18 Nov 2026, 12:39:04 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ನಾಗರಿಕ ಹಿತರಕ್ಷಣಾ ಸಮಿತಿ ಪತ್ರಿಕಾಗೋಷ್ಠಿ

ವಕ್ಫ್ ನೀತಿ ಖಂಡಿಸಿ ಬೃಹತ್ ಜನಜಾಗೃತಿ ಸಭೆ
ಬೆಳಗಾವಿ-೦೯: ವಕ್ಫ್ ಮಂಡಳಿ ರಾಜ್ಯದ ಬಡ ರೈತರ ಮಠ ಮಂದಿರ ಮತ್ತು ಸಾರ್ವಜನಿಕ ಆಸ್ತಿಗಳನ್ನು ಕಬಳಿಸುತ್ತಿರುವುದು ಖಂಡನೀಯವಾಗಿದೆ. ಅದು ಅಲ್ಲದೆ ಈ ಕುಕೃತ್ಯಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ನೀಡುತ್ತಿರುವುದು ಸೋಜಿಗದ ಸಂಗತಿ. ಆದ್ದರಿಂದ ಸರ್ಕಾರ ಮತ್ತು ವಕ್ಫ್ ಮಂಡಳಿ ವಿರುದ್ಧ ಜನಜಾಗೃತಿ ಸಭೆಯನ್ನು ಬೆಳಗಾವಿ ನಗರದಲ್ಲಿ ನವೆಂಬರ್ 12ರಂದು ಆಯೋಜಿಸಲಾಗಿದೆ ಎಂದು ನಾಗರಿಕ ಹಿತರಕ್ಷಣಾ ಸಮಿತಿಯ ಸಂಯೋಜಕ ಡಾ. ಬಸವರಾಜ ಭಾಗೋಜಿ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ವಿಜಯಪುರ, ಕಲ್ಬುರ್ಗಿ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಕೃಷಿ, ಮಠ, ಮಂದಿರ ಮತ್ತು ಸಾರ್ವಜನಿಕ ಆಸ್ತಿಗಳ ಉತಾರಾದಲ್ಲಿ ವಕ್ಫ್ ಹೆಸರು ಸೇರ್ಪಡೆಗೊಂಡಿದೆ. ಅನೇಕ ತಲೆಮಾರುಗಳಿಂದ ವಾಸಿಸಿದ ಮನೆ ಮತ್ತು ಬಿತ್ತನೆ ಮಾಡುವ ಕೃಷಿ ಭೂಮಿ ಉತಾರದಲ್ಲಿ ವಕ್ಫ್ ಹೆಸರು ಬಂದಿರುವುದು ಸರ್ಕಾರದ ತುಷ್ಟಿಕರಣ ನೀತಿಗೆ ಸಾಕ್ಷಿಯಾಗಿದೆ. ಅದ್ದರಿಂದ ಬೆಳಗಾವಿ ನಗರದಲ್ಲಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಂಬರುವ ಮಂಗಳವಾರ ನವೆಂಬರ್ 12ರಂದು ಸಂಜೆ 6 ಘಂಟೆಗೆ ನಗರದ ಧರ್ಮವೀರ ಸಂಭಾಜಿ ಉದ್ಯಾನದಲ್ಲಿ ಬೃಹತ್ ಜನಜಾಗೃತಿ ಸಭೆ ಏರ್ಪಡಿಸಲಾಗಿದೆ. ಆ ಸಭೆಯಲ್ಲಿ ಕನೇರಿಮಠದ ಪರಮ ಪೂಜ್ಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ನಾಗರಿಕ ಹಿತರಕ್ಷಣಾ ಸಮಿತಿಯ ಸದಸ್ಯ ಮತ್ತು ಉದ್ಯಮಿ ರೋಹನ ಜವಳಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಹಳೆ ಹುಬ್ಬಳ್ಳಿ ಠಾಣೆಯ ದಾಳಿ ಪ್ರಕರಣವನ್ನು ಹಿಂಪಡೆಯುತ್ತಿರುವುದು ಸೂಕ್ತವಲ್ಲ. ಪ್ರಕರಣ ಹಿಂಪಡೆಯುವ ದರಿಂದ ಪೊಲೀಸರ್ ಸ್ಥೆöÊರ್ಯ ಕುಸಿಯುತ್ತದೆ.

ಆದ್ದರಿಂದ ರಾಜ್ಯ ಸರ್ಕಾರ ಪ್ರಕರಣ ಹಿಂಪಡೆಯಬಾರದು. ರಾಜ್ಯದಲ್ಲಿ ಯುವತಿಯರ ಕಗ್ಗೊಲೆ, ಲವ್ ಜಿಹಾದ ಪ್ರಕರಣ, ಹಿಂದು ಅಮಾಯಕ ಯುವಕರ ಮೇಲೆ ಪ್ರಕರಣ ದಾಖಲು, ಗಣೇಶ ಮೂರ್ತಿಯನ್ನು ಬಂಧಿಸಿರುವುದು ಹೀಗೆ ಅನೇಕ ಘಟನೆಗಳಲ್ಲಿ ಸರ್ಕಾರದ ನೀತಿಗಳು ದ್ವಂದವಾಗಿದ್ದಾವೆ. ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಬಲಪಡಿಸಲು ಮತ್ತು ನಿಸ್ಪಕ್ಷಪಾತವಾಗಿ ಆಡಳಿತ ನಡೆಸುವಂತೆ ತಿಳಿಸಲು ಈ ಜನಜಾಗೃತಿ ಸಭೆ ಏರ್ಪಡಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಅನೇಕ ಸ್ವಾಮೀಜಿಗಳೂ, ಗಣ್ಯರು, ಸಮಾಜದ ವಿವಿಧ ವೃತ್ತಿ ಕ್ಷೇತ್ರದ ಪ್ರಮುಖರು ಭಾಗವಹಿಸಿದ್ದಾರೆ. ದೀಪಾವಳಿ ಹಬ್ಬದ ಮುನ್ನ ಹಳೆ ಹುಬ್ಬಳ್ಳಿ ಪ್ರಕರಣ ಹಿಂಪಡೆಯುವ ನೀತಿ ಖಂಡಿಸಿ ಬೆಳಗಾವಿಯ 30 ಹೆಚ್ಚು ಸಮಾಜ, ವಿವಿಧ ಗಣೇಶೋತ್ಸವ ಮಂಡಳಿ, ದೇವಸ್ಥಾನಗಳ ಕಮೀಟಿ ಸದಸ್ಯರು ಹಾಗೂ ಮಹಿಳಾ ಮಂಡಳಿ ಸದ್ಯಸರು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಮುಂಬರುವ ದಿನಗಳಲ್ಲಿ ಸಮಾಜದಲ್ಲಿ ಎದುರಾಗುವ ವಿವಿಧ ಸಮಸ್ಯೆಗಳಿಗೆ ಸಮಾಜವೇ ಸ್ವಪ್ರೇರಣೆಯಿಂದ ಪರಿಹಾರ ಕಂಡುಕೊಳ್ಳುವ ಉದ್ದೇಶದ ಅಡಿಯಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ಕಾರ್ಯನಿರ್ವಹಿಸಲಿದೆ ಎಂದರು.
ನಾಗರಿಕ ಹಿತರಕ್ಷಣಾ ಸಮಿತಿಯ ಸಹ ಸಂಯೋಜಕರಾದ ವಿಜಯ ಜಾಧವ, ಶಿವಾಜಿ ಶಹಾಪುರಕರ ಮತ್ತು ರೋಹಿತ ಉಮನಾದಿಮಠ, ರೂಪೇಶ ಗುಂಡಕಲ್ ಉಪಸ್ಥಿತಿರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ73ನೇ ಸಹಕಾರ ಸಪ್ತಾಹ–2026ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ ಮದ್ಯ ಕಳ್ಳಸಾಗಣೆಗ್ರಾಮೀಣ ಸಮುದಾಯಗಳಲ್ಲಿ ದೃಷ್ಟಿ ರಕ್ಷಿಸಲು ಬೆಳಗಾವಿಯ ರೋಟರಿ ಕ್ಲಬ್ ಸಂಚಾರಿ ಮಧುಮೇಹ ರೆಟಿನೋಪತಿ ತಪಾಸಣಾ ಯೋಜನೆಯನ್ನು ಪ್ರಾರಂಭಿಸಿದೆಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆ