18 Nov 2026, 12:44:12 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಲಿಂಗಾಯತ ಸಂಘಟನೆ ವತಿಯಿಂದ ಚಿಂತನ ಕಾರ್ಯಕ್ರಮ - ಸತಿಪತಿಯರ ಭಾಂದವ್ಯದಲ್ಲಿದೆ ಸಾಮಾಜಿಕ ಸಾಮರಸ್ಯ- ಸಾಹಿತಿ ಶ್ರೀಕಾಂತ ಶಾನವಾ

ಸತಿಪತಿಯರಲ್ಲಿ ಅನ್ಯೋನ್ಯತೆ, ಸಾಮರಸ್ಯ ಭಾವನೆಯ ಬಾಂಧವ್ಯ, ಸಹಾನುಭೂತಿ, ಕುಟುಂಬದ ಕಳಕಳಿ ಇದ್ದರೆ ಅದು ಸಾಮಾಜಿಕ ಸಾಮರಸ್ಯಕ್ಕೆ ನಾಂದಿಯಾಗುತ್ತದೆ. ಆದಕಾರಣ ಸತಿಪತಿಯರ ಭಾವ ಬಂಧ ಅತಿ ಪ್ರಮುಖವಾಗಿದೆ ಎಂದು ಸಾಹಿತಿ ಶ್ರೀಕಾಂತ ಶಾನವಾಡ ರವಿವಾರ ದಿ. 22 ರಂದು ಬೆಳಗಾವಿ ನಗರದ ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆಯ ವತಿಯಿಂದ ಹಮ್ಮಿಕೊಳ್ಳಲಾದ ವಾರದ ಪ್ರಾರ್ಥನೆ ಮತ್ತು ಚಿಂತನ ಕಾರ್ಯಕ್ರಮದಲ್ಲಿ 'ದಾಂಪತ್ಯ ಧರ್ಮ' ವಿಷಯ ಕುರಿತು ಮಾತನಾಡಿದರು.
ಇತ್ತಿಚಿನ ದಿನಗಳಲ್ಲಿ ಸಾಮಾಜಿಕ, ಕೌಟುಂಬಿಕ ಸ್ಥಿತಿ ಹದಗೆಡಲು ಭಿನ್ನಾಭಿಪ್ರಾಯಗಳೇ ಕಾರಣವಾಗಿದೆ 12ನೇ ಶತಮಾನದಲ್ಲಿ ಶರಣರ ಯುಗದಲ್ಲಿ ಸತಿಪತಿಯರಲ್ಲಿದ್ದ ಅವಿನಾಭಾವ ಸಂಬಂಧ ನಿಜಕ್ಕೂ ಅನುಕರಣಿಯ ಮತ್ತು ಸ್ಮರಣೀಯವಾಗಿದೆ.ಆ ನಿಟ್ಟಿನ ಬಾಂಧವ್ಯ ಸಮಾಜದಲ್ಲಿ ಕಣ್ಮರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿ ಅಕ್ಕಮಹಾದೇವಿ ಚನ್ನಬಸವಣ್ಣ, ಆಯ್ದಕ್ಕಿ ಲಕ್ಕಮ್ಮ ಮುಂತಾದ ಶರಣರ ಅನೇಕ ದೃಷ್ಟಾಂತಗಳನ್ನು ಬಾಂಧವ್ಯದ ಕುರಿತಾಗಿ ವಿವರಿಸಿದರು. ಇದೇ ಸಂದರ್ಭದಲ್ಲಿ ಲಿಂಗಾಯತ ಸಂಘಟನೆಯ ವಾರದ ಪ್ರಾರ್ಥನೆ,ಚಿಂತನ, ಉಪನ್ಯಾಸ ಕಾರ್ಯಕ್ರಮಗಳು ನೆರವೇರುವಲ್ಲಿ ಕ್ರಿಯಾಶೀಲರಾಗಿ ಶ್ರಮ ವಹಿಸುತ್ತಿರುವ ಸಾಹಿತಿ ಮಹಾಂತೇಶ ಮೆಣಸಿನಕಾಯಿ ರವರನ್ನು ಸಂಘಟನೆ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಶಿಭೂಷಣ ಪಾಟೀಲ, ವಿಕೆ ಪಾಟೀಲ್, ಸದಾಶಿವ ದೇವರಮನಿ, ಬಸವರಾಜ ಬಿಜ್ಜರಗಿ, ಬಸವರಾಜ ಕರಡಿಮಠ, ಎಸ್. ಎಸ್. ಪೂಜಾರ, ಪ. ಬ. ಕರಿಕಟ್ಟಿ, ಮಹದೇವ ಕೆoಪಿಗೌಡ್ರ, ಶೇಖರ ವಾಲಿಇಟಗಿ, ಗುರಸಿದ್ದಪ್ಪ ರೇವಣ್ಣವರ,ಶoಕ್ರಪ್ಪ ಮೆಣಸಗಿ,ವಿರೂಪಾಕ್ಷ ದೊಡ್ಡಮನಿ, ಅಕ್ಕನವರ ದoಪತಿಗಳು, ಸುನಿಲ್ ಸಾಣಿಕೊಪ್ಪ, ಲಕ್ಷ್ಮಿಕಾಂತ ಗುರವ,ಶಿವಾನಂದ ತಲ್ಲೂರ ಅಕ್ಕಮಹಾದೇವಿ ತೆಗ್ಗಿ ಸೇರಿದಂತೆ ಅನೇಕ ಶರಣ ಶರಣೆಯರು ಉಪಸ್ಥಿತರಿದ್ದರು ಕಾರ್ಯಕ್ರಮದ ಆರಂಭದಲ್ಲಿ ಸುರೇಶ ನರಗುoದ ಪ್ರಾರ್ಥಿಸಿದರು. ಆನಂದ ಕರ್ಕಿ ವಚನ ವಿಶ್ಲೇಷಣೆ ಮಾಡಿದರು. ಸಂಗಮೇಶ ಅರಳಿ ನಿರೂಪಿಸಿದರು ವಚನಮಂಗಳದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ73ನೇ ಸಹಕಾರ ಸಪ್ತಾಹ–2026ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ ಮದ್ಯ ಕಳ್ಳಸಾಗಣೆಗ್ರಾಮೀಣ ಸಮುದಾಯಗಳಲ್ಲಿ ದೃಷ್ಟಿ ರಕ್ಷಿಸಲು ಬೆಳಗಾವಿಯ ರೋಟರಿ ಕ್ಲಬ್ ಸಂಚಾರಿ ಮಧುಮೇಹ ರೆಟಿನೋಪತಿ ತಪಾಸಣಾ ಯೋಜನೆಯನ್ನು ಪ್ರಾರಂಭಿಸಿದೆಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆ