠಾರಿಯಾ, ಸಹ ಸಂಯೋಜಕಿ ವೈಶಾಲಿ ಉಪಾಧ್ಯೆ, ಶಾಲಾ ಉಸ್ತುವಾರಿ ಸಂಯೋಜಕಿ ಸುನಿತಾ ಸಂಚೇತಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.