18 Nov 2026, 12:44:34 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಮೋದಿ ನಾಯಕತ್ವದಲ್ಲಿ ದೇಶ ಸಾಕಷ್ಟು ಅಭಿವೃದ್ಧಿ ಆಗಿದೆ: ಜಗದೀಶ್ ಶೆಟ್ಟರ್

ಬೆಳಗಾವಿ-೨೧: ಒಬ್ಬ ಸಮರ್ಥ ಪ್ರಧಾನಿ ಇರುವ ಕಾರಣ ಕೋವಿಡ್ ಸಮಯದಲ್ಲಿ ಸಾಕಷ್ಟು ಸಾವು ನೋವುಗಳು ತಪ್ಪಿಸಲಾಯಿತು.‌ ಒಬ್ಬ ಸಮರ್ಥ ನಾಯಕ ಇರುವ ಕಾರಣ 2014 ರ ನಂತರ ಭಾರತ ಸದೃಡವಾಗಿ ಬೆಳೆದಿದೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರು ಅವರು ತಿಳಿಸಿದ್ದಾರೆ

ಭಾನುವಾರ ಲೋಕಸಭಾ ಚುನಾವಣೆ ಅಂಗವಾಗಿ ಬೆಳಗಾವಿಯ ಉದ್ದಮಭಾಗನ‌ ವಿಶ್ವಕರ್ಮ ಸೇವಾ ಸಂಘದಲ್ಲಿ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಆಡಳಿತದ 10 ವರ್ಷದಲ್ಲಿ ದೇಶವನ್ನು ಬಲಿಷ್ಠ ಪಡಿಸಿದ್ದಾರೆ.‌ ಕೋವಿಡ್ ಸಂದರ್ಭದಲ್ಲಿ ಮಾಸ್ಕ್ ಬೇರೆ ದೇಶದಿಂದ ತರಿಸಿಕೊಳ್ಳುವ ಪರಿಸ್ಥಿತಿ ಬಂದಿತು ಆದರೆ ದೇಶದಲ್ಲಿಯೆ ಮಾಸ್ಕ್ ತಯಾರಿಸಲು ಉತ್ತೇಜನ ನೀಡಿಲಾಯಿತು.‌ ವಾಕ್ಸಿನ್ ಬೇರೆ ದೇಶದಿಂದ ತರಿಸಿಕೊಳ್ಳುವ ಪರಿಸ್ಥಿತಿ ಬಂದಿತು ಆದರೆ ಮೋದಿಯವರು ನಮ್ಮ ದೇಶದಲ್ಲಿಯೇ ವಾಕ್ಸಿನ್ ತಯಾರಿಸಲು ಉತ್ತೇಜನ ನೀಡಿದರು. ಮಹಾಮಾರಿ ಕೋವಿಡ್ ಸಂದರ್ಭದಲ್ಲಿ ದೇಶದ ಜನರಿಗೆ ಎರಡು ಸಲ ಉಚಿತವಾಗಿ ಲಸಿಕೆ ನೀಡುವ ಕೆಲಸ ಮೋದಿಯವರು ಮಾಡಿದರು. ಇದರಿಂದ ಬಹಳಷ್ಟು ಸಾವು ನೋವುಗಳು ದೇಶದಲ್ಲಿ ತಪ್ಪಿಸಲಾಯಿತು ಎಂದು ಹೇಳಿದರು.‌
ನಮ್ಮಲ್ಲಿ ಒಬ್ಬ ಸಮರ್ಥ ನಾಯಕ ಇರುವ ಕಾರಣ ಇದೆಲ್ಲವು ಸಾದ್ಯ ಆಗಿದೆ. ಮುಂದುವರಿದ‌ ರಾಷ್ಟ್ರದಲ್ಲಿ ಮತ್ತು ಸಣ್ಣ ಸಣ್ಣ ದೇಶಗಳಲ್ಲಿಯೇ ಕೋವಿಡ್ ಲಸಿಕೆ ನೀಡಲು ಆಗಿಲ್ಲ.‌ ಆದರೆ ಮೋದಿಯವರು ನೂರಾರು ಕೋಟಿ ಜನರಿಗೆ ಉಚಿತವಾಗಿ ವಾಕ್ಸಿನ್ ನೀಡಿದ್ದಾರೆ. ಈ ಸಾಧನೆಯನ್ನು ಜಗತ್ತಿನ ಮತ್ತೊಬ್ಬ ಯಾವ ನಾಯಕನಿಗೂ ಮಾಡಲು ಆಗುವುದಿಲ್ಲ.‌ ಹಾಗಾಗಿ ದೇಶಕ್ಕೆ ಮೋದಿಯವರು ಅಗತ್ಯ ಇದ್ದಾರೆ.‌ ಮೋದಿಯವರು ಪ್ರಧಾನಿಯಾದ ಮೇಲೆ ದೇಶಕ್ಕೆ ಶಾಂತಿ ನೆಮ್ಮದಿ ಸಿಕ್ಕಿದೆ.‌ ದೇಶಕ್ಕೆ ಭದ್ರತೆ ಸಿಕ್ಕಿದೆ. ನಮ್ಮನ್ನು ನಾವು ಸಂರಕ್ಷಣೆ ಮಾಡುತ್ತಿದ್ದೇವೆ. ಜಗತ್ತಿನಲ್ಲಿ ಇರುವ ಎಲ್ಲಾ ರಾಷ್ಟ್ರಗಳಲ್ಲೂ ನರೇಂದ್ರ ಮೋದಿಯವರ ಬಗ್ಗೆ ಗೌರವ ಇದೆ. ಮೋದಿಯವರು ಉತ್ತಮವಾದ ಆರ್ಥಿಕ ನೀತಿ, ಉತ್ತಮವಾದ ವಿದೇಶಿ ನೀತಿ ಮಾಡಿದ್ದರಿಂದ ದೇಶ ಪ್ರಗತಿ ಕಂಡಿದೆ.‌ ನಮ್ಮ ದೇಶದ ನೇರಯ ರಾಷ್ಟ್ರಗಳಾದ ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಅಪಘಾನಿಸ್ಥಾನ ದೇಶಗಳು ಆರ್ಥಿಕವಾಗಿ ಕುಸಿದು ಬಿದ್ದಿದೆ.‌ ಆ ದೇಶಗಳಿಗೆ ಸರಿಯಾದ ನಾಯಕ, ಹಾಗೂ ದುರದೃಷ್ಟಿ ಇಲ್ಲದ ಕಾರಣ ಆ ದೇಶಗಳು ಅಭಿವೃದ್ಧಿ ಹೊಂದಿಲ್ಲ ಎಂದರು.‌
ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಮೈಕ್ರೋ ಇಂಡಸ್ಟ್ರೀಸ್, ಸ್ಮಾಲ್ ಸ್ಕೇಲ್ ಇಂಡಸ್ಟ್ರಿ ಯನ್ನು ಒಟ್ಟುಗುಡಿಸಿ ಸಂಘಟನೆ ಮಾಡುವ ಕೆಲಸ ವಿಶ್ವ ಕರ್ಮ ಸೇವಸ ಸಂಘ ಮಾಡಿದೆ. ಸಣ್ಣ ಸಣ್ಣ ಕೈಗಾರಿಗೆ ಹೋಗಿ ಅಲ್ಲಿರುವ ಮಾಲೀಕರು, ಕಾರ್ಮಿಕರು, ಸಿಬ್ಬಂದಿ ಹೀಗೆ ಸುಮಾರು 16 ಸಾವಿರ ಜನರ ಸೇರಿಸಿ ಸಂಘಟನೆಯನ್ನು ಮಾಡಲಾಗಿದೆ. ರಾಜ್ಯದಲ್ಲಿಯೇ ಮೊದಲ ಸಲ ಸಣ್ಣ ಸಣ್ಣ ಕೈಗಾರಿಕೆಗಳನ್ನು ಒಟ್ಟುಗೂಡಿಸಿ ಅವರಿಗೆ ಸಹಾಯ ಮಾಡುವ ಮೂಲಕ ವಿಶ್ವಕರ್ಮ ಸೇವಾ ಸಂಘಟನೆ ಉತ್ತಮ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.‌
ಈ ಸಂದರ್ಭದಲ್ಲಿ ಶಾಸಕರಾದ ಅಭಯ ಪಾಟಿಲ್ ಸಂಘದ ಅಧ್ಯಕ್ಷ ರಮೇಶ ಡಿಸುಕರ, ಪ್ರಮುಖರಾದ ಸಂದೀಪ ಮಂಡೂಳಕರ, ರಾಜು ಸುತಾರ, ನಾಮದೇವ ಸುತಾರ, ಗೀತಾ ಸುತಾರ, ನೇಹಾ ದೆಸುರಕರ, ವಿಲಾಸ ಲೋಹಾರ ಹಾಗೂ ಮತ್ತಿತರರು ಹಾಜರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ73ನೇ ಸಹಕಾರ ಸಪ್ತಾಹ–2026ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ ಮದ್ಯ ಕಳ್ಳಸಾಗಣೆಗ್ರಾಮೀಣ ಸಮುದಾಯಗಳಲ್ಲಿ ದೃಷ್ಟಿ ರಕ್ಷಿಸಲು ಬೆಳಗಾವಿಯ ರೋಟರಿ ಕ್ಲಬ್ ಸಂಚಾರಿ ಮಧುಮೇಹ ರೆಟಿನೋಪತಿ ತಪಾಸಣಾ ಯೋಜನೆಯನ್ನು ಪ್ರಾರಂಭಿಸಿದೆಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆ