18 Nov 2026, 12:45:27 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ದೀಪಕ ಬಿಳ್ಳೂರ ಅವರ ‘ಕಠೋರ ಸತ್ಯ’ ಕವನ ಸಂಕಲನ ಲೋಕಾರ್ಪಣೆ

ಅಥಣಿ-17: ಕಾವ್ಯಕ್ಕೆ ಬದುಕಿನ ಸತ್ಯವನ್ನು ಮುಖಾಮುಖಿಯಾಗಿಸುವ ಪ್ರಯತ್ನವಾಗಿ ಅಥಣಿಯ ಕವಿ–ಸಾಹಿತಿ ಹಾಗೂ ಅಭಿಯಂತರ ದೀಪಕ್ ಬಿಳ್ಳೂರ ಅವರ ‘ಕಠೋರ ಸತ್ಯ’ ಕವನ ಸಂಕಲನ ಗಣೇಶ ಚತುರ್ಥಿಯಂದು ಅವರ ಸ್ವಗೃಹದಲ್ಲಿ ಕುಟುಂಬದ ಸಮ್ಮುಖದಲ್ಲಿ ಲೋಕಾರ್ಪಣೆಗೊಂಡಿತು.

ವೃತ್ತಿಯಲ್ಲಿ ಅಭಿಯಂತರರಾದ ಬಿಳ್ಳೂರರು ಪ್ರವೃತ್ತಿಯಲ್ಲಿ ಕವಿ–ಸಾಹಿತಿಯಾಗಿ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಅವರ ಕಾವ್ಯ ವೈಚಾರಿಕತೆ, ಸಾಮಾಜಿಕ ಪ್ರಜ್ಞೆ ಮತ್ತು ಜೀವನಾನುಭವಗಳೊಂದಿಗೆ ಮುಖಾಮುಖಿಯಾಗುವ ಗುಣ ಹೊಂದಿದೆ. ‘ದೀಪಗಳು’ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ದತ್ತಿ ಪ್ರಶಸ್ತಿ ದೊರೆತಿರುವುದು ಅವರ ಸಾಹಿತ್ಯ ಸಾಧನೆಗೆ ಸಂದ ಪ್ರಮುಖ ಮಾನ್ಯತೆ.

‘ಪೂಜ್ಯ ಮಾತಾಜಿ ಪ್ರಕಾಶನ’ ಸ್ಥಾಪಿಸಿ ಹನ್ನೆರಡು ಕವನ ಸಂಕಲನಗಳು, ಒಂದು ಪ್ರಬಂಧ ಸಂಕಲನ ಹಾಗೂ ಸಾಮಾಜಿಕ ರಂಗಕೃತಿಯನ್ನು ಪ್ರಕಟಿಸುವ ಮೂಲಕ ಸ್ವತಃ ಬರೆಯುವುದರ ಜೊತೆಗೆ ಕನ್ನಡ ಸಾಹಿತ್ಯವನ್ನು ಕಟ್ಟುವ ಕಾರ್ಯದಲ್ಲೂ ಅವರು ತೊಡಗಿಸಿಕೊಂಡಿದ್ದಾರೆ. ಪ್ರೊ. ಡಿ.ಸಿ. ಅನಂತಸ್ವಾಮಿ ಪುಸ್ತಕ ದತ್ತಿ ಪ್ರಶಸ್ತಿ, ಕಾವ್ಯ ಶ್ರೀಧರ ಪ್ರಶಸ್ತಿ, ಗುರುಕುಲ ಸಾಹಿತ್ಯ ಶರಭ ಪ್ರಶಸ್ತಿ, ಸಾಹಿತ್ಯ ಸೇವಾ ಭಾರ್ಗವ ಪ್ರಶಸ್ತಿ, ಆದಿಗುರು ಶ್ರೀ ಶಂಕರ ಅನುಗ್ರಹ ಪುರಸ್ಕಾರ ಹಾಗೂ ಶ್ರೀ ವಾಲ್ಮೀಕಿ ಸಾಹಿತ್ಯ ಸೇವಾ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಅವರಿಗೆ ಸಂದಿವೆ.

*‘ಕಠೋರ ಸತ್ಯ’*ದಲ್ಲಿ ಬದುಕು ಮತ್ತು ಸಮಾಜದ ಮುಖವಾಡಗಳನ್ನು ಕಳಚಿ, ಕಣ್ಣಿಗೆ ಕಾಣುವ ಹಾಗೂ ಮನಸ್ಸಿಗೆ ಕಾಡುವ ಸತ್ಯಗಳನ್ನು ಕಾವ್ಯದ ಕನ್ನಡಿ ಮುಂದೆ ನಿಲ್ಲಿಸುವ ಪ್ರಯತ್ನ ನಡೆದಿದೆ. ಸತ್ಯವನ್ನು ಸವರದೆ, ಬದುಕನ್ನು ಮುಚ್ಚಿಡದೆ ಕಾವ್ಯವಾಗಿಸುವ ಈ ಕೃತಿ ದೀಪಕ್ ಬಿಳ್ಳೂರರ ಸಾಹಿತ್ಯ ಪಯಣದಲ್ಲಿ ಮತ್ತೊಂದು ಗಮನಾರ್ಹ ಹೆಜ್ಜೆಯಾಗಿದೆ.

ಇವರಿಂದ ಇನ್ನಷ್ಟು ಅರ್ಥಪೂರ್ಣ ಕೃತಿಗಳು ಮೂಡಿಬರಲಿ ಎಂಬುದು ಸಾಹಿತ್ಯಾಸಕ್ತರ ಆಶಯ.

ವರದಿ; ಎಂ.ವೈ.ಮೆಣಸಿನಕಾಯಿ
ಜಿಲ್ಲಾಧ್ಯಕ್ಷರು ಕಲ್ಪವೃಕ್ಷ ವೇದಿಕೆ ಬೆಳಗಾವಿ ಜಿಲ್ಲೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ73ನೇ ಸಹಕಾರ ಸಪ್ತಾಹ–2026ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ ಮದ್ಯ ಕಳ್ಳಸಾಗಣೆಗ್ರಾಮೀಣ ಸಮುದಾಯಗಳಲ್ಲಿ ದೃಷ್ಟಿ ರಕ್ಷಿಸಲು ಬೆಳಗಾವಿಯ ರೋಟರಿ ಕ್ಲಬ್ ಸಂಚಾರಿ ಮಧುಮೇಹ ರೆಟಿನೋಪತಿ ತಪಾಸಣಾ ಯೋಜನೆಯನ್ನು ಪ್ರಾರಂಭಿಸಿದೆಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆ