18 Nov 2026, 12:41:09 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವಾರ್ಷಿಕೋತ್ಸವ ಸಡಗರ

ಬೆಳಗಾವಿ-19:"ಬದುಕಿನ ನಿರ್ವಚನವೇ ಸಾಹಿತ್ಯ. ಸಾಹಿತ್ಯದಲ್ಲಿ ಪ್ರಸ್ತುತತೆ ವಸ್ತುವಾಗಬೇಕು, ಓದಿನೊಂದಿಗೆ ಬರಹ ಪ್ರಬುದ್ಧವಾಗಲಿ. ಬದುಕು ಮತ್ತು ಬರಹ ಎರಡೂ ಒಂದೇ ಆಗಿರಬೇಕು ಹಾಗೂ ಅದು ಮಾನವೀಯತೆಗೆ ಪ್ರೇರಕವಾಗಿರಬೇಕು" ಎಂದು ಹಿರಿಯ ಸಾಹಿತಿ ಹಾಗೂ ಸಂಘದ ಅಜೀವ ಸದಸ್ಯರಾದ ಪ್ರೇಮಾ ತಾಶಿಲ್ದಾರ್ ಅವರು ಕರೆ ನೀಡಿದರು.
​ನಗರದ ಶನಿವಾರದಂದು ಅತ್ಯಂತ ವಿಜೃಂಭಣೆಯಿಂದ ಜರುಗಿದ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಸಂಘದ 25 ವರ್ಷಗಳ ಸುದೀರ್ಘ ಹಾದಿ ಮತ್ತು ಹಿರಿಯ ಸಾಹಿತಿ ಆಶಾ ಕಡಪಟ್ಟಿ ಅವರ ಧೈರ್ಯ, ಪರಿಶ್ರಮವನ್ನು ಸ್ಮರಿಸಿದ ಅವರು, ಎಲ್ಲ ಪ್ರಕಾರದ ಸಾಹಿತ್ಯವನ್ನು ಈಗ ನಮ್ಮ ಸಂಘದ ಕವಯತ್ರಿಯರು ಬರೆಯುವಲ್ಲಿ ಸಿದ್ಧಹಸ್ತರಾಗಿರುವುದು ಸಂತಸ ತಂದಿದೆ ಎಂದರು.
​ರಂಗ ಕಲಾವಿದೆ ಕಸ್ತೂರೆವ್ವಾ ಅವರಿಗೆ ದತ್ತಿ ಪ್ರಶಸ್ತಿ ಗೌರವ
​ಕಾರ್ಯಕ್ರಮದಲ್ಲಿ ಹಿರಿಯ ರಂಗ ಕಲಾವಿದೆ ಕಸ್ತೂರೆವ್ವಾ ಮಣಿಕೇರಿ ಅವರಿಗೆ ಸಾಹಿತಿ ಹಮೀದಾಬೇಗಂ ಅವರು ಇಟ್ಟಂತಹ 'ಲಾಲ್ ಸಾಹೇಬ್ ಕಮಲ್ ಸಾಹೇಬ್ ದೇಸಾಯಿ ರಂಗ ಕಲಾವಿದರ ಸ್ಮರಣಾರ್ಥ ದತ್ತಿ ಪ್ರಶಸ್ತಿ' ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಸ್ತೂರೆವ್ವಾ ಅವರು, ಹೆಣ್ಣಿನ ಸಹನಾಶೀಲತೆ ಮತ್ತು ಪಾರಿಜಾತದ ಹಲವು ಮಜಲುಗಳನ್ನು ಪರಿಚಯಿಸುತ್ತಾ ತಮ್ಮ ಸುಂದರ ಕಂಠದಿಂದ ಹಾಡಿ ನೆರೆದಿದ್ದವರ ಮನಸ್ಸನ್ನು ತಣಿಸಿದರು. ಇದೇ ವೇಳೆ ಪುಸ್ತಕ ಪ್ರಶಸ್ತಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದ ರಂಗಕರ್ಮಿ ಶಿರೀಶ್ ಜೋಶಿ ಹಾಗೂ ಹಿರಿಯ ಸಾಹಿತಿ ಸ. ರಾ. ಸುಳಕುಡೆ ಇವರನ್ನು ಗೌರವಿಸಲಾಯಿತು. ಕಥಾ ಸ್ಪರ್ಧೆ ವಿಜೇತರಿಗೂ ಬಹುಮಾನ ವಿತರಣೆ ಮಾಡಲಾಯಿತು.
​ಭಾವಗಳ ಬುತ್ತಿಯೇ ಸಾಹಿತ್ಯ:
​ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಸುಮಾ ಕಿತ್ತೂರ ಅವರು ಮಾತನಾಡಿ, "ನಮ್ಮ ಲೇಖಕಿಯರ ಸಂಘದಲ್ಲಿ 50 ಜನ ಸಾಧಕಿಯರು ಇರುವುದೇ ಹೆಮ್ಮೆಯ ಸಂಗತಿ. ಸಾಹಿತ್ಯವೆಂದರೆ ಒಂದು ಭಾವಗಳ ಬುತ್ತಿ" ಎಂದು ಎಲ್ಲರನ್ನೂ ಶ್ಲಾಘಿಸಿದರು.
​ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಗಳು:
ಆಶಾ ಸಂಸದ್ಧಿ ಮತ್ತು ಸಂಗಡಿಗರ ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ, ನಂತರ ಸುನಿತಾ ನಂದೆನ್ನವರ ಅವರ ನಿರೂಪಣೆಯಲ್ಲಿ ಶಿವತಾಂಡವ ನೃತ್ಯ, ಗಂಡ ಹೆಂಡಿರ ಸಂವಾದ, ಏಕಪಾತ್ರಾಭಿನಯ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಪ್ರೇಕ್ಷಕರ ಮನರಂಜಿಸಿದವು.
​ಕಾರ್ಯಕ್ರಮದ ಆರಂಭದಲ್ಲಿ ಸಂಘದ ಉಪಾಧ್ಯಕ್ಷೆ ವಾಸಂತಿ ಮೇಳೇದ ಎಲ್ಲರನ್ನೂ ಸ್ವಾಗತಿಸಿದರು. ಸಹಕಾರ್ಯದರ್ಶಿ ಲಲಿತಾ ಕ್ಯಾಸನ್ನವರ ವಾರ್ಷಿಕ ವರದಿ ವಾಚಿಸಿದರು. ಕಾರ್ಯಕ್ರಮದ ನಿರೂಪಣೆ ನಿರ್ವಹಿಸಿದ ಡಾ. ಅನ್ನಪೂರ್ಣ ಹಿರೇಮಠ ಇಡೀ ವರ್ಷದ ಲೆಕ್ಕಪತ್ರವನ್ನು ಪೈಸೆಯೂ ಬಿಡದೆ ಒಪ್ಪಿಸಿದರು. ಸಾಧಕರ ಪರಿಚಯವನ್ನು ರಾಜೇಶ್ವರ ಹೆಗಡೆ ಹಾಗೂ ಸುಪ್ರಿಯಾ ದೇಶಪಾಂಡೆ ನಡೆಸಿಕೊಟ್ಟರು. ಸುನಂದಾ ಹಾಲಭಾವಿಯವರು ವಂದನಾರ್ಪಣೆ ಮಾಡಿದರು. ಕೊನೆಯಲ್ಲಿ ಸುಪ್ರಿಯಾ ದೇಶಪಾಂಡೆ ದ್ವಿತೀಯ ಬಾರಿ ವಂದನಾರ್ಪಣೆ ನೆರವೇರಿಸಿದರು.
​ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಹಿರಿಯ ಸಾಹಿತಿಗಳಾದ ಬಸವರಾಜ ಜಗಜಂಪಿ, ಶ್ರೀರಂಗ ಜೋಶಿ, ನೀಲಗಂಗಾ ಚರಂತಿಮಠ, ಜ್ಯೋತಿ ಬದಾಮಿ, ಹೇಮಾ ಸೋನೊಳ್ಳಿ, ಜಯಶೀಲಾ ಬ್ಯಾಕೋಡ ಮತ್ತು ಶೈಲಜಾ ಭಿಂಗ ಸೇರಿದಂತೆ ಬೆಳಗಾವಿಯ ಎಲ್ಲಾ ಸಾಹಿತಿಗಳು ಹಾಜರಿದ್ದು ಕಾರ್ಯಕ್ರಮದ ಶೋಭೆ ಹೆಚ್ಚಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ73ನೇ ಸಹಕಾರ ಸಪ್ತಾಹ–2026ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ ಮದ್ಯ ಕಳ್ಳಸಾಗಣೆಗ್ರಾಮೀಣ ಸಮುದಾಯಗಳಲ್ಲಿ ದೃಷ್ಟಿ ರಕ್ಷಿಸಲು ಬೆಳಗಾವಿಯ ರೋಟರಿ ಕ್ಲಬ್ ಸಂಚಾರಿ ಮಧುಮೇಹ ರೆಟಿನೋಪತಿ ತಪಾಸಣಾ ಯೋಜನೆಯನ್ನು ಪ್ರಾರಂಭಿಸಿದೆಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆ