18 Nov 2026, 12:36:51 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಜನವರಿ 24 ಮತ್ತು 25 ರಂದು 28 ನೇ ಹರೇ ಕೃಷ್ಣ ರಥಯಾತ್ರೆ

ಬೆಳಗಾವಿ-22: ಅಂತರಾಷ್ಟ್ರೀಯ ಕೃಷ್ಣಭಾವನಾಮೃತ ಸಂಘ (ಇಸ್ಕಾನ್), ಬೆಳಗಾವಿವತಿಯಿಂದ ಸತತ 28ನೇ ವರ್ಷದ ಭವ್ಯ ಹರೇ ಕೃಷ್ಣ ರಥಯಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಶನಿವಾರ ಜ. 24 ಮತ್ತು 25 ರಂದು ಈ ಮಹೋತ್ಸವವು ಜರುl, ಇಸ್ಕಾನ್ ಬೆಳಗಾವಿ ಅಧ್ಯಕ್ಷ ಶ್ರೀ ಭಕ್ತಿರಸಾಮೃತ ಸ್ವಾಮಿ ಮಹಾರಾಜ್ ಅವರು ತಿಳಿಸಿದರು.
ಬುಧವಾರ ಸುದ್ಧಿ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 24 ರ ಶನಿವಾರದಂದು ಮುಖ್ಯ ರಥಯಾತ್ರೆ ಸಂಪನ್ನಗೊಳ್ಳಲಿದೆ. 24 ಮತ್ತು 25ರ ಉಭಯ ದಿನಗಳಂದು ಸಂಜೆ ಟಿಳಕವಾಡಿಯ ಶುಕ್ರವಾರ ಪೇಟೆಯಲ್ಲಿರುವ ಇಸ್ಕಾನ್ ಮಂದಿರದ ಹಿಂಭಾಗದ ಮೈದಾನದಲ್ಲಿ ಭವ್ಯ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿವರ್ಷದ ಸಂಪ್ರದಾಯದಂತೆ ಈ ಬಾರಿಯೂ ರಥಯಾತ್ರೆಯು ಅತ್ಯಂತ ಭಕ್ತಿಪೂರ್ವಕ ವಾತಾವರಣ ಮತ್ತು ಉತ್ಸಾಹದಿಂದ ಜರುಗಲಿದ್ದು, ದೇಶ-ವಿದೇಶಗಳ ಸಾವಿರಾರು ಭಕ್ತರು ಭಾಗಿಯಾಗಲಿದ್ದಾರೆ.
ಭಕ್ತಿ ಮತ್ತು ಆನಂದದ ಸಮ್ಮಿಲನವಾಗಲಿದೆ. ಈ ಮೆರವಣಿಗೆಯ ಪ್ರಮುಖ ಆಕರ್ಷಣೆಯೆಂದರೆ ಭಗವಾನ್ ಶ್ರೀ ರಾಧಾ-ಕೃಷ್ಣ ಮತ್ತು ಹಾಗೂ ನಯನಮನೋಹರ ರಥ. ಸುಂದರ ವಸ್ತ್ರಾಭರಣ ಹಾಗೂ ಪುಷ್ಪಹಾರಗಳಿಂದ ಅಲಂಕೃತಗೊಂಡ ರಥದಲ್ಲಿ ವಿರಾಜಮಾನರಾಗಿ ಭಗವಂತನು ಬೆಳಗಾವಿಯ ನಿವಾಸಿಗಳಿಗೆ ದರ್ಶನ ನೀಡಲಿದ್ದಾರೆ. ವಿವಿಧ ಕೀರ್ತನ ತಂಡಗಳು 'ಹರೇ ಕೃಷ್ಣ' ಮಹಾಮಂತ್ರದ ಜಯಘೋಷದೊಂದಿಗೆ ನೃತ್ಯ ಮಾಡಲಿವೆ. ಮಹಾರಾಷ್ಟ್ರ, ಕರ್ನಾಟಕ, ಗೋವಾ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಅಮೇರಿಕಾ ಸೇರಿದಂತೆ ವಿವಿಧ ಪಾಶ್ಚಾತ್ಯ ದೇಶಗಳಿಂದಲೂ ಭಕ್ತರು ಆಗಮಿಸಲಿದ್ದಾರೆ.
ಮೆರವಣಿಗೆಯಲ್ಲಿ ಭಗವಾನ್ ಶ್ರೀಕೃಷ್ಣನ ವಿವಿಧ ಲೀಲೆಗಳನ್ನುv ಬಿಂಬಿಸುವ ದೃಶ್ಯ ರೂಪಕಗಳು ಮತ್ತು ಸಾಂಪ್ರದಾಯಿಕ ಉಡುಪು ಧರಿಸಿದ ಮಕ್ಕಳಿಂದ ಕೃಷ್ಣಲೀಲೆಗಳ ಪ್ರದರ್ಶನ ಬೆಳಗಾವಿ ನಗರದ ವಿವಿಧ ಮಾರ್ಗಗಳಲ್ಲಿ ರಥಯಾತ್ರೆ ಸಂಚರಿಸಲಿದೆ, ಹಾಗೂ ಎತ್ತಿನ ಬಂಡಿಗಳ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ವಿಶೇಷವಾಗಿ, 'ಗೋ-ಸೇವಾ' ಮಳಿಗೆಯಲ್ಲಿ ಗೋಮೂತ್ರ ಮತ್ತು0 ಸಗಣಿಯಿಂದ ತಯಾರಿಸಿದ ವಿವಿಧ ಉತ್ಪನ್ನಗಳು ಲಭ್ಯವಿರುತ್ತವೆ. ಪ್ರತಿ ರಾತ್ರಿ 50,000ಕ್ಕೂ ಹೆಚ್ಚು ಜನರಿಗೆ ಉಚಿತ 'ಮಹಾಪ್ರಸಾದ' ವಿತರಿಸಲಾಗುವುದು. ಒಟ್ಟಾರೆಯಾಗ9o ಸುಮಾರು ಒಂದೂವರೆ ಲಕ್ಷ ಭಕ್ತಾದಿಗಳು ಈ ಮಹೋತ್ಸವದ ಲಾಭ ಪಡೆಯುವ ನಿರೀಕ್ಷೆಯಿದೆ.
ಈ ವೇಳೆ ಶ್ರೀರಾಮ ದಾಸ್, ಬಲರಾಮ ಭಕ್ತ ದಾಸ್, ನಾಗೇಂದ್ರ ದಾಸ್, ನಿತಾಯ್ ನಿಮಾಯ್ ದಾಸ್, ಅಮೃತ ಕೃಷ್ಣ ದಾಸ್, ವದಾನ್ಯ ಚೈತನ್ಯ ದಾಸ್, ಶ್ವೇತ ನಿತಾಯ್ ದಾಸ್, ರಾಮಾಯಣ ದಾಸ್, ಶ್ರೀಕೃಷ್ಣಾಶ್ರಯ ದಾಸ್ ಸೇರಿದಂತೆ ಶ್ರೀಕೃಷ್ಣ ಮಠದ ಹಲವರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ73ನೇ ಸಹಕಾರ ಸಪ್ತಾಹ–2026ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ ಮದ್ಯ ಕಳ್ಳಸಾಗಣೆಗ್ರಾಮೀಣ ಸಮುದಾಯಗಳಲ್ಲಿ ದೃಷ್ಟಿ ರಕ್ಷಿಸಲು ಬೆಳಗಾವಿಯ ರೋಟರಿ ಕ್ಲಬ್ ಸಂಚಾರಿ ಮಧುಮೇಹ ರೆಟಿನೋಪತಿ ತಪಾಸಣಾ ಯೋಜನೆಯನ್ನು ಪ್ರಾರಂಭಿಸಿದೆಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆ