19 Nov 2026, 01:45:13 AM|
Gold₹13444/gGold24K ₹13,444/g - 22K ₹12,313/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

*ಕರ್ನಾಟಕ ರಾಜ್ಯೋತ್ಸವ-2026: ಮಾಧ್ಯಮ ಪ್ರತಿನಿಧಿಗಳಿಗೆ ಸನ್ಮಾನ

ಬೆಳಗಾವಿ-31: ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಜಿಲ್ಲೆಯ 13 ಜನ ಮಾಧ್ಯಮ ಪ್ರತಿನಿಧಿಗಳಿಗೆ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಜಿಲ್ಲಾಡಳಿತದ ವತಿಯಿಂದ ರಾಜ್ಯೋತ್ಸವ ದಿನದಂದು ಗೌರವಿಸಿ, ಸನ್ಮಾನಿಸಲು ನಿರ್ಧರಿಸಲಾಗಿದೆ.

ಸನ್ಮಾನಿತರ ವಿವರ:

*ಮುದ್ರಣ ಮಾಧ್ಯಮ ವಿಭಾಗ:*

ದಿ ಹಿಂದೂ ಪತ್ರಿಕೆಯ ಹಿರಿಯ ಸಹಾಯಕ ಸಂಪಾದಕರಾದ ಹೃಷಿಕೇಶ ಬಹದ್ದೂರ ದೇಸಾಯಿ, ಕನ್ನಡಪ್ರಭ ದಿನಪತ್ರಿಕೆಯ ಸ್ಥಾನಿಕ ಸಂಪಾದಕರಾದ ಬ್ರಹ್ಮಾನಂದ ಹಡಗಲಿ,, ಪ್ರಜಾವಾಣಿ ದಿನಪತ್ರಿಕೆಯ ಜಿಲ್ಲಾ ವರದಿಗಾರರಾದ ಇಮಾಮಹುಸೇನ್ ಗೂಡುನವರ, ಲೋಕದರ್ಶನ ದಿನಪತ್ರಿಕೆಯ ಛಾಯಾಗ್ರಾಹಕರಾದ ವಿಶ್ವನಾಥ ದೇಸಾಯಿ,

*ವಿದ್ಯುನ್ಮಾನ‌ ಮಾಧ್ಯಮ‌ ವಿಭಾಗ:*

ಆರ್.ಕನ್ನಡ ಜಿಲ್ಲಾ ವರದಿಗಾರರಾದ ಮೈಲಾರಿ‌ ಪಟಾತ್, ಚಿಕ್ಕೋಡಿ‌ನ್ಯೂಸ್ 18 ವರದಿಗಾರರಾದ ಲೋಹಿತ್ ಶಿರೋಳ, ಸುವರ್ಣ ನ್ಯೂಸ್ ಕ್ಯಾಮರಾಮನ್ ಅಡಿವೆಪ್ಪ ಪಾಟೀಲ, ಟಿ.ವಿ.9 ಸಂಸ್ಥೆಯ ಕ್ಯಾಮರಾಮನ್ ಸದಾಶಿವ ಜಾಧವ.

*ಜಿಲ್ಲಾ/ಪ್ರಾದೇಶಿಕ ದಿನಪತ್ರಿಕೆ ಸಂಪಾದಕರ ವಿಭಾಗ:*

ಲೋಕದರ್ಶನ ದಿನಪತ್ರಿಕೆಯ ಸಂಪಾದಕರಾದ ಶರತಚಂದ್ರ ದೇಸಾಯಿ ಹಾಗೂ ಕನ್ನಡಮ್ಮ‌ ದಿನಪತ್ರಿಕೆಯ ಸಂಪಾದಕರಾದ ರಾಜಕುಮಾರ್ ಟೋಪಣ್ಣವರ

*ತಾಲ್ಲೂಕು ವರದಿಗಾರರ ವಿಭಾಗ:*

ವಿಜಯವಾಣಿ ದಿನಪತ್ರಿಕೆ ಅಥಣಿ ವರದಿಗಾರರಾದ ರಾಜು ಗಾಲಿ, ಕನ್ನಡಪ್ರಭ ದಿನಪತ್ರಿಕೆಯ ಯಮಕನಮರಡಿ ವರದಿಗಾರರಾದ ಕೆ.ಎಂ.ಕರ್ನಾಚಿ

*ಪತ್ರಿಕಾ‌ ವಿತರಕರ‌ ವಿಭಾಗ*

ಯಮಕನಮರಡಿಯ ಪತ್ರಿಕಾ ವಿತರಕರಾದ ಭೀಮಪ್ಪ ಕೋತೆಕರ.

*ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನ:*

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಪತ್ರಕರ್ತರನ್ನು ಒಳಗೊಂಡ ಆಯ್ಕೆ ಸಮಿತಿಯು ಇತ್ತೀಚೆಗೆ ನಡೆದ ಆಯ್ಕೆ ಸಮಿತಿಯ ಸಭೆಯಲ್ಲಿ ಸನ್ಮಾನಿತರನ್ನು ಸರ್ವಾನುಮತದಿಂದ ಆಯ್ಕೆ ಮಾಡಿರುತ್ತದೆ.

1 ನವೆಂಬರ 2026 ರಂದು ಮುಂಜಾನೆ 9.00 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜರಗುವ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಕ್ಕೆ ಭಾಜನರಾದ ಮಾಧ್ಯಮ ಪ್ರತಿನಿಧಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಗಣ್ಯರುಗಳು ಸನ್ಮಾನಿಸಲಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಹಾನಗರ ಪಾಲಿಕೆಯ ತೆರಿಗೆದಾರರಿಗೆ 3 ಜನಸ್ನೇಹಿ ಸೇವೆಗಳು : ಉಪ ಆಯುಕ್ತ ಡಾ. ಸಿದ್ದು ಹುಲ್ಲೋಳಿಅನುಮತಿ ಇಲ್ಲದಿದ್ದರೂ ಮಹಾಮೇಳಾವ ನಡೆಸಲು ಎಂಇಎಸ್ ಪಟ್ಟುಬೆಳಗಾವಿಯಲ್ಲಿ 'ಸಿಜಿಎಚ್‌ಎಸ್' (CGHS) ವೆಲ್‌ನೆಸ್ ಸೆಂಟರ್ ಸ್ಥಾಪಿಸಲು ಆಗ್ರಹಿಸಿ ಕೇಂದ್ರ ಸರ್ಕಾರಿ ನೌಕರರಿಂದ ಸಂಸದ ಶೆಟ್ಟರ್ ಗೆ ಮನವಿಬೆಳಗಾವಿಯಲ್ಲಿ 'ಸಿಜಿಎಚ್‌ಎಸ್' (CGHS) ವೆಲ್‌ನೆಸ್ ಸೆಂಟರ್ ಸ್ಥಾಪಿಸಲು ಆಗ್ರಹಿಸಿ ಕೇಂದ್ರ ಸರ್ಕಾರಿ ನೌಕರರಿಂದ ಸಂಸದ ಶೆಟ್ಟರ್ ಗೆ ಮನವಿಬೆಳಗಾವಿಯಲ್ಲಿ 'ಸಿಜಿಎಚ್‌ಎಸ್' (CGHS) ವೆಲ್‌ನೆಸ್ ಸೆಂಟರ್ ಸ್ಥಾಪಿಸಲು ಆಗ್ರಹಿಸಿ ಕೇಂದ್ರ ಸರ್ಕಾರಿ ನೌಕರರಿಂದ ಸಂಸದ ಶೆಟ್ಟರ್ ಗೆ ಮನವಿಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಟಿಳಕವಾಡಿಯ ಮೂರು ವಾರ್ಡಿನ ನಮ್ಮ ಸ್ವಚ್ಛತಾ ಕರ್ಮಚಾರಿ ಬಂಧು ಬಗಿನಿಯರಿಗೆ ವಿಶ್ವ ಹಿಂದುಪರಿಷತ್ತ ಸಾಮಾಜಿಕ ಸಾಮರಸ್ಯದ ವತಿಯಿಂದ ಮತ್ತು  ಶಹಾಪುರ ಲೈನ್ಸ ಕ್ಲಬ್ ವತಿಯಿಂದ ಜಂಟಿಯಾಗಿ ದೀಪಾವಳಿಯ(ಪರಾಳ) ಉಡುಗೊರೆ ಕೊಟ್ಟು ಗೌರವ ಅರ್ಪಣೆ. ಪತಿಯ ಮೃತದೇಹದ ಪಕ್ಕದಲ್ಲಿ ಕಣ್ಣೀರಿಡುತ್ತಿದ್ದ ಪತ್ನಿಗೆ ನೆರವಾದ ಮಾಜಿ ಮೇಯರ್ ವಿಜಯ್ ಮೋರೆ ಮತ್ತು ಸೋಶಿಯಲ್ ರೆಸ್ಕ್ಯೂ ತಂಡಮಂಗಳೂರು ಆಕಾಶವಾಣಿಯ ಉಡುಪಿಯ ನೂತನ ಒಂದು ಕಿಲೋ ವ್ಯಾಟ್‌ ಸಾಮರ್ಥ್ಯ (101.9 ಮೆಗಾಹರ್ಟ್ಸ್)‌ ಎಫ್‌.ಎಂ ಪ್ರೇಷಕದ ಉದ್ಘಾಟನಾ ಸಮಾರಂಭಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ