18 Nov 2026, 12:31:47 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಉಪನ್ಯಾಸ ಕಾರ್ಯಕ್ರಮ

ಬೆಳಗಾವಿ-೧೬:ಹಳಕಟ್ಟಿ ಭವನದಲ್ಲಿ ಕಿನ್ನರಿ ಬೊಮ್ಮಯ್ಯ ಜಯಂತಿ ನಿಮಿತ್ಯ ಉಪನ್ಯಾಸ ಕಾರ್ಯಕ್ರಮ ದಿನಾಂಕ 16-2-2025 ರಂದು ಬೆಳಗಾವಿಯ ಮಹಾಂತೇಶ ನಗರದ ಹಳಕಟ್ಟಿ ಭವನದಲ್ಲಿ ರವಿವಾರದ ಬೆಳಗಿನ ಸತ್ಸಂಗ ಕಾರ್ಯಕ್ರಮದಲ್ಲಿ ಅನುಭಾವಿ ಶರಣರಾದ ಕಿನ್ನರಿ ಬೊಮ್ಮಯ್ಯನವರ ಜೀವನ ಮತ್ತು ವಚನ ಸಂದೇಶ ಕುರಿತಂತೆ ಉಪನ್ಯಾಸ ಏರ್ಪಡಿಸಲಾಗಿತ್ತು. ಪ್ರೌಢಶಾಲೆಯ ಶಿಕ್ಷಕಿಯರಾಗಿ ಸೇವೆಯಲ್ಲಿರುವ ಶರಣೆ ಶ್ರೀಮತಿ ಕಮಲಾ ಗಣಾಚಾರಿ ಕಿನ್ನರಿ ಬೊಮ್ಮಯ್ಯನವರ ಕುರಿತು ಸುದೀರ್ಘವಾಗಿ ಮಾತನಾಡಿದರು. ಬಸವಣ್ಣನವರಿಂದ ಪ್ರೇರಿತರಾಗಿ ಆಂಧ್ರದ ಪುದೂರಿನಿಂದ ಬಂದು ಕಲ್ಯಾಣದಲ್ಲಿ ನೆಲೆನಿಂತು , ಅಕ್ಕಸಾಲಿಗ ವೃತ್ತಿಯೊಂದಿಗೆ ಕಿನ್ನರಿ ನುಡಿಸುವ ಪ್ರವೃತ್ತಿಯನ್ನು ಮೈಗೂಡಿಸಿಕೊಂಡವರು, ತ್ರಿಪುರಾಂತಕ ದೇವ ಎನ್ನುವ ಅಂಕಿತದೊಂದಿಗೆ ಒಟ್ಟು ಹದಿನೆಂಟು ವಚನಗಳನ್ನು ರಚಿಸಿದವರು. ಕಲ್ಯಾಣ ಕ್ರಾಂತಿಯ ನಂತರ ಚನ್ನಬಸವಣ್ಣನವರೊಂದಿಗೆ ಉಳವಿಗೆ ಹೋಗಿ ಬಿಜ್ಜಳನ ಸೈನ್ಯವನ್ನು ಚದುರಿಸಲು ಉಪಾಯ ಮಾಡಿದ್ದು, ಅಕ್ಕಮಹಾದೇವಿಯು ಕಲ್ಯಾಣಕ್ಕೆ ಬಂದ ಪ್ರಸಂಗದಲ್ಲಿ ಅಕ್ಕನನ್ನು ಪರೀಕ್ಷಿಸಿದ್ದು, ಹೀಗೆ ಶೂನ್ಯ ಸಂಪಾದನೆಯಲ್ಲಿ ಉಲ್ಲೇಖಿತ ಹಲವಾರು ಸನ್ನಿವೇಶಗಳಲ್ಲಿ ಕಿನ್ನರಿ ಬೊಮ್ಮಯ್ಯಗಳ ಪಾತ್ರ ಕುರಿತಂತೆ ಉಪನ್ಯಾಸದಲ್ಲಿ ಸ್ಮರಿಸಿದರು. ಕಿನ್ನರಿ ಬೊಮ್ಮಯ್ಯನವರ ಬದುಕಿಗೆ ಸಂಬಂಧಿತ ಕತೆಗಳನ್ನು ಹೇಳುತ್ತ, ನಿಜಗುಣ ಶಿವಯೋಗಿಗಳು, ಪುರಂದರ ದಾಸರ ಪದಗಳನ್ನು ಸಾಂದರ್ಭಿಕವಾಗಿ ಬಳಸಿಕೊಂಡಿದ್ದು ಉಪನ್ಯಾಸದ ವಿಶೇಷತೆ.. ಪ್ರಾರಂಭದಲ್ಲಿ ಶರಣೆ ಮಹಾದೇವಿ ಅರಳಿ ಪ್ರಾಥ೯ನೆ ನಡೆಸಿಕೊಟ್ಟರು, ಬಿ.ಪಿ.ಜೇವಣಿ, ಜಯಶ್ರೀ ಚಾವಲಗಿ,ಅನಸೂಯಾ ಬಶೆಟ್ಟಿ,ಆನ೦ದ ಕಕಿ೯,ವಿ.ಕೆ.ಪಾಟೀಲ ವಚನಗಳನ್ನು ಪ್ರಸ್ತುತ ಪಡಿಸಿದರು ಸ೦ಗಮೇಶ ಅರಳಿ ನಿರೂಪಿಸಿದರು, ಹಿರಿಯ ಶರಣೆ ಚ೦ಪಾವತಿ ತ೦ಗಡೆ ದಾಸೋಹ ಸೇವೆ ಸಲ್ಲಿಸಿದರು, ಶಂಕರ ಗುಡಸ ಅವರು ಉಪನ್ಯಾಸ ಕುರಿತಂತೆ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಿದರು.. ಶರಣ ಸದಾಶಿವ ದೇವರಮನಿ ಅವರೂ ಕೂಡ ಈ ಸಂದರ್ಭದಲ್ಲಿ ಶರಣ ಯುಗದ ಕೆಲವು ಘಟನೆಗಳನ್ನು ನೆನಪಿಸಿಕೊಂಡರು. ಬಸವರಾಜ ಬಿಜ್ಜರಗಿ, ವಿದ್ಯಾ ಕಕಿ೯, ಮಹಾದೇವಿ ತಿಗಡಿ, ಮಂಗಳಾ ಕಾಕತಿಕರ್, ಅಡವೇಶ ಇಟಗಿ, ಲಿಂಗಾಯತ ಸಂಘಟನೆಯ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ73ನೇ ಸಹಕಾರ ಸಪ್ತಾಹ–2026ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ ಮದ್ಯ ಕಳ್ಳಸಾಗಣೆಗ್ರಾಮೀಣ ಸಮುದಾಯಗಳಲ್ಲಿ ದೃಷ್ಟಿ ರಕ್ಷಿಸಲು ಬೆಳಗಾವಿಯ ರೋಟರಿ ಕ್ಲಬ್ ಸಂಚಾರಿ ಮಧುಮೇಹ ರೆಟಿನೋಪತಿ ತಪಾಸಣಾ ಯೋಜನೆಯನ್ನು ಪ್ರಾರಂಭಿಸಿದೆಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆ