18 Nov 2026, 12:36:46 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬೈಲಹೊಂಗಲ ತಾಲೂಕು ಹೊಸೂರ ಗ್ರಾಮದಲ್ಲಿ ಹಳ್ಳಿಯ ಹುಲಿ ಕೊಟ್ಟ ಬೆಳ್ಳಿಯ ಕಾಲುಂಗುರ ನಾಟಕ ಉದ್ಘಾಟನೆ

ಬೈಲಹೊಂಗಲ-೨೬: ನಾಟಕಗಳಲ್ಲಿ ಬರುವ ಪಾತ್ರಗಳು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗದೆ ಅದರಲ್ಲಿರುವ ಒಳ್ಳೆಯತನವನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡು ಕೆಟ್ಟದಾರಿಯನ್ನು ತೇಜಿಸಿ ಮುನ್ನೆಡೆಯಲಿಕ್ಕೆ ಸಹಕಾರಿಯಾಗಿವೆ ಎಂದು ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಹೇಳಿದರು.
ಸಮೀಪದ ಹೊಸೂರ ಗ್ರಾಮದಲ್ಲಿ ಗುರು ಮಡಿವಾಳೇಶ್ವರ ಜಾತ್ರಾ ನಿಮಿತ್ಯ ಜರುಗಿದ ಹಳ್ಳಿಯ ಹುಲಿ ಕೊಟ್ಟ ಬೆಳ್ಳಿಯ ಕಾಲುಂಗುರ ನಾಟಕ ಉದ್ಘಾಟಿಸಿ ಮಾತನಾಡಿ, ವ್ಯಕ್ತಿಯಲ್ಲಿರುವ ಕಲೆಯನ್ನು ಹೊರ ತರಲು ಹಾಗೂ ಪ್ರೇಕ್ಷಕರ ಮನಸ್ಸಿಗೆ ಮನರಂಜನೆ ನೀಡುವ ಉದ್ದೇಶದಿಂದ ಹಳ್ಳಿಗಳಲ್ಲಿ ಯುವ ನಾಟ್ಯ ತಂಡಗಳು ನಾಟಕಗಳನ್ನು ಜಾತ್ರಾ ಮಹೋತ್ಸವ ದಲ್ಲಿ ಆಯೋಜನೆ ಮಾಡುತ್ತಿರುವದು ಶ್ಲಾಘನೀಯ. ಇಂದಿನ ಯುವ ಪೀಳಿಗೆ ಮೊಬೈಲ್ ಫೋನ್ ಬಳಕೆಯಿಂದ ಗ್ರಾಮೀಣ ಕಲೆ ನಶಿಸುತಿದ್ದು ಯುವಕರು ಜೀವನದಲ್ಲಿ ನಿರುತ್ಸಾಹ ಹೆಚ್ಚಾಗುತ್ತಿದ್ದು ದುಶ್ಚಚಟಗಳಿಗೆ ಅಂಟಿಕೊಳ್ಳುತ್ತಿರುವದು ಕಳವಳಕಾರಿಯಾಗಿದೆ. ಯುವ ಶಕ್ತಿ ಆಧ್ಯಾತ್ಮದ ಕಡೆ ಹೆಚ್ಚಿನ ಒಲವು ತೋರುತ್ತಾ ಸಂಸ್ಕಾರಯುತವಾಗಿದ್ದರೆ ಸಮಾಜ ಸ್ವಸ್ಥ್ಯದಿಂದ ಇರುತ್ತದೆ ಎಂದರು.
ಶಿಕ್ಷಕ ಈರಣ್ಣ ಬೆಂಡಿಗೇರಿ ಮಾತನಾಡಿ, ಹುಟ್ಟಿದ ಸಂದರ್ಭದಲ್ಲಿ ಬಡತನವಿದ್ದರು ಅದು ನಿಮ್ಮ ತಪ್ಪಲ್ಲ. ಅದನ್ನು ಮೆಟ್ಟಿನಿಂತು ಜೀವನ ಸಾಗಿಸಬೇಕು. ದೇವರು ಕೊಟ್ಟ ಈ ಜನ್ಮದಲ್ಲಿ ಉನ್ನತ ಗುರಿ ಇಟ್ಟುಕೊಂಡು ಸಾಧನೆಯತ್ತ ಯುವಶಕ್ತಿ ಸಾಗಬೇಕಾಗಿದೆ. ಆದರೆ ಅನೇಕ ಯುವಕರು ತಮ್ಮ ಜೀವದ ಕಷ್ಟಗಳನ್ನು ಎದುರಿಸಾಲಗದೆ ಆತ್ಮಹತ್ಯೆಯಂತಹ ದಾರಿ ಹಿಡಿಯುತ್ತಿರುವದು ಅತ್ಯಂತ ದುರದೃಷ್ಟಕರ. ಆದ್ದರಿಂದ ಅಂತಹ ದಾರಿಯಲ್ಲಿ ಸಾಗದೆ ಕ್ರಿಯಾಶೀಲತೆಯಿಂದ ಸ್ವಯಂ ಕಾರ್ಯದಲ್ಲಿ ತೊಡಗಿಕೊಂಡು ಉದ್ಯೋಗಶಿಲರಾಗಬೇಕೆಂದರು.
ಗುರು ಮಡಿವಾಳೇಶ್ವರ ಮಠದ ಪೀಠಾದಿಪತಿ ಗಂಗಾಧರ ಸ್ವಾಮೀಜಿ ಸಾನಿಧ್ಯವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ಡಿಸಿಸಿ ಬ್ಯಾಂಕ್ ನಿರ್ದೇಶಕ ವಿ.ಡಿ.ಸಂಗಣ್ಣವರ, ಗದಿಗೆಪ್ಪ ಬೆಂಡಿಗೇರಿ, ಶಂಕರ ಕಳ್ಳಿ, ಎಸ್.ಕೆ.ಮೆಳ್ಳಿಕೇರಿ, ಸುರೇಶ ಬಾಳೆಕುಂದರಗಿ, ಗುರಶಾಂತಯ್ಯ ಹೀರೆಮಠ, ಪುಂಡಲಿಕ ನಾಗನೂರ, ಶ್ರೀಶೈಲ ಬಾಳೆಕುಂದರಗಿ, ಮಲ್ಲಿಕಾರ್ಜುನ ಸಂಪಗಾಂವ, ಬಸವರಾಜ ವೀವೆಕಿ, ಆನಂದ ಮತ್ತಿಕೊಪ್ಪ, ಆನೆಪ್ಪ ಬಾಳೆಕುಂದರಗಿ, ನಿಂಗಪ್ಪ ಆರೇರ, ಈರಯ್ಯ ಹೀರೆಮಠ, ಕುಮಾರ ಗಣಾಚಾರಿ, ಮಲ್ಲಿಕಾರ್ಜನ ವಿವೇಕಿ, ಶಂಕರ ಲಂಗೋಟಿ, ಕಿರಣ ಬಾಳೆಕುಂದರಗಿ,ಮಡಿವಾಳಪ್ಪ ಆರೇರ, ಮಲ್ಲಪ್ಪ ಯರಡಾಲ, ಈರಣ್ಣ ಬಾಳೆಕುಂದರಗಿ, ಮಡಿವಾಳಪ್ಪ ಕಕ್ಕೆರಿ, ಶ್ರೀಕಾಂತ ಹೀರೆಮಠ, ಕಾರೆಪ್ಪ ಬಾಳೆಕುಂದರಗಿ, ನಾಗಪ್ಪ ಆರೇರ, ಮಹಾಂತೇಶ ಮೂಲಿಮನಿ,ಮಂಜು ಬಾಳೆಕುಂದರಗಿ, ಈರಪ್ಪ ಆರೇರ, ಮಹೇಶ ಸಂಗೋಳ್ಳಿ, ಸಂತೋಷ ಆರೇರ, ಬಸವರಾಜ ಕಕ್ಕೇರಿ, ಶಿವಪ್ಪ ಬಾಳೆಕುಂದರಗಿ, ಶ್ರೀಶೈಲ ಆರೇರ, ಫಕೀರ ಜಾಧವ, ಮಹಾಂತೇಶ ಅವರಾಧಿ, ಮಂಜುನಾಥ ಪೇಂಟೆದ,‌ ಸಂಜು ಪಾಟೀಲ, ಮಂಜುನಾಥ ಕಳ್ಳಿ, ಮಡಿವಾಳಪ್ಪ ಬಾಳೆಕುಂದರಗಿ, ಇದ್ದರು.
ಗ್ರಾಪಂ ಸದಸ್ಯ ಬಸವರಾಜ ಬಾಳೆಕುಂದರಗಿ ಸ್ವಾಗತಿಸಿದರು. ಗಜಾನನ ಆರೇರ ನಿರೂಪಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ73ನೇ ಸಹಕಾರ ಸಪ್ತಾಹ–2026ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ ಮದ್ಯ ಕಳ್ಳಸಾಗಣೆಗ್ರಾಮೀಣ ಸಮುದಾಯಗಳಲ್ಲಿ ದೃಷ್ಟಿ ರಕ್ಷಿಸಲು ಬೆಳಗಾವಿಯ ರೋಟರಿ ಕ್ಲಬ್ ಸಂಚಾರಿ ಮಧುಮೇಹ ರೆಟಿನೋಪತಿ ತಪಾಸಣಾ ಯೋಜನೆಯನ್ನು ಪ್ರಾರಂಭಿಸಿದೆಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆ