18 Nov 2026, 12:31:04 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಭೀಮಗಡ ಅಭಯಾರಣ್ಯ ವ್ಯಾಪ್ತಿಯ ಗ್ರಾಮಸ್ಥರ ಸ್ಥಳಾಂತರಕ್ಕೆ ಬಿಜೆಪಿ ಮಾಧ್ಯಮ ಸಹ ಸಂಚಾಲಕರು ಬಾಳೇಶ ಚವ್ವನ್ನವರ ಅವರಿಂದ ತೀವ್ರ ವಿರೋಧ

ಅರಣ್ಯ ಸಚಿವರು ಶ್ರೀ ಈಶ್ವರ ಖಂಡರೆ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ರಾಜ್ಯದ ಪ್ರತಿ ಜಿಲ್ಲೆಯ ಉಸ್ತುವಾರಿ ಸಚಿವರು, ಹಿರಿಯ ಅರಣ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ತೀರಾ ಅರಣ್ಯ ಮತ್ತು ದೂರದ ಪ್ರದೇಶಗಳಲ್ಲಿ ನೆಲೆಸಿರುವ ಗ್ರಾಮಸ್ಥರನ್ನು ಸ್ಥಳಾಂತರಿಸಲು ನಿರ್ಧರಿಸಲಾಯಿತು. ಅದೇ ರೀತಿಯಾಗಿ ಖಾನಾಪುರ ತಾಲೂಕಿನ ಭೀಮಗಡ ಅಭಯಾರಣ್ಯ ವ್ಯಾಪ್ತಿಯ ಹಲವು ಗ್ರಾಮಗಳೂ ಸೇರಿದ್ದವು ಎಂದು ಹೇಳಲಾಗಿದೆ. ಆದರೆ ಇದೀಗ ಖಾನಾಪುರ ತಾಲೂಕಿನ ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲೆ ಮಾದ್ಯಮ ಸಹ ಸಂಚಾಲಕರು ಶ್ರೀ ಬಾಳೇಶ ಚವ್ವನ್ನವರ ಗ್ರಾಮಸ್ಥರ ಸ್ಥಳಾಂತರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಅಗತ್ಯ ಬಿದ್ದರೆ ಗ್ರಾಮಸ್ಥರ ಸಹಕಾರದೊಂದಿಗೆ ಆಂದೋಲನದ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ. ಅಗತ್ಯ ಬಿದ್ದರೆ ಕಾನೂನು ಹೋರಾಟವನ್ನೂ ನಡೆಸುವುದಾಗಿ ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಹಿಡಕಲ್ ಅಣೆಕಟ್ಟೆಯ ಉದಾಹರಣೆ ನೀಡಿದ್ದಾರೆ. ಹಿಡಕಲ ಅಣೆಕಟ್ಟು ನಿರ್ಮಾಣದ ನಂತರ, ಅಣೆಕಟ್ಟಿನ ವ್ಯಾಪ್ತಿಯಲ್ಲಿರುವ ಅನೇಕ ಹಳ್ಳಿಗಳನ್ನು ತೇರುವು ಗೂಳಿಸಲಾಯಿತು ಮತ್ತು ಪುನರ್ವಸತಿ ಮಾಡಲಾಯಿತು. ಅದರಲ್ಲಿ ಖಾನಾಪುರ ತಾಲೂಕಿನ ನೇರಸಾ ಬಳಿ ಅಶೋಕನಗರ ಹಾಗೂ ಹಿಡಕಲ್ ಭಾಗ್ಯನಗರ ಎಂಬ ಗ್ರಾಮ ಸ್ಥಾಪನೆಯಾಯಿತು. ಆದರೆ ಇಂದಿಗೂ ಅವರಿಗೆ ಸೌಲಭ್ಯ ಕಲ್ಪಿಸಿಲ್ಲ. ಭೀಮಗಡ ಅಭಯಾರಣ್ಯದ ಗ್ರಾಮಸ್ಥರಿಗೂ ಇದೇ ರೀತಿಯ ಸನ್ನಿವೇಶ ಎದುರಾಗುವ ಸಾಧ್ಯತೆ ಇದೆ. ಅಲ್ಲದೆ, ಅದರ ಹೊರತಾಗಿಯೂ, ಈ ದೂರದ ಪ್ರದೇಶಗಳಲ್ಲಿ ಎಲ್ಲಾ ತರಹದ ಮೂಲಭೂತ ಸೌಕರ್ಯಗಳು ಹಳ್ಳಿಗಳಿಗೆ ವಿದ್ಯುತ್ ಮತ್ತು ರಸ್ತೆಗಳನ್ನು ಇದ್ದಾವೆ ಆ ಗ್ರಾಮಗಳಿಗೆ ರಸ್ತೆಗೆ ಬ್ರಿಡ್ಜ್ ಗಳು ಸರಿಯಾಗಿರುವುದಿಲ್ಲ. ಅವುಗಳನ್ನು ದಯವಿಟ್ಟು ಸರಿ ಮಾಡಿಕೊಡಿ. ಅವುಗಳು ಸರಿಯಾದ ಯಾವುದೇ ತೊಂದರೆಗಳು ಇಲ್ಲ ಆದ್ದರಿಂದ ಗ್ರಾಮಸ್ಥರು ಆತಂಕ ಪಡದೇ ವಲಸೆಯನ್ನು ವಿರೋಧಿಸುವ ಅವಶ್ಯಕತೆ ಇದೆ ಎಂದರು. ಈ ಎಲ್ಲಾ ಗ್ರಾಮಸ್ಥರೊಂದಿಗೆ ನಾವಿದ್ದೇವೆ, ಅಗತ್ಯ ಬಿದ್ದರೆ ಆಂದೋಲನ ಹೋರಾಟ ನಡೆಸುತ್ತೇವೆ ಮತ್ತು ಸಂದರ್ಭೋಚಿತವಾಗಿ ಗ್ರಾಮಸ್ಥರೊಂದಿಗೆ ಕಾನೂನು ಹೋರಾಟವನ್ನೂ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ73ನೇ ಸಹಕಾರ ಸಪ್ತಾಹ–2026ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ ಮದ್ಯ ಕಳ್ಳಸಾಗಣೆಗ್ರಾಮೀಣ ಸಮುದಾಯಗಳಲ್ಲಿ ದೃಷ್ಟಿ ರಕ್ಷಿಸಲು ಬೆಳಗಾವಿಯ ರೋಟರಿ ಕ್ಲಬ್ ಸಂಚಾರಿ ಮಧುಮೇಹ ರೆಟಿನೋಪತಿ ತಪಾಸಣಾ ಯೋಜನೆಯನ್ನು ಪ್ರಾರಂಭಿಸಿದೆಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆ