18 Nov 2026, 12:37:58 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಗುರುಶಿಷ್ಯ ಸಂಬಂಧ ಉಳಿಸಿಕೊಳ್ಳುವ ಅಗತ್ಯ ಇಂದಿನ ಸಮಾಜದ ಜವಾಬ್ದಾರಿ - ಸಂಶೋಧಕ ಬಿ.ರಾಜಶೇಖರಪ್ಪ.

ಬೆಳಗಾವಿ-೨೪: ಗುರು-ಶಿಷ್ಯ ಸಂಬಂಧವು ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆಯ ಪ್ರತೀಕವಾಗಿದೆ. ಅದನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಇಬ್ಬರ ಮೇಲೂ ಇರುತ್ತದೆ ಎಂದು ಚಿತ್ರದುರ್ಗದ ಖ್ಯಾತ ಸಂಶೋಧಕ ಹಾಗೂ ಇತಿಹಾಸಕಾರ ಡಾ. ಬಿ. ರಾಜಶೇಖರಪ್ಪ ಅವರು ಇಂದು ಅಭಿಪ್ರಾಯ ಪಟ್ಟರು. ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಶ್ರೀಮತಿ ಎ.ಎಂ. ಜಯಶ್ರೀ ಅವರ ಎರಡು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡುತ್ತ ಅವರು ಮಾತನಾಡಿದರು.
ಎ.ಎಂ. ಜಯಶ್ರೀ ಅವರು ಜಿನದತ್ರ ದೇಸಾಯಿಯವರ ಜೀವನ ಚರಿತ್ರೆಯನ್ನು ಸುಂದರವಾಗಿ ಕಟ್ಟಿಕೊಟ್ಟು ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ. ಅವರ ಜೀವನದ ಕಷ್ಟ ನಷ್ಟಗಳನ್ನು ಏರಿಳಿತಗಳನ್ನು ಮನೋಜ್ಞವಾಗಿ ಹಣ್ಣೆಲೆಯ ಹಸಿರು ನೆನಪು ಕೃತಿ ಕಟ್ಟಿ ಕೊಡುತ್ತದೆ ಎಂದು ಅವರು ಹೇಳಿದರು. ಅವರ ಕೊಳಲಾಗುವ ಆಸೆ ಕವನ ಸಂಕಲವು ಅನೇಕ ಸುಂದರವಾದ ಕವಿತೆಗಳನ್ನು ಹೊಂದಿದ್ದು ಇದರಲ್ಲಿ ಆಧ್ಯಾತ್ಮಿಕ ಚಿಂತನೆ ಮೂಡಿಬಂದಿದೆ ಎಂದು ಉದಾಹರಣೆ ಸಹಿತವಾಗಿ ವಿವರಿಸಿದರು.
ಕೃತಿಗಳನ್ನು ಲೋಕಾರ್ಪಣೆ ಮಾಡಿದ ಜಿನದತ್ತ ದೇಸಾಯಿ ಅವರು ತಮ್ಮ ಜೀವನ ಚರಿತ್ರೆ ಪ್ರಕಟಗೊಳ್ಳುತ್ತಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ನುಡಿದರು. 92ರ ಇಳಿ ವಯಸಿನಲ್ಲೂ ಅವರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದು ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು.
ಡಾ. ರಾಮಕೃಷ್ಣ ಮರಾಠೆ ಅವರು ಜಯಶ್ರೀ ಅವರ ಹಣ್ಣೆಲೆಯ ಹಸಿರು ನೆನಪು ಕೃತಿಯ ಕುರಿತು ಮನೋಜ್ಞವಾಗಿ ಪರಿಚಯ ಮಾಡಿದರು. ಡಾ. ಪಿ. ಜಿ ಕೆಂಪಣ್ಣವರ ಅವರು ಕೊಳಲಾಗುವ ಆಸೆ ಕೃತಿ ಕುರಿತು ವಿವರಣಾತ್ಮಕವಾಗಿ ಪರಿಚಯಿಸಿ ಮಾತನಾಡಿದರು.
ಡಾ. ಬಸವರಾಜ್ ಜಗಜಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಜಯಶ್ರೀ ಅವರಂಥ ಲೇಖಕಿ ಬೆಳಗಾವಿಯಲ್ಲಿ ನೆಲೆಸಬೇಕು ಎಂದು ಅವರು ಹಾರೈಸಿದರು. ಎರಡು ಕೃತಿಗಳ ಲೇಖಕಿ ಎ.ಎಂ.ಜಯಶ್ರೀ ಅವರು ಮಾತನಾಡಿದರು. ರಂಗ ಸೃಷ್ಟಿಯ ಅಧ್ಯಕ್ಷ ಶ್ರೀ ರಮೇಶ್ ಜಂಗಲ್ ಮತ್ತು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಶ್ರೀಮತಿ ಸುಮಾ ಕಿತ್ತೂರ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ಶಿರೀಷ ಜೋಶಿ ಸ್ವಾಗತಿಸಿದರು. ಶಾಂತಾ ಆಚಾರ್ಯ ವಂದಿಸಿದರು. ಶ್ರೀಮತಿ ಆಶಾ ಯಮಕನಮರಡಿ ಕಾರ್ಯಕ್ರಮವನ್ನು ನಿರೂಪಿಸಿ ಜಯಶ್ರೀ ಅವರ ಎರಡು ಕವಿತೆಗಳ ಗಾಯನ ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಬಿಎಸ್ ಗವಿಮಠ, ಡಾ. ದಯಾನಂದ ನೂಲಿ, ಆರ್ ಬಿ ಕಟ್ಟಿ, ಶಿ.ಗು. ಕುಸಗಲ್, ಸಾ.ರಾ.ಸುಳಕೂಡೆ, ಸುನಂದಾ ಎಮ್ಮಿ, ಕೆ.ಪಿ.ರವೀಂದ್ರ ಕುಮಾರ್, ಎಂ.ಎಂ. ಜಯಶ್ರೀ ಅವರ ಕುಟುಂಬದವರು ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ73ನೇ ಸಹಕಾರ ಸಪ್ತಾಹ–2026ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ ಮದ್ಯ ಕಳ್ಳಸಾಗಣೆಗ್ರಾಮೀಣ ಸಮುದಾಯಗಳಲ್ಲಿ ದೃಷ್ಟಿ ರಕ್ಷಿಸಲು ಬೆಳಗಾವಿಯ ರೋಟರಿ ಕ್ಲಬ್ ಸಂಚಾರಿ ಮಧುಮೇಹ ರೆಟಿನೋಪತಿ ತಪಾಸಣಾ ಯೋಜನೆಯನ್ನು ಪ್ರಾರಂಭಿಸಿದೆಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆ