ಬೆಳಗಾವಿ-10 : ಬಂಜಾರ ಸಮಾಜಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ ಜಾಗೆ ಮಂಜೂರ ಮಾಡುವಂತೆ ಬೆಳಗಾವಿ ಜಿಲ್ಲಾ ಬಂಜಾರ ಜನ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಬೆಂಗಳೂರು ನಲ್ಲಿ ಮನವಿ ಸಲ್ಲಿಸಿದರು.
ಬೆಳಗಾವಿ ಮಹಾನಗರದಲ್ಲಿ ಬಂಜಾರ ಸಮಾಜದ ಸಾವಿರಾರು ಜನರು ವಾಸವಿದ್ದಾರೆ. ನಮ್ಮ ಸಮಾಜವು ಆರ್ಥಿಕವಾಗಿ ಹಿಂದುಳಿದಿದೆ. ಸಮಾಜದ ಜನರಿಗೆ ಮದುವೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ನಮ್ಮದೇ ಆದ ಸಮುದಾಯ ಭವನದ ಅವಶ್ಯಕತೆಯಿದೆ. ಆದ್ದರಿಂದ ಬೆಳಗಾವಿ ಮಹಾನಗರದ ಸುತ್ತಮುತ್ತ ಇರುವ ಸರಕಾರಿ ಜಾಗೆಯಲ್ಲಿ 1 ಎಕರೆಯಷ್ಟಾದರೂ ಜಾಗೆಯನ್ನು ಸಮುದಾಯ ಭವನ ನಿರ್ಮಾಣಕ್ಕೆ ಮಂಜೂರು ಮಾಡುವಂತೆ ಪದಾಧಿಕಾರಿಗಳು ಸಮಾಜದ ಪರವಾಗಿ ವಿನಂತಿಸಿದರು.
ಈ ವೇಳೆ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾಂಡುರಂಗ ನಾಯಕ್, ಜಿಲ್ಲಾಧ್ಯಕ್ಷ ಎಂ.ಟಿ.ರಾಠೋಡ, ಕಾರ್ಯಾಧ್ಯಕ್ಷ ಕೃಷ್ಣಾ ರಾಠೋಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
