18 Nov 2026, 12:25:00 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ದೇವಸ್ಥಾನದ ಜಾತ್ರೆ, ಉತ್ಸವಗಳಿಗೆ ಬದಿಯ ಸ್ಥಳಾವಕಾಶಕ್ಕೆ ಕ್ರಮ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನದಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭರವಸೆ

ಬೆಳಗಾವಿ-15:ದೇವಸ್ಥಾನದ ಬಳಿಯ ಖುಲ್ಲಾ ಜಾಗೆ ವ್ರದ್ಧರು, ಮಹಿಳೆಯರು, ಮಕ್ಕಳಿಗೆ ವಿಹಾರಕ್ಕೆ ಜಾತ್ರೆ,ಉತ್ಸವಗಳಿಗೆ ಸೂಕ್ತವಾಗಿದ್ದು,
ಅಗತ್ಯ ಕ್ರಮ ಕೈಗೊಳ್ಳುವದಾಗಿ ರಾಜ್ಯ ಲೋಕೋಪಯೋಗಿ ಹಾಗೂ ,ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.
ಅವರು ಬೆಳಗಾವಿ ರಾಮತೀರ್ಥನಗರದಲ್ಲಿ ಜೀರ್ಣೋದ್ಧಾರಗೊಂಡು, ಹೊಸ ವಿನ್ಯಾಸ ದಲ್ಲಿ ರೂಪುಗೊಂಡಿರುವ ಭಕ್ತರಾಕರ್ಷಣೆಯ ಕೇಂದ್ರವೆನಿಸಿದ ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೆಟ್ಟಿ ಕೊಟ್ಟು, ಗದ್ದುಗೆಯ ಆಶೀರ್ವಾದ ಪಡೆದು , ಟ್ರಸ್ಟ್ ಕಮಿಟಿ ವತಿಯಿಂದ ಸನ್ಮಾನ ಸ್ವೀಕರಿಸಿ, ದೇವಸ್ಥಾನದ ನೂತನ ಫಲಕ ಅನಾವರಣಗೊಳಿಸಿ , ಅಗತ್ಯ ಸ್ಥಳಾವಕಾಶ ಕಲ್ಪಿಸುವಂತೆ ಕೋರಿದ ಮನವಿ ಸ್ವೀಕರಿಸಿ , ರಹವಾಸಿಗಳನ್ನುದ್ದೇಶಿಸಿ ಮಾತನಾಡಿದರು. ರಾಮತೀರ್ಥನಗರದ ಜನರ ಪ್ರೀತಿಯ ಕರೆಗೆ ಧನ್ಯವಾದಗಳು, ಶ್ರೀ ದುರ್ಗಾ ಮಹಿಳಾ ಮಂಡಳ ಮತ್ತು ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ದೇವಸ್ಥಾನ ಕಮಿಟಿ ಕೋರಿಕೊಂಡ ಮನವಿಗೆ ಸ್ಪಂದಿಸಿ ಅಭಿಮಾನದಿಂದ ಮಾತನಾಡಿದರು. ನಿಮ್ಮಮನವಿಯಲ್ಲಿಯ ಬೇಡಿಕೆಗಳು ನ್ಯಾಯ ಸಮ್ಮತವಾಗಿದ್ದು, ಮಂಜೂರು ಮಾಡಲು ಆದೇಶಿಸುವದಾಗಿ ಹೇಳಿದರು. ಜನರ ಆಶಯಗಳನ್ನು ಈಡೇರಿಸುವದೇ ಸರ್ಕಾರದ ಕಾರ್ಯ.ಎಂದರಲ್ಲದೆ, ಸನ್ಮಾನಕ್ಕೆ ಧನ್ಯವಾದ ಹೇಳಿದರು.
ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನ ಕಮಿಟಿ ಅದ್ಯಕ್ಷ ಸುರೇಶ ಉರಬಿನಹಟ್ಟಿ ಸರ್ವರನ್ನು ಸ್ವಾಗತಿಸಿ, ಮಾತನಾಡಿ , ಸಚಿವ ಸತೀಶ ಜಾರಕಿಹೊಳಿ ನಮ್ಮವರು. ಅವರಲ್ಲಿಯ ದೂರದ್ರಷ್ಟಿ, ಯಾರಿಗೂ ನಿಲುಕದು. ಅವರೊಬ್ಬ ಕರ್ನಾಟಕದ ಮಹಾನ್ ಶಕ್ತಿ ಅಂಥವರು ನಮ್ಮ ಕರೆ ಮನ್ನಿಸಿ ದೇವಸ್ಥಾನಕ್ಕೆ ಬಂದಿದ್ದು ಈ. ರಾಮತೀರ್ಥನಗರ ಮತ್ತು ಈ ಸ್ಥಳದ ಪುಣ್ಯ. ಸತೀಶ ಅವರ ಯೋಚನೆಗಳು , ಮತ್ತು ಯೋಜನೆಗಳು ಅಸಂಖ್ಯಾತ ವಿದ್ಯಾವಂತರ ಬದುಕಿಗೆ ಕೈಗನ್ನಡಿಯಾಗಿವೆ. ಎಲ್ಲ ಕ್ಷೇತ್ರಗಳಲ್ಲೂ ಅವರು ವಿಜಯಶೀಲರೆನಿಸುವದಕ್ಕೆ ಅವರಲ್ಲಿಯ ವಿಶಾಲ ಹೃದಯವಂತಿಕೆ ಸಾಕ್ಷಿಯಾಗಿದೆ ಎಂದರಲ್ಲದೆ ಸನ್ಮಾನ ಸ್ವೀಕರಿಸಿದ್ದಕೆ ಸಂಘದ ಪರ ಧನ್ಯವಾದ ಹೇಳಿದರಲ್ಲದೆ, ಉಪಸ್ತಿತರಿದ್ದ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅದ್ಯಕ್ಷ ವಿನಯ ನಾವಲಗಟ್ಟಿ ಅವರನ್ನೂ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಂಘದ ಎಸ್ ಜಿ ಕಲ್ಯಾಣಿ, ಮನೋಹರ ಕಾಜಗಾರ, ಎಸ್ ಎಲ್ ಸನದಿ, ಜಿ ಎಸ್ ಪಾಟೀಲ, ರಾಜಶೇಖರ ಚೆಳಗೇರಿ, ಪಿ ಎಫ್ ಪೂಜಾರ, ಡಿ ಎಮ್ ಟೊಣ್ಣೆ , ಮಲ್ಹಾರ ದಿಕ್ಷಿತ್, ದುಂಡಪ್ಪಾ ಉಳ್ಳೇಗಡ್ಡಿ, ರೌದ್ರ ಗೌಡ ಜುಟ್ಟನ್ನವರ, ಪ್ರಹ್ಲಾದ ಹೊಳೆಯಾಚಿ, ಶಿವಾನಂದ ಕಾಗತೀಕರ, ರಾಜಶೇಖರ ಚೆಳಗೇರಿ, ಪಿ ಎಫ್ ಪೂಜಾರ, ಆನಂದ ಹಣ್ಣಿಕೇರಿ, ಬಸವರಾಜ ಹಿರೇಮಠ, ಜಿ ಎಸ್ ಹಿರೇಮಠ, ಜಿ ಐ ದಳವಾಯಿ, ಎನ್ ಬಿ ಹಣ್ಣಿಕೇರಿ , ಡಾ ಬಿ ಸಿ ಚವ್ಹಾಣ, ಸೇರಿದಂತೆ, ಶ್ರೀ ದುರ್ಗಾ ಮಹಿಳಾ ಮಂಡಳ ದ ನಿರ್ಮಲಾ ಉರಬಿನಹಟ್ಟಿ, ಪ್ರೇಮಾ ಬಾಗೇವಾಡಿ ಸುನೀತಾ ಕೆರೂರ ಕಾವ್ಯಾ ಚಿಟಗಿ, ಮಹಾದೇವಿ ಕಮತ್, ಲತಾ ಕಾಜಗಾರ, ಉಮಾ ಖಾನವಾಡೆ, ಮಹಾನಂದಾ ಹಿರೇಮಠ, ವಿದ್ಯಾ ಮೆಳವಂಕಿ, ಸುಮಾ ಕದಮ್, ಮಹಾದೇವಿ ಮೂಲಿಮನಿ, ತೋಂಟಾಪೂರ, ಲಕ್ಷ್ಮೀ ಮಜಲಟ್ಟಿ, ಭಂಡಾರಿ ಸೇರಿದಂತೆ ಸ್ನೇಹ ಸಮಾಜ ಸೇವಾ ಸಂಘದ ಸದಸ್ಯರು, ರಹವಾಸಿಗಳು, ಮಹಿಳೆಯರು ಹಾಜರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ73ನೇ ಸಹಕಾರ ಸಪ್ತಾಹ–2026ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ ಮದ್ಯ ಕಳ್ಳಸಾಗಣೆಗ್ರಾಮೀಣ ಸಮುದಾಯಗಳಲ್ಲಿ ದೃಷ್ಟಿ ರಕ್ಷಿಸಲು ಬೆಳಗಾವಿಯ ರೋಟರಿ ಕ್ಲಬ್ ಸಂಚಾರಿ ಮಧುಮೇಹ ರೆಟಿನೋಪತಿ ತಪಾಸಣಾ ಯೋಜನೆಯನ್ನು ಪ್ರಾರಂಭಿಸಿದೆಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆ