18 Nov 2026, 12:31:36 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಲಿಂಗಾಯತ ಸಂಘಟನೆ ವತಿಯಿಂದ ಗುರುಪೂರ್ಣಿಮೆ ಕಾರ್ಯಕ್ರಮ

ಜೀವನದ ಅರಿವಿಗೆ ಮತ್ತು ಗುರಿಗೆ ಗುರು ಮುಖ್ಯ -ಸುಶೀಲಾ ಗುರವ
ಬೆಳಗಾವಿ-03. - ನಮ್ಮ ಜೀವನಕ್ಕೆ ಒಂದು ದಾರಿ ಗೊತ್ತು ಗುರಿ ತೋರಿಸುವ ಮೂಲಕ ನಮ್ಮ ಜೀವನದ ಮಹತ್ವದ ಕುರಿತು ಅರಿವು ಮೂಡಿಸಲು ಮತ್ತು ಸೂಕ್ತವಾದ ರೀತಿಯಲ್ಲಿ ಮಾರ್ಗದರ್ಶನ ಮಾಡಲು ಗುರುವಿನ ಅವಶ್ಯಕತೆ ಬಹಳ ಇದೆ. ಆ ನಿಟ್ಟಿನಲ್ಲಿ ಗುರು ಸದಾ ಸ್ಮರಣೀಯ ಎಂದು ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕಿ ಸುಶೀಲಾ ಗುರವ ರವಿವಾರ ದಿ. 2 ರಂದು ಬೆಳಗಾವಿ ನಗರದ ಫ. ಗು.ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಗುರುವಿನ ಮಹತ್ವ ಕುರಿತು ಮಾತನಾಡಿದರು. ಅತಿಥಿಗಳಾದ ಶಂಕರ ಗುಡಸ್ ಮಾತನಾಡಿ ಜೀವನದಲ್ಲಿ ಗುರು ಎಷ್ಟು ಪ್ರಮುಖ ಸ್ಥಾನ ವಹಿಸುತ್ತಾನೆ ಎಂಬುದನ್ನು ಚಿಕ್ಕ ದೃಷ್ಟಾಂತಗಳನ್ನು ನೀಡುವುದರ ಮೂಲಕ ವಿವರಣೆ ನೀಡಿದರು. ಇದೇ ಸಂದರ್ಭದಲ್ಲಿ ಶರಣರಾದ ಸದಾಶಿವ ದೇವರಮನಿ,ಶಶಿಭೂಷಣ್ ಪಾಟೀಲ ಸತೀಶ ಪಾಟೀಲ ಸೇರಿದಂತೆ ಅನೇಕ ಶರಣರು ಗುರುವಿನ ಮಹತ್ವ ಮತ್ತು ಗುರುವಿಲ್ಲದ ಜೀವನ ನಿರರ್ಥಕ ಎಂಬುದರ ಸಾರ ಹೇಳುತ್ತಾ ಗುರುವಿನ ಮಹತ್ವವನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಗುರುಪೂರ್ಣಿಮೆ ನಿಮಿತ್ತ ಮಾದರಿ ಶಿಕ್ಷಕ ವೃತ್ತಿಯನ್ನು ನಡೆಸುತ್ತಿರುವ ಮತ್ತು ಸಮಾಜಕ್ಕೆ ಮಾದರಿಯಾದ ಶಿಕ್ಷಕರಾದ ಮಹಾಂತೇಶ ಮೆಣಸಿನಕಾಯಿ , ಮಹಾಂತೇಶ ತೋರಣಗಟ್ಟೆ, ಶಿವಾನಂದ ತಲ್ಲೂರ, ಅಶೋಕ ಉಳ್ಳೇಗಡ್ಡಿ, ಶ್ರೀದೇವಿ ನರಗುಂದ , ಎಂ ಎಸ್, ಸಾರಾಪೂರಿ ರವರನ್ನು ಗುರು ಪೂರ್ಣಿಮೆ ನಿಮಿತ್ತ ಸನ್ಮಾನಿಸಲಾಯಿತು. ಬಸವೇಶ್ವರ ಬ್ಯಾಂಕಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಮಾಜ ಸೇವಕಿ ಸರಳಾ ಹೆರೆಕರ ರವರನ್ನು ಸಹ ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು. ಸತ್ಕಾರ ಸ್ವೀಕರಿಸಿ ಸರಳಾ ಹೆರೆಕರ ಕಳೆದ ಹಲವಾರು ವರ್ಷಗಳಿಂದ ತಮ್ಮದೇ ಆದ ಸಮಾಜ ಸಂಸ್ಥೆಗಳ ಅಡಿಯಲ್ಲಿ ನಿರ್ಗತಿಕ, ಅನಾಥರಿಗೆ ಮತ್ತು ಬಡವರಿಗೆ ಮತ್ತು ವಿಶೇಷ ಚೇತನರಿಗೆ ಕೈಲಾದ ಸೇವೆ ಮಾಡುತ್ತಾ ಸಾಗಿದ್ದು ಇದಕ್ಕೆ ಬಸವ ತತ್ವಗಳೇ ಪ್ರೇರಣೆ ಆ ನಿಟ್ಟಿನಲ್ಲಿ ಎಲ್ಲರೂ ಬಸವ ತತ್ವ ಅಡಿಯಲ್ಲಿ ಸಾಮಾಜಿಕ ಸುಧಾರಣೆಗಾಗಿ ಶ್ರಮಿಸೋಣ ಎಂದರು. ಸಂಘಟನೆ ಅಧ್ಯಕ್ಷ ಈರಣ್ಣ ದೇಯನ್ನವರ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಆನಂದ ಕರ್ಕಿ , ಬಸವರಾಜ ಬಿಜ್ಜರಗಿ. ಸುವರ್ಣ ಗುಡಸ, ಅಕ್ಕಮಹಾದೇವಿ ತೆಗ್ಗಿ,ಜೆ ಬಿ ಜವಣಿ ,ಶ್ರೀದೇವಿ ನರಗುಂದ,
ಸುನೀಲ ಸಾಣಿಕೊಪ್ಪ, ನಂದಾ ಬಗಲಿ,ಸೋಮಶೇಖರ ವಾಲಿ ಇಟಗಿ,ಶಿವಾನಂದ ನಾಯಕ,ಬಾಬು ತಿಗಡಿ,ಲಕ್ಷ್ಮೀ ಜವಣಿ, , ಸೋಮಶೇಖರ ಹೊಸಮನಿ, ಶಿವಾನಂದ ನಾಯಕ,ಸಂಗಮ ಹಿರೇಮಠ
ಚನಪ್ಪ ನರಸನ್ನವರ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಮಹಾದೇವಿ ಅರಳಿ ವಚನ ಪ್ರಾರ್ಥನೆಯೊಂದಿಗೆ ಸ್ವಾಗತಿಸಿದರು. ಸಂಗಮೇಶ ಅರಳಿ ನಿರೂಪಿಸಿದರು. ಸುರೇಶ ನರಗುಂದ ವಂದಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ73ನೇ ಸಹಕಾರ ಸಪ್ತಾಹ–2026ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ ಮದ್ಯ ಕಳ್ಳಸಾಗಣೆಗ್ರಾಮೀಣ ಸಮುದಾಯಗಳಲ್ಲಿ ದೃಷ್ಟಿ ರಕ್ಷಿಸಲು ಬೆಳಗಾವಿಯ ರೋಟರಿ ಕ್ಲಬ್ ಸಂಚಾರಿ ಮಧುಮೇಹ ರೆಟಿನೋಪತಿ ತಪಾಸಣಾ ಯೋಜನೆಯನ್ನು ಪ್ರಾರಂಭಿಸಿದೆಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆ