18 Nov 2026, 12:23:55 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಮೆ 9-10 ಜಿತೋ ಹರ್ಷೋತ್ಸವ

ಬೆಳಗಾವಿ-05 : ಕಳೆದ ಹಲವಾರು ವರ್ಷಗಳಿಂದ ವಿವಿಧ ಸಾಮಾಜಿಕ‌ ಕಾರ್ಯಗಳನ್ನು ಮಾಡುತ್ತ ಬಂದಿರುವ ಜೈನ ಇಂಟರ್ ನ್ಯಾಶನಲ್ ಟ್ರೆಡ ಆರ್ಗನೈಸೇಶನ್ ಜಿತೋ ಸಂಸ್ಥೆ ಬೆಳಗಾವಿ ವತಿಯಿಂದ ಹಾಗೂ ಜಿತೋ ಕೆಕೆಜಿ ವಲಯ ಇವರ ಸಹಯೋಗದೊಂದಿಗೆ ಮೆ 9 ಮತ್ತು 10 ಎರಡು ದಿನಗಳ‌ ಕಾಲ ಜಿತೋ ಹರ್ಷೋತ್ಸವ ಕಾರ್ಯಕ್ರಮವನ್ನು ಬೆಳಗಾವಿಯ ಕೆ.ಎಲ್.ಇ. ಶತಮಾನೋತ್ಸವ ಸಭಾಗೃಹದಲ್ಲಿ ನಡೆಯಲಿದೆ ಎಂದು ಜಿತೋ ಅಧ್ಯಕ್ಷ ಹರ್ಷವರ್ಧನ ಇಂಚಲ ಅವರು ಇಂದಿಲ್ಲಿ ಹೇಳಿದರು.
ಬೆಳಗಾವಿ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿತೋ ಸಂಸ್ಥೆಯು ಪ್ರತಿವರ್ಷ ಆರೋಗ್ಯ ತಪಾಸಣೆ ಶಿಬಿರ , ರಕ್ತದಾನ ಶಿಬಿರ ಸೇರಿದಂತೆ ಇನ್ನಿತರ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದೆ.‌ಇದೀಗ ಜಿತೊ ಹರ್ಷೋತ್ಸವ ಕಾರ್ಯಕ್ರಮ ಮೂಲಕ ಬೆಳಗಾವಿಯ ಜನತೆಗೆ ಹೆಚ್ಚಿನ ಜ್ಞಾನಾರ್ಜನೆ ನೀಡುವ ಉದ್ದೇಶದಿಂದ ವಿವಿಧ ಕ್ಷೇತ್ರಗಳ ತಜ್ಞ ಉಪನ್ಯಾಸಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮ ಸಂಯೋಜಕ ವಿಕ್ರಮ ಜೈನ ಅವರು ಮಾತನಾಡಿ , ಏಪ್ರಿಲ್ 9 ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ‌. ರಾಷ್ಟ್ರೀಯ ವ್ಯಾಪಾರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಸುನಿಲ ಶಿಂಘಿ ಅವರು ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿ ವಿಶೇಷ ಉಪನ್ಯಾಸ ನೀಡುವರು. ಅವರೊಂದಿಗೆ ಜಿತೋ ಅಪೆಕ್ಸ್ ಪದಾಧಿಕಾರಿಗಳು ಉಪಸ್ಥಿತರಿರುವರು ಎಂದು ಅವರು ಹೇಳಿದರು.
ಮಧ್ಯಾಹ್ನದ ಅವಧಿಯಲ್ಲಿ ವಿವಿಧ ಸ್ಥರದ ನೈಜ ಕಥೆಗಳ ವಿವರವನ್ನು ಶಾನದಾರ ಶಾಂತಿಭಾಯಿ ಅವರು ನೀಡಲಿದ್ದಾರೆ. ತನ್ನ ಜಾದು ಕಲೆಯ ಮೂಲಕ ಮನಸ್ಸು ಅರ್ಥಮಾಡಿಕೊಂಡು ಅದನ್ನು ಉತ್ತರಿಸುವ ಕಲಾಕಾರ ವಿವೇಕ ಶಿಂಘಿ ಅವರು ತಮ್ಮ ಜಾದು ಕಲೆಯನ್ನು ಪ್ರದರ್ಶಿಸುವರು. ಸಾಯಂಕಾಲ 7 ಗಂಟೆಗೆ ಖ್ಯಾತ ಭಕ್ತಿಗೀತೆ ಹಾಡುವ ವಿವೇಕ ಡಿ. ಪಾರೇಖ ಮತ್ತು ಅವರ ತಂಡದಿಂದ ವಿಶೇಷ ಭಕ್ತಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.
ಮೇ 10 ರಂದು ಬೆಳಿಗ್ಗೆ ದೈವಿಶಕ್ತಿ ಮತ್ತು ಮಹಿಳಾ ನಿರ್ಭರತಾ ಕುರಿತು ಖ್ಯಾತ ಆಧ್ಯಾತ್ಮಿಕ ಉಪನ್ಯಾಸಕ ರಿಷಿ ನಂದಾ ಅವರು ಉಪನ್ಯಾಸ ನೀಡುವರು. ತದನಂತರ ಕೃಷ್ಣಾ ರಾಠಿ ಇವರು ವೈಯಕ್ತಿಕ ಮತ್ತು ವ್ಯವಹಾರ ಬ್ರ್ಯಾಂಡ್ ನಿರ್ಮಾಣ ಬಗ್ಗೆ ಮಾತನಾಡುವರು. ಭಾರತ ದೇಶದ ರಾಜತಾಂತ್ರಿಕ ಹಾಗೂ ಕೇಂದ್ರ ಸರಕಾರದ ಓರ್ವ ಸಲಹೆಗಾರರಾದ ನಿವೃತ್ತ ಐಎಫ್ ಎಸ ಅಧಿಕಾರಿ ಡಾ. ದೀಪಕ‌ ವೋರಾ ಅವರು " ಜಾಮವಂತ ಪರಿಣಾಮ- ಇಂಡಿಯಾ ಹೇಗೆ ಭಾರತವಾಗುತ್ತದೆ" ಎಂಬ ವಿಷಯ ಬಗ್ಗೆ ಮಾತನಾಡುವರು ಎಂದು ಅವರು ತಿಳಿಸಿದರು. ‌
ಮಧ್ಯಾಹ್ನದ ಅವಧಿಯಲ್ಲಿ ಜೀವನದಲ್ಲಿ ಎಲ್ಲವೂ ಸಾಧ್ಯ ಎಂಬ ವಿಷಯ ಕುರಿತು ರಾಹುಲ ಕಪೂರ ಅವರು ಮಾತನಾಡಲಿದ್ದಾರೆ. ಇದಾದ ಬಳಿಕ ಯುವ ಯಶಸ್ವಿ ಉದ್ಯಮಿಗಳ ಸಂದರ್ಶನ ನಡೆಯಲಿದೆ ಎಂದು ಹೇಳಿದ ಅವರು ಈ ಎಲ್ಲ ಕಾರ್ಯಕ್ರಮಗಳು ಆಹ್ವಾನಿತ ಪಾಸಗಳ ‌ಮೇಲೆ ಪ್ರವೇಶ ನೀಡಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿತೋ ಸಂಸ್ಥೆಯ ಪದಾಧಿಕಾರಿ ಅಭಯ ಆದಿಮನಿ ಸೇರಿದಂತೆ ಮೊದಲಾದವರು ಹಾಜರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ73ನೇ ಸಹಕಾರ ಸಪ್ತಾಹ–2026ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ ಮದ್ಯ ಕಳ್ಳಸಾಗಣೆಗ್ರಾಮೀಣ ಸಮುದಾಯಗಳಲ್ಲಿ ದೃಷ್ಟಿ ರಕ್ಷಿಸಲು ಬೆಳಗಾವಿಯ ರೋಟರಿ ಕ್ಲಬ್ ಸಂಚಾರಿ ಮಧುಮೇಹ ರೆಟಿನೋಪತಿ ತಪಾಸಣಾ ಯೋಜನೆಯನ್ನು ಪ್ರಾರಂಭಿಸಿದೆಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆ