18 Nov 2026, 12:37:08 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಹಿರಿಯರೊಂದಿಗೆ ಸಂತೋಷ ಹಂಚಿಕೊಳ್ಳುವ ಮೂಲಕ ಯುವ ನಾಯಕ ಬಿಜೆಪಿ ಜಿಲ್ಲಾ ಪ್ರಧಾನ‌ ಕಾರ್ಯದರ್ಶಿ, ಮಾರಿಹಾಳ ಪಿಕೆಪಿಎಸ್ ಅಧ್ಯಕ್ಷ ಮಲ್ಲಿಕಾರ್ಜುನ ಮಾದಮ್ಮನವರ ತಮ್ಮ 52ನೇ ಜನ್ಮದಿನ

ಬೆಳಗಾವಿ-28: ಜನ್ಮದಿನವನ್ನು ಆಡಂಬರದ ಆಚರಣೆಗೆ ಸೀಮಿತಗೊಳಿಸದೆ, ಹಿರಿಯರೊಂದಿಗೆ ಸಂತೋಷ ಹಂಚಿಕೊಳ್ಳುವ ಮೂಲಕ ಯುವ ನಾಯಕ ಬಿಜೆಪಿ ಜಿಲ್ಲಾ ಪ್ರಧಾನ‌ ಕಾರ್ಯದರ್ಶಿ, ಮಾರಿಹಾಳ ಪಿಕೆಪಿಎಸ್ ಅಧ್ಯಕ್ಷ ಮಲ್ಲಿಕಾರ್ಜುನ ಮಾದಮ್ಮನವರ ತಮ್ಮ 52ನೇ ಜನ್ಮದಿನವನ್ನು ಇತ್ತಿಚ್ಚಿಗೆ ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ಬೆಳಗಾವಿ ನಗರದ ಹೊರವಲಯದಲ್ಲಿರುವ ನಾಗನೂರು ಶಿವಬಸವ ಸ್ವಾಮೀಜಿ ವೃದ್ಧಾಶ್ರಮಕ್ಕೆ ದಂಪತಿ ಸಮೇತ ಭೇಟಿ ನೀಡಿದ ಅವರು, ಅಲ್ಲಿನ ಹಿರಿಯರೊಂದಿಗೆ ಉಪಾಹಾರ ಸೇವಿಸಿ, ಅವರಿಗೆ ಹೊಸ ಬಟ್ಟೆಗಳನ್ನು ವಿತರಿಸಿದರು. ಹಿರಿಯರೊಂದಿಗೆ ಆತ್ಮೀಯವಾಗಿ ಸಮಯ ಕಳೆದು, ಅವರ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಮಾದಮ್ಮನವರ, ಮನೆಯಲ್ಲಿ ಹಿರಿಯರು ಇದ್ದರೆ ಆ ಮನೆಯೇ ನಿಜವಾದ ಸಂಪತ್ತಿನಿಂದ ಕೂಡಿರುತ್ತದೆ. ಹತ್ತು ಮಕ್ಕಳನ್ನು ಸಾಕಿ, ಸಲಹಿ, ಅವರಿಗೆ ಶಿಕ್ಷಣ ಕೊಡಿಸಿ ಉನ್ನತ ಸ್ಥಾನಕ್ಕೆ ತಲುಪಿಸುವ ಶಕ್ತಿ ತಂದೆ-ತಾಯಿಗಿದೆ. ತಮ್ಮ ಸುಖ, ಸಂತೋಷಗಳನ್ನು ಬದಿಗಿಟ್ಟು ಮಕ್ಕಳ ಭವಿಷ್ಯಕ್ಕಾಗಿ ಇಡೀ ಜೀವನವನ್ನೇ ಸವೆಸಿದ ತಂದೆ-ತಾಯಿಗಳು, ಮಕ್ಕಳು ವಿದ್ಯಾವಂತರಾಗಿ ವಿದೇಶಗಳಿಗೆ ಹಾರಿದ ನಂತರ ವೃದ್ಧಾಶ್ರಮಗಳಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ನೋವಿನ ಸಂಗತಿ. ಹೆತ್ತವರ ತ್ಯಾಗ ಮತ್ತು ಋಣವನ್ನು ಮರೆಯಬಾರದು. ತಂದೆ-ತಾಯಿಗಳಿಗೆ ವಯಸ್ಸಾದಾಗ ಅವರ ಆರೈಕೆ ಮಾಡುವುದು ಮಕ್ಕಳ ನೈತಿಕ ಕರ್ತವ್ಯ. ಹೆತ್ತವರನ್ನು ಪ್ರೀತಿ, ಗೌರವ ಮತ್ತು ಕಾಳಜಿಯಿಂದ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮಕ್ಕಳಿಗಾಗಿ ಬದುಕು ಸವೆಸಿದ ತಂದೆ-ತಾಯಿಗಳು ವೃದ್ಧಾಶ್ರಮಗಳಲ್ಲಿ ಆಶ್ರಯ ಪಡೆಯುವ ಪರಿಸ್ಥಿತಿ ಪ್ರಜ್ಞಾವಂತ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಜನ್ಮದಿನವೆಂದರೆ ಕೇವಲ ವೈಯಕ್ತಿಕ ಸಂಭ್ರಮವಲ್ಲ, ನಮ್ಮ ಸಂತೋಷವನ್ನು ಸಮಾಜದೊಂದಿಗೆ ಹಂಚಿಕೊಳ್ಳುವ ಅವಕಾಶ. ಹಿರಿಯರೊಂದಿಗೆ ಸಮಯ ಕಳೆಯುವುದು, ಅವರ ಮುಖದಲ್ಲಿ ಮಂದಹಾಸ ಮೂಡಿಸುವುದು ಮತ್ತು ಅವರ ಆಶೀರ್ವಾದ ಪಡೆಯುವುದು ನನಗೆ ನಿಜವಾದ ಸಂತೋಷ ನೀಡಿದೆ. ಸಮಾಜದಲ್ಲಿ ಪ್ರೀತಿ, ಮಾನವೀಯತೆ ಮತ್ತು ಪರಸ್ಪರ ಕಾಳಜಿಯ ಮೌಲ್ಯಗಳು ಹೆಚ್ಚಾಗಬೇಕು ಎಂಬ ಉದ್ದೇಶದಿಂದ ಈ ದಿನವನ್ನು ಹಿರಿಯರೊಂದಿಗೆ ಆಚರಿಸಿದ್ದೇನೆ ಎಂದರು.
ಕಷ್ಟಗಳನ್ನು ಮೆಟ್ಟಿ ನಿಂತು, ಕಾರ್ಮಿಕನಾಗಿ ಜೀವನ ಆರಂಭಿಸಿ, ಸ್ವಂತ ಉದ್ಯಮದ ಮೂಲಕ ಆರ್ಥಿಕವಾಗಿ ಸಬಲರಾಗಿ, ರಾಜಕೀಯ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ ಮಲ್ಲಿಕಾರ್ಜುನ ಮಾದಮ್ಮನವರ ಅವರು, ತಮ್ಮ ಜನ್ಮದಿನವನ್ನು ಸಮಾಜಮುಖಿ ಕಾರ್ಯದ ಮೂಲಕ ಸ್ಮರಣೀಯವಾಗಿಸಿಕೊಂಡರು.
ಮಲ್ಲಿಕಾರ್ಜುನ ಮಾದಮ್ಮನವರ ಹಾಗೂ ಅವರ ಪತ್ನಿಯಾದ ಉಮಾ ಸೇರಿಕೊಂಡು ಹಿರಿಯರೊಂದಿಗೆ ಉಪಾಹಾರ ಸೇವಿಸಿ, ಹೊಸ ಬಟ್ಟೆಗಳನ್ನು ವಿತರಿಸುವ ಮೂಲಕ ಅವರು ಹಿರಿಯರ ಬಗ್ಗೆ ಗೌರವ, ಕಾಳಜಿ ಮತ್ತು ಸಾಮಾಜಿಕ ಜವಾಬ್ದಾರಿಯ ಸಂದೇಶವನ್ನು ಇಂತಹ ಯಾಂತ್ರಿಕ ಕಾಲದಲ್ಲಿ ಸಾರಿದ್ದು ಮನ ಮುಟ್ಟುವಂತಿತ್ತು.
ಜನ್ಮದಿನದ ನಿಮಿತ್ತ ಮಾರಿಹಾಳ, ಸುಳೆಭಾವಿ, ಮೊದಗಾ ಹಾಗೂ ಬೆಳಗಾವಿ ನಗರದಲ್ಲಿ ಅವರ ಅಭಿಮಾನಿಗಳು ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನ್ಮದಿನಕ್ಕೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಎಫ್.ಎಸ್.ಸಿದ್ದನಗೌಡರ, ನೀತಿನ ಚೌಗಲೆ, ಬಸವರಾಜ ರೇವಡಿ, ಡಾ.ಗುರುಪ್ರಸಾದ ಕೋತಿನ, ವೀರಭದ್ರ ಪೂಜೇರ, ಉಮೇಶ ಮಲ್ಲನ್ನವರ, ವಿನಯ್ ಪಚ್ಚಾಪುರ, ಸಿದ್ದಯ್ಯ ಪೂಜಾರ, ಫಕೀರಪ್ಪ ತಳವಾರ, ಮಾಂತೇಶ ಪೂಜಾರ, ಅಪ್ಪನ ಹಿತ್ತಲಮನಿ, ನಾರಾಯಣ ಜಾನಕಿ, ವಿಠ್ಠಲ ಕಲ್ಲನ್ನವರ, ಪ್ರಶಾಂತ ಸೋಗಲಿ, ರಮೇಶ ಸರೋದೆ, ಶಿವು ಸೊಲಬನ್ನವರ, ಮಾರುತಿ ಮುಗಳಿ, ವಿಜಯ ಜಾಧವ, ಗುರುನಾಥ ಅತ್ತೆಂಗೆಹಾಳ, ಮಲ್ಲೇಶಿ ಕಲ್ಲನ್ನವರ, ಬಾಳೆಶಿ ಕಲ್ಲನ್ನವರ, ಈರಯ್ಯ ಅಲ್ಲಯ್ಯನವರಮಠ,‌ಕಾರ್ತಿಕ ಮಾದಮ್ಮನವರ ಸೇರುದಂತೆ‌ ನೂರಾರು ಅಭಿಮಾನಿಗಳು ಹಾಜರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ73ನೇ ಸಹಕಾರ ಸಪ್ತಾಹ–2026ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ ಮದ್ಯ ಕಳ್ಳಸಾಗಣೆಗ್ರಾಮೀಣ ಸಮುದಾಯಗಳಲ್ಲಿ ದೃಷ್ಟಿ ರಕ್ಷಿಸಲು ಬೆಳಗಾವಿಯ ರೋಟರಿ ಕ್ಲಬ್ ಸಂಚಾರಿ ಮಧುಮೇಹ ರೆಟಿನೋಪತಿ ತಪಾಸಣಾ ಯೋಜನೆಯನ್ನು ಪ್ರಾರಂಭಿಸಿದೆಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆ