18 Nov 2026, 12:25:27 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

"ಕಟ್ಟೀಮನಿ ಕಥೀ ಹೇಳೂಣು" ಮಾಲಿಕೆಯಲ್ಲಿ ವಿದ್ಯಾರ್ಥಿನಿಯರಿಗೆ ಕಥಾ ಸ್ಪರ್ಧೆ ಕಾರ್ಯಕ್ರಮ

ಬೆಳಗಾವಿ-14:ದಿನಾಂಕ: 11-10-2025 ರಂದು, ಬೆಳಗಾವಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಐಕ್ಯೂಎಸಿ ಘಟಕದ ಅಡಿಯಲ್ಲಿ ಕನ್ನಡ ವಿಭಾಗ ಹಾಗೂ ಕರ್ನಾಟಕ ಸರ್ಕಾರ, ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಇವುಗಳ ಸಹಯೋಗದಲ್ಲಿ "ಕಟ್ಟೀಮನಿ ಕಥೀ ಹೇಳೂಣು" ಮಾಲಿಕೆಯಲ್ಲಿ ವಿದ್ಯಾರ್ಥಿನಿಯರಿಗೆ ಕಥಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಡಾ.ಕೆ.ಆರ್ ಸಿದ್ದಗಂಗಮ್ಮ ಸದಸ್ಯರು, ಬಸವರಾಜ ಕಟ್ಟೀಮನಿ ಪ್ರತಿಷ್ಠಾನ,ಬೆಳಗಾವಿ ಇವರು ಆಗಮಿಸಿ ಕತೆ ಓದುವ ಕಲೆಯ ಬಗ್ಗೆ ತಿಳಿಸುತ್ತಾ,ಯುವಜನತೆ ಸಾಹಿತ್ಯದ ಅಧ್ಯಯನದಲ್ಲಿ ತೊಡಗಬೇಕು, ಕಟ್ಟೀಮನಿಯವರ ಅದ್ಭುತ ಸಾಹಿತ್ಯವನ್ನು ರಚಿಸಿ ನಮಗೆ ಕನ್ನಡ ಆಸ್ತಿಯಾಗಿ ಬಿಟ್ಟು ಹೋಗಿದ್ದಾರೆ ಅವರು ಚಿಂತನೆಗಳನ್ನು ಅರ್ಥೈಸಿಕೊಂಡು ನಡೆಯುವುದು ಮುಖ್ಯವಾಗಿದೆ. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಎಸ್ ಗಂಗನಳ್ಳಿ ಅವರು ಬಸವರಾಜ ಕಟ್ಟೀಮನಿಯವರ ಜೀವನ, ಸಾಹಿತ್ಯಿಕ ಸಾಧನೆ, ವ್ಯಕ್ತಿತ್ವ ಹಾಗೂ ಅವರ ಪ್ರಗತಿಪರ ಚಿಂತನೆಗಳ ಕುರಿತು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಹೇಳಿದರು. ವಿದ್ಯಾರ್ಥಿನಿಯರಾದ ಕು. ಅಕ್ಷತಾ ಮೇತ್ರಿ,ಕು.ನಿರ್ಮಲಾ ರಾಘನ್ನವರ, ಕು. ಕಾವೇರಿ ಭಜಂತ್ರಿ ಮತ್ತಿತರ ಅನೇಕರು ಸ್ಪರ್ಧೆಯಲ್ಲಿ ಕಥೆಗಳನ್ನು ಹೇಳಿದರು. ಕಥಾಸ್ಪರ್ಧೆಯಲ್ಲಿ ಭಾಗವಹಿದವರಿಗೆ ಪುಸ್ತಕ ಬಹುಮಾನ ಮತ್ತು ಪ್ರಮಾಣ ಪತ್ರಗಳ ವಿತರಣೆಯನ್ನು ಮುಖ್ಯ ಅತಿಥಿಗಳು, ಅಧ್ಯಕರು ವಿತರಣೆ ಮಾಡಿದರು.ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಆರ್ ಪಾಟೀಲ ಅವರು ವಹಿಸಿ, ಓದುವ ಹವ್ಯಾಸವನ್ನು ಬೆಳೆಸಿಕೊಂಡು ಕಥೆ ಹೇಳುವ ಕಲೆಯಲ್ಲಿ ನಮ್ಮ ಹಿರಿಯರು ಕಲಿಯದಿದ್ದರೂ ಸರಾಗವಾಗಿ ಹೇಳುತ್ತಿದ್ದರು ಕಥೆಯನ್ನು ನಮ್ಮ ಭಾಷೆ, ಶೈಲಿಯಲ್ಲಿ ಹೇಳುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು. ಪ್ರಾರ್ಥನೆಯನ್ನು ಕು.ಪ್ರಗತಿ ಮುತ್ತೂರು ಹಾಗೂ ಸಂಗಡಿಗರು ಹಾಡಿದರು. ಸ್ವಾಗತ ಮತ್ತು ಪರಿಚಯವನ್ನು ಶ್ರೀ ಪ್ರಕಾಶ ಮಬನೂರ ಉಪನ್ಯಾಸಕರು ಮಾಡಿದರು. ವಂದನಾರ್ಪಣೆಯನ್ನು ಕು. ದೀಪಿಕಾ ಪಾಟೀಲ ಮಾಡಿದರು. ನಿರೂಪಣೆಯನ್ನು ಕು.ಪ್ರತಿಭಾ ಕಲ್ಲಿ ,ಮಾಡಿದರು, ಕಾರ್ಯಕ್ರಮದಲ್ಲಿ ಡಾ. ಪಿ.ಎ ಘಂಟಿ ,ಡಾ .ಪ್ರವೀಣ್ ಕೋರ್ಬು, ಡಾ. ನಾಗೇಶ ಗಾಡಿವಡ್ಡರ, ಶ್ರೀ ಪಿ.ಪಿ ಜಾಧಾವ ಸರ್ ಮತ್ತಿತರರು ಎಲ್ಲ ಬೋಧಕ ಮತ್ತು ಆಡಳಿತ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಕಾಲೇಜಿನ ರೇಂಜರ್ ತಂಡದವರು ಮಾಡಿದರು. ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿಬಂದಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ73ನೇ ಸಹಕಾರ ಸಪ್ತಾಹ–2026ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ ಮದ್ಯ ಕಳ್ಳಸಾಗಣೆಗ್ರಾಮೀಣ ಸಮುದಾಯಗಳಲ್ಲಿ ದೃಷ್ಟಿ ರಕ್ಷಿಸಲು ಬೆಳಗಾವಿಯ ರೋಟರಿ ಕ್ಲಬ್ ಸಂಚಾರಿ ಮಧುಮೇಹ ರೆಟಿನೋಪತಿ ತಪಾಸಣಾ ಯೋಜನೆಯನ್ನು ಪ್ರಾರಂಭಿಸಿದೆಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆ