18 Nov 2026, 12:25:37 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಪ್ರತಿ ಯುಗಾದಿ, ದೀಪಾವಳಿ ಹಬ್ಬಗಳಿಗೆ ಸೀರೆ, ಹೊಸ ಬಟ್ಟೆ ಖರೀ ತೊಟ್ಟು ಸಂಭ್ರಮಿಸುತ್ತಿರಿ. ಈ ಬಾರಿ ಹಬ್ಬದ ಜೊತೆಗೆ ಒಂದು ಪುಸ್ತಕ ಕೊಂಡು, ಓದುವ ಹವ್ಯಾಸ ಬೆಳೆಸಿಕೊಳ್ಳಿ:ಸುಧಾ ಮೂರ್ತಿ

ಬೆಳಗಾವಿ-೨೫: ಯುಗಾದಿ, ದೀಪಾವಳಿ ಹಬ್ಬಗಳಿಗೆ ಸೀರೆ, ಹೊಸ ಬಟ್ಟೆ ಖರೀ ತೊಟ್ಟು ಸಂಭ್ರಮಿಸುತ್ತಿರಿ. ಈ ಬಾರಿ ಹಬ್ಬದ ಜೊತೆಗೆ ಒಂದು ಪುಸ್ತಕ ಕೊಂಡು, ಓದುವ ಹವ್ಯಾಸ ಬೆಳೆಸಿಕೊಳ್ಳುವಂತೆ ಮಹಿಳೆಯರಿಗೆ ರಾಜ್ಯಸಭಾ ಸದಸ್ಯೆ, ಲೇಖಕಿ ಸುಧಾ ಮೂರ್ತಿ ಕರೆ ನೀಡಿದರು.

ಭಾನುವಾರ ನಗರದ ಸಪ್ನ ಬುಕ್‌ಹೌಸ್‌ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸುಧಾಮೂರ್ತಿ ಅವರೊಂದಿಗೆ "ಮನದ ಮಾತು" ಮುಕ್ತ ಮಾತುಕತೆ, ಸಂವಾದ ಮತ್ತು ಸಲ್ಲಾಪ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕನ್ನಡಿಗರು ಮತ್ತು ಮರಾಠಿ ಮಹಿಳೆಯರು ಪುಸ್ತಕ ಕೊಂಡುಕೊಳ್ಳಿ. ನನ್ನದೇ ಪುಸ್ತಕ ಖರೀದಿಸಿ ಅಂತಾ ನಾನು ಕೇಳಿಕೊಳ್ಳೋದಿಲ್ಲ. ಯಾವುದೇ ಪುಸ್ತಕ ಕೊಂಡು ಓದಲು ಮನಸ್ಸು ಮಾಡಿ ಎಂದು ಕಿವಿಮಾತು ಹೇಳಿದರ ಅವರು, ಮನೆಯಲ್ಲಿ ಬೆಲೆ ಬಾಳುವ ಚಿನ್ನಾಭರಣ, ಸೀರೆ ಸೇರಿ ಮತ್ತಿತರ ವಸ್ತುಗಳನ್ನು ಸಂಗ್ರಹಿಸಿಟ್ಟರೆ ಕಳ್ಳರು ಬಂದು ದೋಚಿಕೊಂಡು ಹೋಗಬಹುದು. ಆದರೆ, ಪುಸ್ತಕಗಳು ಇದ್ದರೆ ಯಾರೂ ಕದ್ದೊಯ್ಯುವುದಿಲ್ಲ ಎಂದು ಹೇಳಿದರು.

ಇಡೀ ಕರ್ನಾಟಕವೇ ನನಗೆ ಪ್ರೀತಿ. ಅದರಲ್ಲೂ ಉತ್ತರ ಕರ್ನಾಟಕದ ಮೇಲೆ ನನಗೆ ವಿಶೇಷ ಪ್ರೀತಿ. ಉತ್ತರಕರ್ನಾಟಕದ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ನನಗೆ ಈ ಪದವಿ, ಗೌರವ ಸಿಕ್ಕಿದ್ದು ನಿಮ್ಮೆಲ್ಲರ ಪ್ರೇಮದಿಂದ. ನನಗೆ ಸಾಹಿತಿ ಅಂತಾ ಕರೆಸಿಕೊಳ್ಳಲು ತುಂಬಾ ಹೆಮ್ಮೆ ಎನಿಸುತ್ತದೆ. ಶ್ರೀಮಂತ ಉದ್ಯಮಿ ನಾರಾಯಣಮೂರ್ತಿ ಪತ್ನಿ ಅಂತಾ ಕರೆಸಿಕೊಳ್ಳುವುದಕ್ಕಿಂತ ಲೇಖಕಿ ಎನಿಸಿಕೊಳ್ಳಲು ನನಗೆ ತುಂಬಾ ಹೆಮ್ಮೆ ಎನಿಸುತ್ತದೆ. ಪುಸ್ತಕ ಹೃದಯದಿಂದ ಹುಟ್ಟುತ್ತದೆ. ಬರವಣಿಗೆ ಸೃಜನಾತ್ಮಕ ಕಲೆ. ಹೃದಯದಲ್ಲಿ ಹುಟ್ಟುವ ಮೂಲ ಭಾವನೆ ಕನ್ನಡ. ಹಾಗಾಗಿ, ನಾನು ಮೊದಲು ಬರೆಯೋದು ಕನ್ನಡದಲ್ಲೆ. ಆಮೇಲೆ ಇಂಗ್ಲಿಷಿನಲ್ಲಿ ನಾನೇ ಟ್ರಾನ್ಸಫೋರ್ಟ್ ಮಾಡುತ್ತೇನೆ. ಕರಾಚಿ, ಲಂಡನ್, ದಕ್ಷಿಣ ಆಫ್ರಿಕಾ, ಅಮೆರಿಕಾದಲ್ಲೂ ನನ್ನ ಪುಸ್ತಕಗಳನ್ನು ನೋಡಿದ್ದೇನೆ. ನಾನು ಅದ್ಭುತ ಅಲ್ಲ. ನನ್ನ ಕನ್ನಡ ಭಾಷೆ ಅದ್ಭುತ ಎಂದು ಸುಧಾ ಮೂರ್ತಿ ಅಭಿಪ್ರಾಯ ಪಟ್ಟರು.

ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ದುಡ್ಡು ಅಷ್ಟೇ ಬೇಕಿಲ್ಲ. ಒಳ್ಳೆಯ ಮನಸ್ಸು ಸಹೃದಯ ಇರಬೇಕು. ಯಾರಿಗೆ ಸಹೃದಯವಿದೆ. ಕಷ್ಟವನ್ನು ನೋಡಿ ಮನಸ್ಸು ತಡೆದುಕೊಳ್ಳುವುದಿಲ್ಲವೋ ಅಂಥವರು ಮಾತ್ರ ಸಹಾಯ ಮಾಡುತ್ತಾರೆ. ನಿತ್ಯ ತೃಪ್ತರಾದರೆ ಮಾತ್ರ ಮನಸ್ಸಿಗೆ ಶಾಂತಿ ಸಿಗುತ್ತದೆ. ಯಾರನ್ನೂ ಮೆಚ್ಚಿಸದೇ ನಿಮ್ಮ ಕೆಲಸ ನೀವು ಮಾಡುತ್ತಿರಬೇಕು ಎಂದು ಸುಧಾ ಮೂರ್ತಿ ತಿಳಿಸಿದರು.

ಪತ್ರಕರ್ತ ವಿಶ್ವೇಶ್ವರ ಭಟ್‌ ಮಾತನಾಡಿ ಸುಧಾಮೂರ್ತಿ ತಮ್ಮ ಸರಳ, ಸಜ್ಜನಿಕೆ ವ್ಯಕ್ತಿತ್ವದ ಮೂಲಕ ಎಲ್ಲರನ್ನು ಬೆರಗುಗೊಳಿಸಿದ್ದಾರೆ. ಇನ್ಫೋಸಿಸ್‌ ಫೌಂಡೇಷನ್‌ ಮೂಲಕ ಸಮಾಜಕ್ಕೆ ವಿಶಿಷ್ಠ ಕೊಡುಗೆ ನೀಡುತ್ತಿದ್ದಾರೆ. ಒಂದು ಸರ್ಕಾರ ಮಾಡಬೇಕಿದ್ದ ಕೆಲಸವನ್ನು ಅವರು ಮಾಡುತ್ತಿರುವುದು ಶ್ಲಾಘನೀಯ. ಅಲ್ಲದೇ ಸುಧಾಮೂರ್ತಿ ರಚಿಸಿದ 46 ಕೃತಿಗಳು ಭಾರತದಲ್ಲಿ ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಕವನ ಹೊರತುಪಡಿಸಿ, ಎಲ್ಲ ಪ್ರಕಾರಗಳ ಸಾಹಿತ್ಯವನ್ನು ರಚನೆ ಮಾಡಿರೋದು ಅವರ ಹೆಗ್ಗಳಿಕೆ ಎಂದು ಹೇಳಿದರು.

ಬಳಿಕ ತಮ್ಮ ವಯಕ್ತಿಕ ಮತ್ತು ವೃತ್ತಿ ಬದುಕು, ಸಾಹಿತ್ಯ ಕುರಿತು ಸಾರ್ವಜನಿಕರ‌ ವಿವಿಧ ಪ್ರಶ್ನೆಗಳಿಗೆ ಸುಧಾ ಮೂರ್ತಿ ಉತ್ತರಿಸಿದರು. ಈ ವೇಳೆ ಸಪ್ನ ಬುಕ್‌ಹೌಸ್‌ ಕನ್ನಡ ವಿಭಾಗದ ಮುಖ್ಯಸ್ಥ ಆರ್.ದೊಡ್ಡೇಗೌಡ, ಬೆಳಗಾವಿ ಶಾಖೆ ವ್ಯವಸ್ಥಾಪಕ ರಘು ಎಂ.ವಿ ಸೇರಿ ಇತರರು ಹಾಜರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ73ನೇ ಸಹಕಾರ ಸಪ್ತಾಹ–2026ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ ಮದ್ಯ ಕಳ್ಳಸಾಗಣೆಗ್ರಾಮೀಣ ಸಮುದಾಯಗಳಲ್ಲಿ ದೃಷ್ಟಿ ರಕ್ಷಿಸಲು ಬೆಳಗಾವಿಯ ರೋಟರಿ ಕ್ಲಬ್ ಸಂಚಾರಿ ಮಧುಮೇಹ ರೆಟಿನೋಪತಿ ತಪಾಸಣಾ ಯೋಜನೆಯನ್ನು ಪ್ರಾರಂಭಿಸಿದೆಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆ