13/12/2025
Screenshot_2025_0709_055825

ಬೆಳಗಾವಿ-09: ಭಾರತದ ಸಂಸ್ಕೃತಿ ಪರಂಪರೆಯನ್ನು ಮೈಗೂಡಿಸಿಕೊಂಡು ಸ್ವಯಂ ಶಿಸ್ತಿನಿಂದ ಸಮಾಜಸೇವೆಯನ್ನು ಮಾಡುವ ಮೂಲಕ ರಾಷ್ಟ್ರ ನಿರ್ಮಾಣ ತೊಡಗಿಕೊಂಡಿರುವ ಆರ್.ಎಸ್.ಎಸ್.ಬಗ್ಗೆ ಮಾತನಾಡುವ ಯೋಗ್ಯತೆ ಸಚಿವ ಪ್ರೀಯಾಂಕಾ ಖರ್ಗೆಯವರಿಗಿಲ್ಲ ಎಂದು ಮಾಜಿ ಶಾಸಕ‌ ಸಂಜಯ ಪಾಟೀಲ ಖರ್ಗೆಯವರ ಹೇಳಿಕೆಗೆ ಅಕ್ರೋಶ ವ್ಯಕ್ತಪಡಿಸಿದ್ದಾರೆ.
‌‌‌‌ ಮಾಧ್ಯಮ‌ ಪ್ರಕಟಣೆಯ ಮೂಲಕ ಅಕ್ರೋಶ ಹೊರಹಾಕಿದ ಅವರು, ರಾಷ್ಟ್ರದಲ್ಲಿ ಕೋಟ್ಯಾಂತರ ಸ್ವಯಂ ಸೇವಕರನ್ನು ಹೊಂದಿ ದೇಶ ಸೇವೆ ಸದಾ ಸಿದ್ದವಿರುವ ಅನೇಕರ ಬಲಿದಾನದಿಂದ ದೇಶದ ಅಭಿವೃದ್ಧಿಗೆ ಸದಾ ಸಿದ್ದವಿರುವ ಆರ್.ಎಸ್.ಎಸ್ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ನಿಗಾ ಇರಬೇಕು. ಪ್ರತಿ ದಿನ “ಶಾಖೆ” ಯನ್ನು ನಡೆಸಿ ಸ್ವಯಂ‌ ಸೇವಕರು ದೈಹಿಕ ವ್ಯಾಯಾಮ, ಸಂಸ್ಕಾರಾತ್ಮಕ ಚಟುವಟಿಕೆಗಳು, ದೇಶಭಕ್ತಿಯ ಭಾವನೆ ಘಟ್ಟಿಗೊಳಿಸುವ ಕಾರ್ಯದ ಬಗ್ಗೆ ಒಮ್ಮೆ ಬಂದು ನೋಡಿ ಎಂದು ಸಾವಾಲ ಹಾಕಿದರು.
ಆರ್.ಎಸ್.ಎಸ್ ಭಾರತ ದೇಶಕ್ಕೆ ನರೇಂದ್ರ ಮೋದಿಯಂತ ನಾಯಕರನ್ನ ನೀಡಿದೆ. ಅವರು ಹೊಂದಿರುವ ರಾಷ್ಟ್ರೀಯ ಬದ್ದತೆ, ಕಾರ್ಯವಿಧಾನವನ್ನು ಪ್ರಪಂಚವೆ ಕೊಂಡಾಡುತ್ತಿದೆ. ನೂರರ ಹೊಸ್ತಿಲಲ್ಲಿರುವ ಸಂಘ
ನಿಸ್ವಾರ್ಥ ಸೇವೆಯಲ್ಲಿ ಪಾಲ್ಗೊಂಡು ದೇಶದ ಅಭಿವೃದ್ಧಿ ಪರ ಸದಾ ಯೋಚಿಸುವ ಕಾರ್ಯಕರ್ತರನ್ನ ಹೊಂದಿರುವ ರಾಷ್ಟ್ರೀಯ ಸ್ವಯಂ‌ ಸೇವಕ ಸಂಘವನ್ನು ಬ್ಯಾನ್ ಮಾಡುವ ಹೇಳಿಕೆ ನೀಡಿ ಹಗಲು ಗನಸು ಕಾಣುತ್ತಿರುವ ಪ್ರೀಯಾಂಕಾ ಖರ್ಗೆಯವರೆ ನಿಮ್ಮಂತೆ ವಂವಂಶಪರಂಪರೆ ಅಧಿಕಾರಕ್ಕೆ ಅಂಟಿಕೊಂಡು ಜನರ ಹಣ ಲೂಟಿ ಹೊಡೆದು ಅಭಿವೃದ್ಧಿ ಶೂನ್ಯ ಕಲಬುರ್ಗಿ ಮಾಡಿದಂತೆ ಅಲ್ಲ ನಿಮ್ಮ ರಾಜಕೀಯ. ಹಿನ್ನಲೆ ಎನು ಎನ್ನುವದನ್ನು ಜನ ತಿಳಿದಿದ್ದಾರೆ ಅದನ್ನು ಅರಿತು ಮಾಡನಾಡಬೇಕು ಎಂದರು.

error: Content is protected !!