18 Nov 2026, 12:46:03 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಜೈನ ತತ್ವಶಾಸ್ತ್ರ ಅಳವಡಿಕೆ : ಅತ್ಯುತ್ತಮ ಜೀವನದ ದಾರಿ

ಬೆಳಗಾವಿ-೦೮: ಜೈನ ಧರ್ಮ ಇದೊಂದು ಕೇವಲ ಧರ್ಮವಾಗದೆ ಉತ್ತಮ ಜೀವನಶೈಲಿಯ ಜ್ಞಾನ ನೀಡುವ ತತ್ವಶಾಸ್ತçಗಳನ್ನು ಹೊಂದಿದ ಧರ್ಮವಾಗಿದೆ. ಜೈನ ತತ್ವಶಾಸ್ತçಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಅತ್ಯುತ್ತಮ ಜೀವನದ ದಾರಿಯಾಗಲಿದೆ ಎಂದು ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ ಅವರು ಇಂದಿಲ್ಲಿ ಅಭಿಪ್ರಾಯಪಟ್ಟರು.
ಬುಧವಾರದಂದು ಬೆಳಗಾವಿ ಅನಿಗೋಳದ ಶ್ರೀ ಆದಿನಾಥ ಭವನದಲ್ಲಿ ಜೈನ ಆಗಮ ಮಿಷನ ವತಿಯಿಂದ ಆಯೋಜಿಸಲಾದ 8 ನೇ ಧಾರ್ಮಿಕ ಶಿಕ್ಷಣ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಇಡಿ ವಿಶ್ವದಲ್ಲಿ ಜೈನ ತತ್ವಜ್ಞಾನ ಮತ್ತು ತತ್ವಶಾಸ್ತ್ರ ಗಳ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. ಅನಾದಿ ಕಾಲದಿಂದಲೂ ಸಹ ಜೈನ ತತ್ವಶಾಸ್ತ್ರ ಅನುಕರಣೆಯಲ್ಲಿದೆ. ಇಂದು ಅನೇಕ ಹಿರಿಯ ಅಧಿಕಾರಿಗಳು, ಸಾಹಿತಿಗಳು , ವಿಜ್ಞಾನಿಗಳು ಚಲನಚಿತ್ರ ನಟರು ಸೇರಿದಂತೆ ಅನೇಕರು ಜೈನ ತತ್ವಶಾಸ್ತ್ರಗಳನ್ನು ಪಾಲಿಸುತ್ತ ಯಶಸ್ವಿ ಜಿವನ ನಡೆಸುತ್ತಿದ್ದಾರೆಂದು ಅವರು ಹೇಳಿದರು.
ಇಂದು ಧಾರ್ಮಿಕ ಶೀಕ್ಷಣ ಎಲ್ಲಿಯೂ ಸಿಗುತ್ತಿಲ್ಲ . ಬೆಳಗಾವಿ ಅನಗೋಳ ಭಾಗದ ಶ್ರಾವಕರು ಕಳೆದ 8 ವರ್ಷಗಳಿಂದ ಧಾರ್ಮಿಕ ಶಿಕ್ಷಣ ಶಿಬಿರವನ್ನು ಆಯೋಜಿಸುತ್ತ ಬಂದಿದ್ದು, ಈ ಕಾರ್ಯ ಶ್ಲಾಘನೀಯವಾಗಿದೆ,. ಇಂತಹ ಕಾರ್ಯಗಳು ಮುಂದೆಯು ನಡೆಯಲಿ ಎಂದು ಅವರು ಹಾರೈಸಿದರು.
ಸಮಾರಂಭದಲ್ಲಿ ಹಿರಿಯ ನ್ಯಾಯವಾದಿ ರವಿರಾಜ ಪಾಟೀಲ ಅವರು ಮಾತನಾಡಿ, ಇಂದಿನ ಮಕ್ಕಳಿಗೆ ಧಾರ್ಮಿಕ ಶೀಕ್ಷಣ ನೀಡುವುದು ಅಗತ್ಯವಾಗಿದೆ. ಈ ಧಾರ್ಮಿಕ ಶಿಕ್ಷಣದ ಮೂಲಕ ಮಕ್ಕಳಲ್ಲಿ ಉತ್ತಮ ಸಂಸ್ಕಾರಗಳು ಬೆಳೆಯಲು ಸಹಕಾರಿಯಾಗುತ್ತವೆ. ಇಂದಿನ ಈ ಧಾರ್ಮಿಕ ಶಿಬಿರದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ ಎಂದು ಹೇಳಿದ ಅವರು ಈ ಶಿಬರವನ್ನು ಆಯೋಜಿಸಿದ ಆಯೋಜಕರ ಪ್ರಯತ್ನಕ್ಕೆ ಯಶಸ್ಸು ದೊರೆಯಲಿ ಎಂದು ಅವರು ಹೇಳಿದರು.
ಸಮಾರಂಭದ ವೇದಿಕೆ ಮೇಲೆ ಕೆಪಿಸಿಸಿ ಸದಸ್ಯ ಸುನಿಲ ಹನಮಣ್ಣವರ, ಪ್ರಮೋದ ಪಾಟೀಲ, ರಾಜಶೇಖರ ಭೇಂಡಿಗೇರಿ ,ವಿಕಾಸ ಜೈನ, ರಿತಿಕ ಜೈನ, ವಿಶೇಷ ಜೈನ, ಸುಬ್ರತ ಜೈನ, ಪುಷ್ಪಕ ಹನಮಣ್ಣವರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ರಾಜು ಹನಮಣ್ಣವರ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಮಿಥುನ ಶಾಸ್ತ್ರೀ ಮತ್ತು ಅನೇಕಾಂತ ಶಾಸ್ತ್ರೀಗಳು ಧಾರ್ಮಿಕ ಶಿಕ್ಷಣ ಶಿಬಿರವನ್ನು ನಡೆಸಿ ಜೈನ ಧರ್ಮದ ಆಗಮ, ಆಚರಣೆ, ನಿಯಮಾವಳಿಗಳ ಬಗ್ಗೆ ಶಿಕ್ಷಣ ನೀಡಿದರು. ಈ ಶಿಬಿರದಲ್ಲಿ ಸುಮಾರು 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಧಾರ್ಮಿಕ ಶಿಕ್ಷಣ ಪಡೆದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ73ನೇ ಸಹಕಾರ ಸಪ್ತಾಹ–2026ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ ಮದ್ಯ ಕಳ್ಳಸಾಗಣೆಗ್ರಾಮೀಣ ಸಮುದಾಯಗಳಲ್ಲಿ ದೃಷ್ಟಿ ರಕ್ಷಿಸಲು ಬೆಳಗಾವಿಯ ರೋಟರಿ ಕ್ಲಬ್ ಸಂಚಾರಿ ಮಧುಮೇಹ ರೆಟಿನೋಪತಿ ತಪಾಸಣಾ ಯೋಜನೆಯನ್ನು ಪ್ರಾರಂಭಿಸಿದೆಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆ