18 Nov 2026, 12:45:12 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಮತ್ತು ವಿವಿಧ ಸಂಘಟನೆಯ ಪದಾಧಿಕಾರಿಗಳು ನಾಗರಿಕ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ಜಿಲ್ಲಾಡಳಿತ ಕ್ಕೆ ಮನವಿ

ಬೆಳಗಾವಿ-೨೯: 2022ರ ಹಳೆ ಹುಬ್ಬಳ್ಳಿ ಪೊಲೀಸ್ಠಾಣೆ ದಾಳಿ ಪ್ರಕರಣ ರಾಜ್ಯ ಸರ್ಕಾರವು ಹಿಂಪಡೆದು ಆರೋಪಿಗಳನ್ನು ಮುಕ್ತಗೊಳಿಸುತ್ತಿರುವ ಕ್ರಮ ಖಂಡಿಸಿ, ಬೆಳಗಾವಿಯ ವಿವಿಧ ಸಮಾಜದ ಪ್ರಮುಖರು, ಗಣ್ಯರು, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಮತ್ತು ವಿವಿಧ ಸಂಘಟನೆಯ ಪದಾಧಿಕಾರಿಗಳು ನಾಗರಿಕ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿ, ಜಿಲ್ಲಾಧಿಕಾರಿ ಮುಖಾಂತರ ರಾಜ್ಯಪಾಲ ಅವರಿಗೆ ಮನವಿ ಸಲ್ಲಿಸಿದರು.

ಕಾಂಗ್ರೆಸ್ನೇತೃತ್ವದ ರಾಜ್ಯ ಸರ್ಕಾರವು ಮುಸ್ಲಿಂ ಮತಗಳ ಓಲೈಕೆಗಾಗಿ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗಿದೆ. ಕಾನೂನು ಬಾಹಿರ ಮತ್ತು ಸಮಾಜ ಘಾತುಕ ಶಕ್ತಿಗಳ ಸದೆಬಡೆದು ಉತ್ತಮ ಕಾನೂನು ಸುವ್ಯವಸ್ಥೆ ಸಮಾಜದಲ್ಲಿ ಸ್ಥಾಪಿಸ ಬೇಕಾದ ಸರ್ಕಾರದ ಕರ್ತವ್ಯ. ಆದರೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು ಅತ್ಯಂತ ಬೇಜವಾಬ್ದಾರಿ ಮತ್ತು ಅಸಂವಿಧಾನಿಕ ನಡೆಯಲ್ಲಿ ನಿರತವಾಗಿದೆ ಎಂದು ರಾಜ್ಯ ಸರ್ಕಾರದ ಮೇಲೆ ಹರಿಹಾಯ್ದರು.

ರೋಹನ ಜವಳಿ ಮಾತನಾಡಿ, ದೇಶ ಸಮಾಜ ರಕ್ಷಿಸಲು ಇರುವ ಪೋಲೀಸರ, ಮಿಲಟರಿಯವರ ಮೇಲೆಯೆ ದಾಳಿ ಮಾಡುತ್ತಾ ಹೋದರೆ ಸಮಾಜ ಹೇಗೆ ಸುಧಾರಿಸಲು ಹೇಗೆ ಸಾಧ್ಯ? ಹಾಗಾಗಿ ಎಲ್ಲಾ ಹಿಂದೂ ಸಮಾಜ ಇದನ್ನು ಖಂಡಿಸುತ್ತದೆ ಎಂದರು. ಸತೀಶ ಬಾಚೀಕra ರ್ಮಾತನಾಡಿ ಎಲ್ಲಾ ಮಹಿಳಾ ಸಂಘ, ಯುವಕ ಸಂಘ, ಗಣೇಶೋತ್ಸವ ಮಂಡಳ ಶಾರದೋತ್ಸವ ಮಂಡಳ ಎಲ್ಲರೂ ಎಚ್ಚರ ವಹಿಸುವ ಅವಶ್ಯಕತೆ ಇದೆ. ಹಿಂದೂ ಹಬ್ಬಗಳಿಗೆ ನೂರೆಂಟು ಷರತ್ತು ವಿಧಿಸುವ ಕಾಂಗ್ರೆಸ್ಸರ್ಕಾರ ಪೊಲೀಸರ ಮೇಲೆ ಹಲ್ಲೆ ಮಾಡುವ ಜಿಹಾದಿಗಳನ್ನು ಮಟ್ಟ ಹಾಕುವ ಬದಲು ಅವರನ್ನು ರಕ್ಷಿಸಲು ಮೊಕದ್ದಮೆ ಹಿಂದೆ ತೆಗೆದುಕೊಳ್ಳುವ ಈ ದುಷ್ಟ ನಿರ್ಧಾರ ಖಂಡಿಸುತ್ತೇವೆ ಎಂದರು.

ಅಗ್ರಾನಿ ದಮ್ಮಣಿಗಿ ಮಾತನಾಡಿ, ಈ ರೀತಿ ತುಷ್ಟೀಕರಣ ನೀತಿ, ವಕ್ಫ್ಮಂಡಳಿಯಿಂದ ರೈತರ ಜಮೀನನ್ನು ತಮ್ಮದು ಎಂದು ನೋಟೀಸ ಕಳಿಸು ನೀಚ ಕೃತ್ಯ ಸಮಾಜದ ಎಲ್ಲಾ ಬಂದುಗಳು ರೈತರೂಬೀದಿಗೆ ಬಂದು ಹೋರಾಟ ಮಾಡುವ ದಿನ ದೂರ ಇಲ್ಲ ಎಂಬ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು.

ಮಹೇಶ ಪೋರವಾಲ, ರಮೇಶ ಲದ್ದಡ, ಮುನಿಸ್ವಾಮಿ ಭಂಡಾರಿ, ಗಂಗಾರಾಮ ನಾಯ್ಕ, ಶ್ರೀಕಾಂತ ಕಾಂಬಳೆ, ಶ್ರೀಕಾಂತ ಕದಮ್, ದಯಾನಂದ ನೇತಲಕರ, ವಿಜಯೇಂದ್ರ ಜೋಶಿ, ಗಿರೀಶ ಪೈ, ಮಹೇಶ ಇನಾಮದಾರ, ಆರ್.ಎಸ್.ಮುತಾಲಿಕ, ಸದಾಶಿವ ಹಿರೇಮಠ, ಅಗ್ರಾನಿ ದಮ್ಮಣಗಿ ,ಜಯಾ ನಾಯ್ಕ, ಗೀತಾ ಹೆಗಡೆ, ಅಶೋಕ ಶಿಂತ್ರೆ, ವಿಜಯ ಜಾದವ, ಜೇಠಾಬಾಯಿ ಪಟೇಲ, ಕ್ರಷ್ಣ ಭಟ್ಟ ಮುಂತಾದವರು ಸೇರಿದಂತೆ ಇತರರು ಹಾಜರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ73ನೇ ಸಹಕಾರ ಸಪ್ತಾಹ–2026ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ ಮದ್ಯ ಕಳ್ಳಸಾಗಣೆಗ್ರಾಮೀಣ ಸಮುದಾಯಗಳಲ್ಲಿ ದೃಷ್ಟಿ ರಕ್ಷಿಸಲು ಬೆಳಗಾವಿಯ ರೋಟರಿ ಕ್ಲಬ್ ಸಂಚಾರಿ ಮಧುಮೇಹ ರೆಟಿನೋಪತಿ ತಪಾಸಣಾ ಯೋಜನೆಯನ್ನು ಪ್ರಾರಂಭಿಸಿದೆಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆ