18 Nov 2026, 12:22:38 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಅಥಣಿಯಲ್ಲಿ ಮೈನಸ್ಸ್ ಆಗಿದ್ದಕ್ಕೆ ನೋವಾಗಿದೆ- ಚುನಾವಣೆ ಇನ್ನೆರಡು ದಿನ ಇರುವಾಗ ಶಾಸಕ ತಮ್ಮಣ್ಣವರ್‌ ನನ್ನ ಕೈಗೆ ಸಿಕ್ಕಿಲ್ಲ ಎಂದ ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿ-೦೭ :ಅಥಣಿ ಮತಕ್ಷೇತ್ರದಲ್ಲಿ ನಮಗೆ 10 ಸಾವಿರ ಲೀಡ್‌ ಸಿಕ್ಕರೂ ಸಂತೋಷ ಇತ್ತು. ಆದರೆ 7 ಸಾವಿರ ಮೈನಸ್ಸ್‌ ಆಗಿದ್ದರಿಂದ ನೋವಾಗಿದೆ. ಅನಾವಶ್ಯಕವಾಗಿ ನಾವು ಯಾರನ್ನು ಟಾರ್ಗೆಟ್ ಮಾಡಿಲ್ಲ. ಅಥಣಿ, ಕುಡಚಿ ಮತಕ್ಷೇತ್ರದಲ್ಲಿ ಏಕೆ ಸಮಸ್ಯೆಯಾಗಿದೆ ಎಂಬುವುದನ್ನು ಸ್ವತಃ ಕಣ್ಣಾರೇ ಕಂಡಿದ್ದೇನೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಡೆಸು ಅವರು ಶಾಸಕ ಮಹೇಂದ್ರ ತಮ್ಮಣ್ಣವರ್‌ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಇನ್ನೆರಡು ದಿನ ಇರುವಾಗ ಸ್ವತಃ ಕುಡಚಿಯಲ್ಲಿ ನಾನೆ ಟಿಕಾಣಿ ಹುಡಿದರೂ ಶಾಸಕ ಮಹೇಂದ್ರ ತಮ್ಮಣ್ಣವರ್‌ ನನ್ನ ಕೈಗೆ ಸಿಕ್ಕಿಲ್ಲ. ಇನ್ನು ಅಥಣಿಯಲ್ಲಿ 77 ಸಾವಿರ ವಿಧಾನಸಭೆ ಚುನಾವಣೆಯಲ್ಲಿ ಲೀಡ್‌ ಸಿಕ್ಕಿತ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ 7 ಸಾವಿರ ಮೈನಸ್ಸ್‌ ಆಗಿದೆ. ಕನಿಷ್ಠ 10 ಸಾವಿರ ಲೀಡ್‌ ಸಿಕ್ಕರೂ ಸಂತೋಷ ಇತ್ತು. ಮೈನಸ್ಸ್‌ ಆಗಿದ್ದರಿಂದ ನಾನು ಕಾರ್ಯಕರ್ತರಿಗೆ ಅಲ್ಲಿ ನಡೆದ ಬೆಳವಣಿಗೆಗಳನ್ನು ತಿಳಿಸಿದ್ದೇನೆಂದರು.

ಇನ್ನು ಶಾಸಕರಾದ ಲಕ್ಷ್ಮಣ ಸವದಿ, ಮಹೇಂದ್ರ ತಮ್ಮಣ್ಣವರ್‌ ಅಥಣಿಯಲ್ಲಿ ಸೇರಿದ್ದ ಬಗ್ಗೆ ಮಾತನಾಡಿದ ಅವರು, ಜನ, ಕಾರ್ಯಕರ್ತರು, ಪಕ್ಷ ನಮ್ಮ ಪರ ಇದೆ. ನಮ್ಮನ್ನು ವಿರೋಧಿಸಲು ಅವರು ಯಾರು ಎಂದು ಪ್ರಶ್ನಿಸಿದರು. ತಾವು ಎನು ಮಾಡಿದ್ದಾರೆ ಎಂದು ಮನವರಿಕೆ ಮಾಡಿಕೊಳ್ಳಬೇಕು. ಶಾಸಕರ ಬಗ್ಗೆ ದೂರು ನೀಡಲ್ಲ. ದೂರು ನೀಡಿದರೂ ನಮ್ಮಲ್ಲಿ ಇನ್ನುವರೆಗೆ ಯಾರ ಮೇಲೆಯೂ ಕ್ರಮವಾಗಿಲ್ಲ. ಇವರು ಮಾಡಿದ್ದರ ಬಗ್ಗೆ ಜನಕ್ಕೆ ತಿಳಿಸುತ್ತೇನೆಂದರು ಹೇಳಿದರು.

ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಎಲ್ಲಾ ಕಾಂಗ್ರೆಸ್‌ ಶಾಸಕರು ಲೀಡ್‌ ಕೊಟ್ಟಿದ್ದಾರೆ. ಅಥಣಿಯಲ್ಲಿ ಶಾಸಕ ಸವದಿ ಅವರು ಲೀಡ್‌ ಕೊಟ್ಟಿದ್ದರೆ ಅವರ ನಮ್ಮ ಬಾಂಧವ್ಯ ಚೆನ್ನಾಗಿ ಉಳಿಯತ್ತಿತ್ತು. ಆದರೆ ಈಗ ನಮ್ಮಿಂದ ಅಂತರ ಕಾಯ್ದುಕೊಂಡಿದ್ದಾರೆ. ಚುನಾವಣೆಕ್ಕಿಂತ ಮುಂಚೆ ಪ್ರಿಯಂಕಾಗೆ ಲೀಡ್‌ ಕೊಡುತ್ತೇನೆ ಎಂದು ಅವರೇ ಸ್ವತಃ ಹೇಳಿದ್ದರು. ಆದರೆ 7 ಸಾವಿರ ಮೈನಸ್ಸ್‌ ಆಗಿದ್ದರಿಂದ ಅಥಣಿ ಜನತೆ ಅವರನ್ನೇ ಪ್ರಶ್ನಿಸುತ್ತಿದ್ದಾರೆ. ಜನಕ್ಕೆ ಅವರೇ ಉತ್ತರ ನೀಡಬೇಕೆಂದು ತಿಳಿಸಿದರು.

ಗ್ಯಾರಂಟಿಗಳು ಮುಂದೆವರೆಯುತ್ತವೆ. ಲೋಕಸಭೆ ಚುನಾವಣೆಯಲ್ಲಿ ಗ್ಯಾರಂಟಿಗಳ ಪರಿಣಾಮ ಬೀರಿದೆ. ಕಳೆದ ಬಾರಿ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಅಂತರ ಕಡಿಮೆಯಾಗಿದೆ. ಹೀಗಾಗಿ ಚುನಾವಣೆಯಲ್ಲಿ ಗ್ಯಾರಂಟಿಗಳ ಪರಿಣಾಮ ಬೀರಿದೆ. ಗ್ಯಾರಂಟಿಗಳನ್ನು ಮುಂದುವರೆಯುವ ಅವಶ್ಯಕತೆ ಇದೆ ಎಂದರು.
ಭವಿಷ್ಯ ಕೇಳಿ ನಾಮಪತ್ರ ಸಲ್ಲಿಸಿದವರಿಗೆ ಸೋಲು: ಪರಿಶ್ರಮ ಇದ್ದಾಗ ಮಾತ್ರ ಗೆಲುವು ಸಾಧ್ಯ. ಅಭ್ಯರ್ಥಿ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾಗ ಹಾಗೂ ಜನರ ಜೊತೆ ಉತ್ತಮ ಒಡನಾಟ ಹೊಂದಿದಾಗ ಮಾತ್ರ ಜನರ ಮನಸ್ಸಿನಲ್ಲಿ ಉಳಿಯಲು ಸಾಧ್ಯ. ಅದನ್ನು ಬಿಟ್ಟು ಭವಿಷ್ಯ ಕೇಳಿ ನಾಮಪತ್ರ ಸಲ್ಲಿಸಿ ನಾವು ಗೆಲ್ಲುತ್ತೇವೆ ಎಂದು ಹಗಲು ಕನಸು ಕಂಡ ಅಭ್ಯರ್ಥಿಗಳಿಗೆ ಸೋಲಾಗಿದೆ ಎಂದು ಹಾಸ್ಯ ಚಟಾಕೆ ಹಾರಿಸಿದರು.

ಮೂರು ಜಿಲ್ಲೆಗಳು ಆಗಬೇಕು: ಬೆಳಗಾವಿ ವಿಭಜಿಸಿ ಚಿಕ್ಕೋಡಿ, ಗೋಕಾಕ ಕೇಂದ್ರವಾಗಿ ಇನ್ನೆರಡು ಹೊಸ ಜಿಲ್ಲೆಗಳಾಗಬೇಕು. ಬೆಳಗಾವಿ ಜಿಲ್ಲೆ ಪ್ರಾದೇಶಿಕವಾಗಿ ಬಹಳ ದೊಡ್ಡದಿದೆ. ಆಡಳಿತದ ದೃಷ್ಟಿಯಿಂದ ಇದು ಸರಿಯಲ್ಲ. ಜಿಲ್ಲೆ ವಿಭಜನೆ ಆಗಬೇಕು ಎಂದು ನಾನು ಹಿಂದೆಯೂ ಹೇಳಿದ್ದೆ. ಈಗಲೂ ಅಷ್ಟೇ. ಆಡಳಿತ ಸುಗಮವಾಗಲು ಗೋಕಾಕ- ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಮಾಡಬೇಕಿದೆ ಎಂದರು.

ಬೆಳಗಾವಿ ಜಿಲ್ಲೆಯನ್ನು ಗೋಕಾಕ್, ಚಿಕ್ಕೋಡಿ ಹಾಗೂ ಬೆಳಗಾವಿ ಎಂಬ ಮೂರು ಜಿಲ್ಲೆಗಳನ್ನಾಗಿ ಮಾಡಲು ಒತ್ತಡ ಮೊದಲಿನಿಂದಲೇ ಇದ್ದೇ ಇದೆ. ಬೆಳಗಾವಿಯು ರಾಜ್ಯದ ಅತೀ ದೊಡ್ಡ ಜಿಲ್ಲೆಯಾಗಿದೆ. ಉಡುಪಿಯಂತ ಜಿಲ್ಲೆಯಲ್ಲಿ 9 ಲಕ್ಷ ಜನ ಇದ್ದಾರೆ. ಆದರೆ ಬೆಳಗಾವಿ ತಾಲೂಕಿನಲ್ಲೇ 9 ಲಕ್ಷ ಜನ ಇದ್ದಾರೆ. ಆದ್ದರಿಂದ 18 ವಿಧಾನಸಭಾ ಕ್ಷೇತ್ರಗಳ ಭಾಗವನ್ನು ವ್ಯಾಪಿಸಿರುವ ಕರ್ನಾಟಕದ ಅತಿದೊಡ್ಡ ಜಿಲ್ಲೆಯಾದ ಬೆಳಗಾವಿಯನ್ನು ಮೂರು ಭಾಗಗಳಾಗಿ ವಿಭಜಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಬೆಳಗಾವಿಯ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಅವರ ಸೋಲಿನ ಕುರಿತು ಮಾತನಾಡಿದ ಸಚಿವ ಸತೀಶ್‌ ಜಾರಕಿಹೊಳಿ, ವೈಯಕ್ತಿಕ ಜವಾಬ್ದಾರಿ ವಿಷಯವನ್ನೂ ಒತ್ತಿ ಹೇಳಿದರು. ಹೆಬ್ಬಾಳ್ಕರ್ ಅವರ ಸೋಲಿಗೆ ಯಾರೂ ಜವಾಬ್ದಾರರಲ್ಲ. ಅವರು ತಮ್ಮ ಜವಾಬ್ದಾರಿಯನ್ನು ತಾವೇ ಹೊರಬೇಕೆಂದರು.
ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ, ಕಾಂಗ್ರೆಸ್‌ ಮುಖಂಡರಾದ ಸೈಯದ್‌ ಮನಸೂರ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ73ನೇ ಸಹಕಾರ ಸಪ್ತಾಹ–2026ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ ಮದ್ಯ ಕಳ್ಳಸಾಗಣೆಗ್ರಾಮೀಣ ಸಮುದಾಯಗಳಲ್ಲಿ ದೃಷ್ಟಿ ರಕ್ಷಿಸಲು ಬೆಳಗಾವಿಯ ರೋಟರಿ ಕ್ಲಬ್ ಸಂಚಾರಿ ಮಧುಮೇಹ ರೆಟಿನೋಪತಿ ತಪಾಸಣಾ ಯೋಜನೆಯನ್ನು ಪ್ರಾರಂಭಿಸಿದೆಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆ