18 Nov 2026, 12:47:37 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ನಿವೃತ್ತ ಸಿಬ್ಬಂದಿ ಸಂಘದಿಂದ ಸಿಂಡಿಕೇಟ್ ಬ್ಯಾಂಕ್‌ ಶತಮಾನೋತ್ಸವ ಕಾರ್ಯಕ್ರಮ

ಸಿಂಡಿಕೇಟ್ ಬ್ಯಾಂಕ್‌ನ ಸೇವಾ ಪರಂಪರೆ ಸ್ಮರಣೀಯ: ಹೇಮಂತ್ ಪೈ

ಬೆಳಗಾವಿ-27: ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಿಂಡಿಕೇಟ್ ಬ್ಯಾಂಕ್ ತನ್ನದೇ ಆದ ವಿಶಿಷ್ಟ ಸೇವಾ ಪರಂಪರೆಯನ್ನು ನಿರ್ಮಿಸಿಕೊಂಡಿದ್ದು, ಸಮಾಜದ ವಿವಿಧ ವರ್ಗಗಳ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದೆ ಎಂದು ಕೆನರಾ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಸಿಬ್ಬಂದಿ ಸಂಘಟನೆಯ ಅಧ್ಯಕ್ಷರಾದ ಹೇಮಂತ ಪೈ ಅವರು ಹೇಳಿದರು.‌

ನಗರದ ನ್ಯೂ ಉದಯ ಭವನದಲ್ಲಿ ಗುರುವಾರ ಕೆನರಾ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಸಿಬ್ಬಂದಿ ಸಂಘದ ವತಿಯಿಂದ ಆಯೋಜಿಸಲಾದ ಸಿಂಡಿಕೇಟ್ ಬ್ಯಾಂಕ್ ನ ಶತಮಾನೋತ್ಸವದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಿಂಡಿಕೇಟ್ ಬ್ಯಾಂಕ್ ಅನ್ನು ಕೈಗಾರಿಕೋದ್ಯಮಿ ವಿ.ಎಸ್. ಕುಡ್ವ, ಉದ್ಯಮಿ ಟಿ. ಉಪೇಂದ್ರ ಪೈ ಹಾಗೂ ಡಾ. ಟಿ.ಎಂ.ಎ. ಪೈ ಅವರು ₹8 ಸಾವಿರ ಬಂಡವಾಳದೊಂದಿಗೆ ಸ್ಥಾಪಿಸಿ, ದೇಶಾದ್ಯಂತ ಉತ್ತಮ ಸೇವೆ ನೀಡಿದರು.

ಬ್ಯಾಂಕ್ ಪರಿಚಯಿಸಿದ ಪಿಗ್ಮಿ ಠೇವಣಿ ಯೋಜನೆಯು ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲೇ ಗಮನಾರ್ಹ ಪ್ರಯೋಗವಾಗಿತ್ತು. ಬ್ಯಾಂಕ್ ಸಿಬ್ಬಂದಿ ಗ್ರಾಹಕರ ಬಳಿಗೆ ತೆರಳಿ ಸಣ್ಣ ಮೊತ್ತವನ್ನು ಸಂಗ್ರಹಿಸುವ ಮೂಲಕ ಜನರಲ್ಲಿ ಉಳಿತಾಯದ ಮನೋಭಾವ ಬೆಳೆಸಲು ನೆರವಾದರು. ಗ್ರಾಹಕರು ನೀಡಿದ ಠೇವಣಿಗಳೇ ಬ್ಯಾಂಕ್‌ನ ಬೆಳವಣಿಗೆಗೆ ಪ್ರಮುಖ ಆಧಾರವಾಗಿದ್ದವು. ಕೃಷಿ ಕ್ಷೇತ್ರಕ್ಕೆ ಸಾಲ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಜನಸಾಮಾನ್ಯರ ಅಗತ್ಯಗಳಿಗೆ ಸ್ಪಂದಿಸುವ ಹಲವು ಯೋಜನೆಗಳನ್ನು ಬ್ಯಾಂಕ್ ಜಾರಿಗೆ ತಂದಿತ್ತು ಎಂದು ಹೇಳಿದರು.

ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದಲೂ ಸಂಸ್ಥೆಯ ವತಿಯಿಂದ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದರು. ದೇಶದ ಬ್ಯಾಂಕಿಂಗ್ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ, ಬ್ಯಾಂಕಿನ ನಿವೃತ್ತ ಸಿಬ್ಬಂದಿ, ಅಧಿಕಾರಿಗಳು ಹಾಗೂ ಹಳೆಯ ಸಹೋದ್ಯೋಗಿಗಳು ಒಂದೆಡೆ ಸೇರಿ ಶತಮಾನೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿರುವುದು ತೀವ್ರ ಸಂಸತ ವ್ಯಕ್ತಪಡಿಸಿ, ಅವರು, ಬ್ಯಾಂಕ್‌ನ ಸೇವಾ ಪರಂಪರೆ ಮುಂದಿನ ಪೀಳಿಗೆಗೂ ಸ್ಫೂರ್ತಿಯಾಗಲಿದೆ ಎಂದು ಹೇಮಂತ್ ಡಿ. ಪೈ ತಿಳಿಸಿದರು.

ಮುಖ್ಯ ಅತಿಥಿ ಶಾರದಾಚರಣ ಕುಲಕರ್ಣಿ ಅವರು ಮಾತನಾಡಿ, ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಸಿಂಡಿಕೇಟ್ ಬ್ಯಾಂಕ್ ಹಾಗೂ ಅದರ ಸಿಬ್ಬಂದಿಯೊಂದಿಗೆ ಉತ್ತಮ ಆತ್ಮೀಯ ಸಂಬಂಧ ಹೊಂದಿದ್ದೆ. ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿಯ ಸಹಕಾರವನ್ನು ಸ್ಮರಿಸುವುದರ ಜೊತೆಗೆ, ಉತ್ತಮ ಬ್ಯಾಂಕ್‌ ಅನ್ನು ಸ್ಥಾಪಿಸಿದ ಸಂಸ್ಥಾಪಕರಿಗೆ ಗೌರವ ಸಲ್ಲಿಸುವುದಾಗಿ ಹೇಳಿದರು.

ಈ ವೇಳೆ ಪಿ, ಆರ್ ಹಿರೇಮಠ ಅವರು ಮಾತನಾಡಿ, ಶಾರದಾಚರಣ ಸಿ. ಕುಲಕರ್ಣಿ ಅವರು ಕಾರ್ಯಕ್ರಮಕ್ಕೆ ಆಗಮಿಸಿರುವುದು ಸಂತಸ ತಂದಿದೆ. ಬ್ಯಾಂಕಿಂಗ್ ಕ್ಷೇತ್ರಕ್ಕೆ ಶಾರದಾಚರಣ ಸಿ. ಕುಲಕರ್ಣಿ ಅವರು ಅಪಾರ ಕೊಡುಗೆ ನೀಡಿದ್ದಾರೆ. ಸಾಮಾಜಿಕ ಕಳಕಳಿಯೊಂದಿಗೆ ಸರಳ ವ್ಯಕ್ತಿತ್ವ ಹೊಂದಿರುವ ಅವರು, ಬೆಳಗಾವಿಯಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಅವರ ಸೇವೆ ಹಾಗೂ ಸಾಧನೆಗಳು ಸದಾ ಸ್ಮರಣೀಯವಾಗಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

 

ಗಣ್ಯರಿಗೆ ಸತ್ಕಾರ: ಸಮಾರಂಭದಲ್ಲಿ ಎಸ್‌ಆರ್‌ಒ ಸೋಮಶೇಖರ್ ಪೈ, ಹಿರಿಯ ಸದಸ್ಯರಾದ ಎಂ.ಜೆ. ಶೆಣೈ, ಮುಖ್ಯ ಅತಿಥಿ ಶಾರದಾಚರಣ ಕುಲಕರ್ಣಿ, ಪುಣೇಕರ್, ಪ್ರಸಾದ್ ಆರ್. ಹಿರೇಮಠ್ ಹಾಗೂ ಸಮ್ಮೇಳನದ ಜಂಟಿ ಸಂಚಾಲಕರಾದ ಕೃಷ್ಣಾನಂದ ಬಾಳಿಗಾ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಅರುಣ್ ಪುಣೇಕರ್ ಹಾಗೂ ಅವರ ಪತ್ನಿ ಅವರು ಯೋಗಾಭ್ಯಾಸಗಳ ಕುರಿತು ನೀಡಿದರು.

ಈ‌ ಸಂದರ್ಭದಲ್ಲಿ ಮುಖ್ಯ ಅತಿಥಿ ಶಾರದಾಚರಣ ಸಿ‌. ಕುಲಕರ್ಣಿ, ಸೋಮಶೇಖರ್ ಪೈ, ಶಾರದಾ ಹಿರೇಮಠ, ಹೇಮಂತ ಪೌಜಿ ಅವರು ಸ್ವಾಗತಿಸಿದರು, ಪಿ, ಆರ್ ಹಿರೇಮಠ ಅವರು ಅತಿಥಿ ಪರಿಚಯಿಸಿದರು. ಮಂಗಲಾ ಮಠದ ಪ್ರಾರ್ಥನೆ ಗೀತೆ ಹಾಡಿದರು. ಕೃಷ್ಣಾನಂದ ಬಾಳಿಗಾ ನಿರೂಪಿಸಿ, ವಂದಿಸಿದರು. ಕೆನರಾ, ಸಿಂಡಿಕೇಟ್, ಬ್ಯಾಂಕ್ ಆಪ್ ಮಹಾರಾಷ್ಟ್ರ ಬ್ಯಾಂಕ್ ನಿವೃತ್ತಿ ಅಧಿಕಾರಿಗಳು ಇತರರು ಉಪಸ್ಥಿತಿರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ73ನೇ ಸಹಕಾರ ಸಪ್ತಾಹ–2026ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ ಮದ್ಯ ಕಳ್ಳಸಾಗಣೆಗ್ರಾಮೀಣ ಸಮುದಾಯಗಳಲ್ಲಿ ದೃಷ್ಟಿ ರಕ್ಷಿಸಲು ಬೆಳಗಾವಿಯ ರೋಟರಿ ಕ್ಲಬ್ ಸಂಚಾರಿ ಮಧುಮೇಹ ರೆಟಿನೋಪತಿ ತಪಾಸಣಾ ಯೋಜನೆಯನ್ನು ಪ್ರಾರಂಭಿಸಿದೆಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆ