18 Nov 2026, 12:29:50 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಅನುಭಾವದ ಹೆಜ್ಜೆಗಳು ಶರಣರಿಂದ ಜನಪದರವರಗೆ

ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಶ್ರಾವಣ ಮಾಸದ ಅಂಗವಾಗಿ ಮನೆ ಮನಗಳಲ್ಲಿ ಬಸವ ಭಾವ ಪೂಜೆ ಕಾರ್ಯಕ್ರಮ ಹಮ್ಮಿಕೊಂಡಿದ್ದು. ಶರಣ ದಂಪತಿಗಳಾದ ರೇಖಾ ಬಸವರಾಜ ಮುದ್ದಾಪುರ ಅವರ ಮನೆಯಲ್ಲಿ ದಿನಾಂಕ 23,8,2026 ರಂದು ನೇರೆವೆರಿತು. ಶರಣೆ ವಿಜಯ ಲಕ್ಷ್ಮಿ ಪುಟ್ಟಿಯವರು ಹೆಡ್ ಆಫ್ ದ ಡಿಪಾರ್ಟ್ಮೆಂಟ್ ಇಂಗ್ಲಿಷ್ ಮರಾಠ ಮಂಡಳ ಆರ್ಟ್ಸ್ ಕಾಮರ್ಸ್ ಸಾಯಿನ್ಸ ಕಾಲೇಜು ಖಾನಾಪುರ ಇವರು ಇಂದಿನ ಉಪನ್ಯಾಸ ನಡೆಸಿಕೊಟ್ಟರು. ಅವರು “ಅನುಭಾದ ಹೆಜ್ಜೆಗಳು ಶರಣರಿಂದ ಜನಪದರವರೆಗೆ “ ಕುರಿತು ಮಾತನಾಡಿದರು ಜಾನಪದ ಸಾಹಿತ್ಯವು ಸುಮಾರು ಐದನೇ ಶತಮಾನದಿಂದ ಇದ್ದು ಅನುಭವದ ನೆಲೆಯಿಂದ ಬಂದಿದು ಅನಕ್ಷರರೆ ಆಡುಭಾಷೆಯಲ್ಲಿ ರಚಿಸಿದ ಪದಗಳಾಗಿವೆ ಶರಣರು ಕೂಡಾ ತಮ್ಮ ಜೀವನದ ಅನುಭಾದಿಂದ ವಚನಗಳನ್ನು ರಚಿಸಿದರು ಜನಪದ ಸಾಹಿತ್ಯ ಮತ್ತು ವಚನ ಸಾಹಿತ್ಯಕ್ಕೂ ಒಂದು ಅವಿನಾಭಾವ ಸಂಬಂಧವಿದೆ ಇವು ಅನುಭದ ಮೂಲಕ ರಚನೆಯಾಗಿವೆ ಇವುಗಳ ಕ್ಷೇತ್ರ ವಿಶಾಲವಾಗಿದ್ದು ಅವುಗಳಲ್ಲಿ ಮುಖ್ಯವಾಗಿ ಎರಡನ್ನು ಆಯ್ದು ಕೊಂಡು ನೋಡುವುದಾದರೆ ಕಾಯಕ ಮತ್ತು ದಾಂಪತ್ಯ ಜೀವನ ಬಹಳ ಮಹತ್ವವದ್ದಾಗಿದೆ ಶರಣರು ಕಾಯಕಕ್ಕೆ ಹೆಚ್ಚಿನ ಮಹತ್ವ ಕೊಟ್ಟರೆ ಜಾನಪದರು ಬದುಕೆ ಒಕ್ಕಲುತನವಾಗಿತ್ತು ಬೆಳಿಗ್ಗೆಯಿಂದ ರಾತ್ರಿಯವರೆಗೆ ದುಡಿಯುತಿದ್ದರು . ಸತಿಪತಿಗಳ ಭಕ್ತಿ ಹಿತವಪ್ಪುವುದು ಶಿವಂಗೆ ಎಂಬಂತೆ ಜನಪದರು ಒಲುವಿನಿಂದ, ಹುಸಿ ಮುನಿಸು, ಸರಸ, ವಿರಸ, ಸಮರಸದಿಂದ ಬದುಕುತ್ತಿದ್ದರು. ಬದುಕನ್ನು ಸುಂದರವಾಗಿ ಕಟ್ಟಿಕೊಂಡು ಬದುಕಿ ಬಾಳಿ ನಮಗೆ ಮಾದರಿಯಾಗಿ ವಚನ ಸಾಹಿತ್ಯವನ್ನು ಮತ್ತು ಜಾನಪದ ಸಾಹಿತ್ಯವನ್ನು ಕೊಟ್ಟು ಹೋಗಿದ್ದಾರೆ ಎಂದು ಅನೇಕ ವಚನಗಳನ್ನು ಮತ್ತು ತ್ರಿಪದಿಗಳನ್ನು ಹಾಡಿ ಎಲ್ಲರ ಮನ ಮುಟ್ಟುವಂತೆ ಹೇಳಿದರು ಅಷ್ಟೇ ಅಲ್ಲದೆ ಪ್ರಸ್ತುತ ಇಂದಿನ ದಿನಮಾನದಲ್ಲಿ ಇದು ಅತ್ಯಂತ ಅವಶ್ಯವಾಗಿದ್ದು ಇಂದು ವಿಚ್ಛೇದನಗಳು ಹೆಚ್ಚುತಿದ್ದು ಹೊಂದಾಣಿಕೆ ಎಂಬುದು ಕಡಿಮೆಯಾಗಿದೆ. ಯುವ ಜನಾಂಗವು ಈ ಸಾಹಿತ್ಯವನ್ನು ಅರ್ಥೈಸಿಕೊಳ್ಳುವುದು ತುಂಬಾ ಅವಶ್ಯವಾಗಿದೆ ಈ ನಿಟ್ಟಿನಲ್ಲಿ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘವು ಇಂತಹ ವಿಷಯಗಳನ್ನು ಎಲ್ಲರ ಮನ ಮನೆಗಳಿಗೆ ತಲುಪಿಸುವ ಕೆಲಸ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಹೇಳಿದರು.

ಶರಣರಾದ ಪ್ರೋಪೆಸರ ಶ್ರೀಕಾಂತ್ ಶಾನವಾಡ ಸರ್ ಅವರು ಬಸವ ಭಾವ ಪೂಜೆ ಕುರಿತು ಶರಣ ಸಿದ್ದರಾಮರ ವಚನ ವಿಶ್ಲೇಷಣೆ ಮಾಡಿದರು

ಶರಣೆ ಸುನಿತಾ ನಂದೆಣ್ಣವರ ನಿರೂಪಣೆ ಮಾಡಿದರು ಶರಣೆ ಶೋಭಾ ಶಿವಳ್ಳಿ ಮತ್ತು ಸಂಗಡಿಗರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ಶರಣೆಯರಾದ ನಯನಾ ಗಿರಿಗೌಡರ, ಕಾವೇರಿ ಕಿಲಾರಿ, ವಚನ ಗಾಯನ ಮಾಡಿದರು. ಅಧ್ಯಕ್ಷರು ಎಸ್, ಜಿ ,ಸಿದ್ನಾಳರು, ಕಾರ್ಯದರ್ಶಿ ಶಂಕರ ಶೆಟ್ಟಿಯವರು ಉಪಾಧ್ಯಕ್ಷರು ಕುಂದ್ರಾಳರು, ಕಟ್ಟಿಮನಿ ,ರುದ್ರಗೌಡರ ,ಕೋರೆ , ಉಮಾ ಸಂಕೇಶ್ವರ, ವಿಜಯಾ ಅಮ್ಮನಿಗೆ ಲಲಿತಾ ರುದ್ರಗೌಡರ ಶಾರದಾ ಉಡಕೇರಿ ನಾಗರತ್ನಾ ಪಾಟಿಲ ಮುಂತಾದ ಶರಣ ಶರಣೆಯರು ಹಾಜರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ73ನೇ ಸಹಕಾರ ಸಪ್ತಾಹ–2026ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ ಮದ್ಯ ಕಳ್ಳಸಾಗಣೆಗ್ರಾಮೀಣ ಸಮುದಾಯಗಳಲ್ಲಿ ದೃಷ್ಟಿ ರಕ್ಷಿಸಲು ಬೆಳಗಾವಿಯ ರೋಟರಿ ಕ್ಲಬ್ ಸಂಚಾರಿ ಮಧುಮೇಹ ರೆಟಿನೋಪತಿ ತಪಾಸಣಾ ಯೋಜನೆಯನ್ನು ಪ್ರಾರಂಭಿಸಿದೆಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆ