18 Nov 2026, 12:39:06 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಹಳಕಟ್ಟಿ ಅವರು ವಚನ ಪ್ರಕಟಿಸಿ ಜಗತ್ತಿಗೆ ಜ್ಞಾನ ಬೆಳಗಿಸಿದ ಪಿತಾಮಹ

ಬೆಳಗಾವಿ-06:ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶನಗರ ಬೆಳಗಾವಿಯಲ್ಲಿ ದಿನಾಂಕ 06.07.2025ರಂದುವಚನ ಪಿತಾಮಹ ಡಾ.ಫ.ಗು.ಹಳಕಟ್ಟಿಯವರ ಜಯಂತಿ ಆಚರಿಸಲಾಯಿತು.ಪ್ರಾರಭದಲಿೢ ಮಹಾದೇವಿ ಅರಳಿ ವಚನ ಪ್ರಾಥ೯ನೆ ನಡಿಸಿಕೂಟ್ಟರು ಮತ್ತು ಡಾ ಫ.ಗು.ಹಳಕಟ್ಟಿ ಜಯಂತಿ ನಿಮಿತ್ತ ಬೆಳಗಾವಿ ಜಿಲ್ಲಾ ಮಟ್ಟದ ವಚನ ಕಂಠಪಾಠ ಸ್ಪರ್ಧೆಯ ವಿಜೇತರಿಕೆ ಬಹುಮಾನ ವಿತರಣೆ ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಅವರ ಜೀವನ ಸಂದೇಶ ಕುರಿತು ಅನುಭಾವವನ್ನು ಪೂಜ್ಯ ವಾಗ್ದೇವಿ ತಾಯಿಯವರು ಬಸವ ತತ್ವ ಅನುಭವ ಕೇಂದ್ರ ಬೆಳಗಾವಿ ಅವರು ನೀಡಿದರು.ಜಗಲಿ ಕಟ್ಟಿ ಕೊಟ್ಟರು.ವಚನ ಕಟ್ಟುಗಳು ಸಂಗ್ರಹಿಸಿ ಪ್ರಕಟಿಸಿದರು. ವಿದ್ಯಾಥಿ೯ ಇದ್ದಾಗಲೆ ಸಂಘಟನೆ ಮಾಡಿದರು.ಹಾಲಬಾವಿ ಅವರ ಮನೆಯಲ್ಲಿ ಹಳೆಯ ಗ್ರಂಥಗಳು ಸಿಕ್ಕವು ಅಲ್ಲದೆ ತಾಡೊಲೆಗಳು ಸಂಗ್ರಹಿಸಿ ಅವುಗಳನ್ನು ಪ್ರಕಟಿಸಿದರು.ಬೇರೆ ಬೇರೆ ಗ್ರಾಮದಿಂದ ತಾಡೂಲೆ ಸಂಗ್ರಹಿಸಿದರು.ಬೆಳಗಾವಿಯಲ್ಲಿ ವಕೀಲಕಿ ಪ್ರಾರಂಭಿಸಿದರು ನಂತರ ವಿಜಯಪೂರಕ್ಕೆ ಹೋದರು.ವ್ಯಾಜಗಳನ್ನು ನ್ಯಾಯಾಲಯದ ಹೊರಗೆ ಬಗೆಹರಿಸಿ ಕಳಿಸುತ್ತಿದ್ದರು.ಅವರ ಫೀ ಅಂದರ ತಾಡೊಲೆಗಳು ಎಲ್ಲಿ ಇವೆ ಅವುಗಳನ್ನು ಕೇಳಿ ಪಡೆಯುತ್ತಿದ್ದರು.ಅನೇಕ ಸಹಕಾರ ಸಂಘಗಳು ಸ್ಥಾಪಿಸಿದರು ನೊಂದಣಿ ಮಾಡಿಸಿ ಕೂಡುತ್ತಿದ್ದರು.ಸಿದ್ದೇಶ್ವರ ಬ್ಯಾಂಕ ಸಹ ರಜಿಸ್ಟರ ಮಾಡಿಸಿಕೊಟ್ಟರು.ಶಾಲೆಗಳನ್ನು ಸಹ ಪ್ರಾರಂಭಿಸಿದರು.ಕನ್ನಡ ಭಾಷೆಯನ್ನು ಕನ್ನಡ ಅಂಕಿಗಳನ್ನ ಬಳಿಸಿ ಲೆಕ್ಕ ಪತ್ರ ಬರೆಯಲು ಪ್ರೂತ್ಸಾಹಿಸಿದರು. ಬಿ ಎಲ್ ಡಿ ಸಂಸ್ಥೆ ಸ್ಥಾಪಿಸಲು ಪ್ರೇರಣೆ ನೀಡಿದರು.ಅನೇಕ ಪುಸ್ತಕಗಳನ್ನು ಪ್ರಕಟಿಸಿದರು.ಪೂಜ್ಯ ಕುಮದಿನಿ ತಾಯಿಯವರು ವಚನಗಳನ್ನು ರಾಗಬದ್ಧವಾಗಿ ಹೇಳಿಕೊಟ್ಟರು. ಮುಖ್ಯ ಅತಿಥಿಗಳಾಗಿ ಶರಣ ಮಹಾಂತೇಶ ತೊರಣಗಟ್ಟಿ ಆಗಮಿಸಿದ್ದರು. ಶರಣೆ ಕಮಲಾ ಗಣಾಚಾರಿ ದಾಸೋಹ ಸೇವೆಗೈದರು.ಅಕ್ಕಮಹಾದೇವಿ ತೆಗ್ಗಿ,ಸುಜಾತಾ ಮತ್ತಿಕಟ್ಟಿ, ಜಯಶ್ರೀ ಚಾವಲಗಿ, ಸುವರ್ಣ ಗುಡಸ, ಜಾಹ್ನವಿ ಘೊಪ೯ಡೆ, ವಿದ್ಯಾ ಕಕಿ೯, ಸದಾಶಿವ ದೇವರಮನಿ, ಬಸವರಾಜ ಕರಡಿಮಠ, ಶಿವಪುತ್ರಯ್ಯ ಪೂಜಾರ,ಶ೦ಕರ ರಾವಳ,ಬಾಬಣ್ಣ ತಿಗಡಿ ದ೦ಪತಿಗಳು, ಮಹದೇವ ಕೆ೦ಪಿಗೌಡರ, ಶೇಖರ ವಾಲಿ ಇಟಗಿ,ಮಹಾಂತೇಶ ಮೆಣಸಿನಕಾಯಿ,ಶಿವಾನಂದ ಲಾಳಸಂಗಿ,ಗುರುಸಿದ್ದಪ್ಪ ರೇವಣ್ಣವರ,ಗದಿಗೆಪ್ಪ ತಿಗಡಿ,ಶಂಕರ ಗುಡಸ,ಸಿ ಎಂ ಬೂದಿಹಾಳ,ಬಸವರಾಜ ಬಿಜ್ಜರಗಿ,ಶಿವಾನಂದ ತಲ್ಲೂರ,ಅ.ಬ.ಇಟಗಿ, ಶಿವಾನಂದ ನಾಯಕ,ಶರಣಶರಣೆಯರು ಉಪಸ್ಥಿತರಿದ್ದರು ಸಂಗಮೇಶ ಅರಳಿ ನಿರೂಪಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ73ನೇ ಸಹಕಾರ ಸಪ್ತಾಹ–2026ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ ಮದ್ಯ ಕಳ್ಳಸಾಗಣೆಗ್ರಾಮೀಣ ಸಮುದಾಯಗಳಲ್ಲಿ ದೃಷ್ಟಿ ರಕ್ಷಿಸಲು ಬೆಳಗಾವಿಯ ರೋಟರಿ ಕ್ಲಬ್ ಸಂಚಾರಿ ಮಧುಮೇಹ ರೆಟಿನೋಪತಿ ತಪಾಸಣಾ ಯೋಜನೆಯನ್ನು ಪ್ರಾರಂಭಿಸಿದೆಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆ