13/12/2025
IMG-20250707-WA0000

ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ವಾರದ ಸತ್ಸಂಗ ಕಾರ್ಯಕ್ರಮದಲ್ಲಿ ದಿನಾಂಕ ೬,೭,೨೦೨೫ರಂದು

ಜ್ಞಾನವು ಧ್ಯಾನದ ಫಲ ನಾವು ಯಾವುದೇ ಒಂದು ಕ್ರಿಯೆ ಕಾರ್ಯಗಳಲ್ಲಿ ಸಂಪೂರ್ಣವಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳುತ್ತೆವೆಯೋ ಆ ಕಾರ್ಯವನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳುತ್ತೆವೆಯೋ ಅದುವೇ ಧ್ಯಾನ ವಾಗಿದೆ. ಶಿವ ಸರ್ವವ್ಯಾಪಿ ಶಿವನಿಗೆ ಯಾವುದೇ ರೂಪವಿಲ್ಲ ಶಿವ ವಿಶ್ವ ರೂಪಿಯಾಗಿದ್ದಾನೆ.ಶಿವನು ಜಗದಗಲ ಮುಗಿಲಗಲವಾಗಿದ್ದಾನೆ, ಎತ್ತತ್ತ ನೋಡಿದಡತ್ತತ ನೀನೇ ದೇವ, ಶಿವಾ ನಿರಾಕಾರಿಯಾಗಿದ್ದು ಅನುಭವ ಜನ್ಯನಾಗಿದ್ದಾನೆ ಹೀಗಾಗಿ ಶಿವನನ್ನು ನಮ್ಮ ಅನುಭದಲ್ಲಿ ಕಾಣಬೇಕು ಹೊರಗಲ್ಲವೆಂದು ಫ್ರೊ ,ಸರ್ ಶಾನವಾಡರು ಇಂದಿನ ತಮ್ಮ ಉಪನ್ಯಾಸದಲ್ಲಿ ಹೇಳಿದರು. ಶರಣರಾದ ಏಣಗಿ ಮಠ ಅವರು ಇಷ್ಟಲಿಂಗವನ್ನು ಪೂಜಿಸು ಸಂಸ್ಕಾರವನ್ನು ಮಕ್ಕಳಿಗೆ ಕಲಿಸಬೇಕು ಅದು ಕಚ್ಛಾ ವಸ್ತುವನ್ನು ಪಕ್ಕಾ ವಸ್ತುವನ್ನಾಗಿ ಮಾಡುತ್ತದೆ ಹೇಗೆ ಜೊಳವನ್ನು ಬಿಸಿ, ಹಿಟ್ಟು ಮಾಡಿ ರೊಟ್ಟಿಯನ್ನು ತಯಾರಿಸಿ ಒಂದು ಸಿದ್ದವಸ್ತವನ್ನಾಗಿಸುತ್ತೆವೆಯೋ ಇಷ್ಟಲಿಂಗ ಪೂಜೆಯ ಸಂಸ್ಕಾರವು ಕೂಡಾ ಸಿದ್ದಸಾಧಕರನ್ನಾಗಿಸುತ್ತದೆ ಎಂದು ತಮ್ಮ ಅನುಭಾವವನ್ನು ಹಂಚಿ ಕೂಂಡರು. ಶಂಕರ ಶೆಟ್ಟಿ ಅವರು ವೈದ್ಯ ದಿನಾಚರಣೆ ಬಗ್ಗೆ ಮಾತನಾಡಿದರು, ಲಲಿತಾ ರುದ್ರಗೌಡರವರು ಮನಸ್ಸ ಕುರಿತು ಹೇಳಿದರು, ನಾಗರತ್ನ ಪಾಟಿಲ ಅವರು ಸುನಿತಾ ನಂದೆಣ್ಣವರ, ಶಾರದಾ ಉಡಕೆರಿ ಅವರು ವಚನ, ತತ್ವಪದ ಗಾಯನ ಮಾಡಿದರು. ನಿರೂಪಣೆ ಶರಣ ಕಟ್ಟಮನಿಯವರು ಮಾಡಿದರು ಪ್ರಾರ್ಥನೆಯನ್ನು ಸುನಿತಾ ನಂದೆಣ್ಣವರ ಲಲಿತಾ ರುದ್ರಗೌಡರ ನಡೆಸಿಕೊಟ್ಟರು ಅಧ್ಯಕ್ಷರು ಎಸ್ ಜೀ ಸಿದ್ನಾಳರು ಮತ್ತು ಎಲ್ಲ ಶರಣ ಶರಣೆಯರು ಉಪಸ್ಥಿತರಿದ್ದರು ಶರಣ ಮಹಾದೇವ ಕೂರಿಯವರು ಅವರ ಜನ್ಮದಿನದ ನಿಮಿತ್ಯ ಇಂದಿನ ಪ್ರಸಾದ ವ್ಯವಸ್ಥೆ ಮಾಡಿದ್ದರು.

error: Content is protected !!