18 Nov 2026, 12:47:25 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಆಧುನಿಕ ಸಂವಿಧಾನಗಳಿಗೆ ಶರಣರ ವಚನ ಸಂವಿಧಾನವೇ ಮೂಲ - ಬಿರಾದಾರ

ಬೆಳಗಾವಿ-೨೯: ಜಗತ್ತು ಸಂವಿಧಾನದ ಬಗ್ಗೆ ಯೋಚಿಸುವ ಮೊದಲೇ ಸಂಸದೀಯ ವ್ಯವಸ್ಥೆಯನ್ನು ಅಕ್ಷರಶಃ ಜಾರಿಗೊಳಿಸಿದ್ದ ಬಸವಾದಿ ಶರಣರ ವಚನ ಸಂವಿಧಾನವು ಆಧುನಿಕ ಸಂವಿಧಾನಗಳಿಗೆ ಮೂಲವಾಗಿದೆ ಎಂದು ಯರಗಟ್ಟಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಹೇಳಿದರು.
ಲಿಂಗಾಯತ ಸಂಘಟನೆಯು ಆಯೋಜಿಸಿದ ವಾರದ ಸಾಮೂಹಿಕ ಪ್ರಾರ್ಥನೆ ಹಾಗೂ ವಿಶೇಷ‌ ಅನುಭಾವಗೋಷ್ಠಿ ಕಾರ್ಯಕ್ರಮದಲ್ಲಿ 'ಶರಣರ ವಚನ ಸಂವಿಧಾನ' ಎಂಬ ವಿಷಯದ ಕುರಿತು ಅನುಭಾವ ನೀಡಿದ ಅವರು, ಶರಣರ ವಚನ ಸಂವಿಧಾನವು ಬರೆದ ಸಂವಿಧಾನವಾಗಿರದೆ ಬದುಕಿದ ಸಂವಿಧಾನವಾಗಿದೆ. ಸಮಾನತೆ, ಭಾತೃತ್ವ, ಪರೋಪಕಾರ, ಕಾಯಕ, ಪ್ರಸಾದ, ದಾಸೋಹ, ಸ್ತ್ರೀ ಸಬಲೀಕರಣ, ವೈಚಾರಿಕ-ವೈಜ್ಞಾನಿಕ ಮನೋಭಾವಗಳು ಶರಣ ವಚನ ಸಂವಿಧಾನದ ಪ್ರಮುಖ ಆಶಯಗಳಾಗಿವೆ ಎಂದು ಪ್ರತಿಪಾದಿಸಿದರು.
ಶರಣ ಸಂಗಮೇಶ ಅರಳಿಯವರು ಅಧ್ಯಕ್ಷತೆ ವಹಿಸಿದ್ದರು. ಶರಣೆ ಮಹಾದೇವಿ ಅರಳಿಯವರು ಪ್ರಾರ್ಥಿಸಿದರು. ಬಿ.ಪಿ. ಜವಣಿ ವಿ.ಕೆ. ಪಾಟೀಲ ಸುವರ್ಣಾ ಗುಡಸ ವಚನಗಳನ್ನು ಹಾಡಿದರು. ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಎಂ.ವೈ. ಮೆಣಸಿನಕಾಯಿಯವರು ಅತಿಥಿ ಪರಿಚಯ ಮಾಡಿದರು. ಶರಣೆ ವಿದ್ಯಾ ಅಜಗುಣಕರ ದಾಸೋಹಸೇವೆ ಸಲ್ಲಿಸಿದರು.
ಸುರೇಶ ನರಗುಂದ ವಂದಿಸಿದರು. ಆನಂದ ಕರಕಿ ಸುನಿಲಸಾಣಿಕೊಪ್ಪ, ಬಸವರಾಜ ಬಿಜರಗಿ, ವಿರೂಪಾಕ್ಷಿ ದೊಡಮನಿ, ಶಿವಾನಂದ ತಲ್ಲೂರ, ಸದಾಶಿವ ದೇವರಮನಿ, ಶಶಿಭೂಷಣಪಾಟೀಲ, ಬಸವರಾಜ ಕರಡಿಮಠ, ಬಿಬಿ ಮಠಪತಿ, ಶ್ರೀದೇವಿನರಗುಂದ,ಹಾಜರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ73ನೇ ಸಹಕಾರ ಸಪ್ತಾಹ–2026ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ ಮದ್ಯ ಕಳ್ಳಸಾಗಣೆಗ್ರಾಮೀಣ ಸಮುದಾಯಗಳಲ್ಲಿ ದೃಷ್ಟಿ ರಕ್ಷಿಸಲು ಬೆಳಗಾವಿಯ ರೋಟರಿ ಕ್ಲಬ್ ಸಂಚಾರಿ ಮಧುಮೇಹ ರೆಟಿನೋಪತಿ ತಪಾಸಣಾ ಯೋಜನೆಯನ್ನು ಪ್ರಾರಂಭಿಸಿದೆಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆ