18 Nov 2026, 12:30:59 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಅಮೂಲ್ಯ ಮತ ನೀಡಿ ಸದನಕ್ಕೆ ಕಳುಹಿಸಿದ ಚಿಕ್ಕೋಡಿ ಜನತೆಗೆ ಸದನ ದಲ್ಲಿಯೇ ಧನ್ಯವಾದ ತಿಳಿಸಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ

ಬೆಳಗಾವಿ-01: ಡಾ.ಬಿ.ಆರ್. ಅಂಬೇಡ್ಕರ್ ಅವರು ಚಿಕ್ಕೋಡಿ ನ್ಯಾಯಾಲಯದಲ್ಲಿ ವಾದ ಮಾಡಿದ್ದರು. ಅಲ್ಲಿಂದ ಈ ಸದನ ಪ್ರವೇಶ ಮಾಡಿದಕ್ಕೆ ನನಗೆ ಹೆಮ್ಮೆ ಎನಿಸುತ್ತದೆ ಎಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಸದನಕ್ಕೆ ತಿಳಿಸಿದರು.

ಗುರುವಾರ ಮಳೆಗಾಲದ ಸಂಸತ್ ಅಧಿವೇಶನದಲ್ಲಿ ಮೊದಲ ಭಾಷಣ ಮಾಡಿದ ಅವರು, ಒಂದು ದೇಶದ ಪ್ರಗತಿಯನ್ನು ಆ ದೇಶದ ಶಿಕ್ಷಣದ ಗುಣಮಟ್ಟದಿಂದ ಅಳೆಯಬೇಕು ಎಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದರು. ಆ ಹಿನ್ನೆಲೆಯಲ್ಲಿ ನಾನು ಕೆಲವು ವಿಷಯಗಳನ್ನು ಸದನ ದ ಮುಂದೆ ಇಡುತ್ತಿದ್ದೇನೆ. ನಮ್ಮ ದೇಶದಲ್ಲಿ ಶಿಕ್ಷಣ ಮಟ್ಟ ಕುಸಿಯುತ್ತಿದೆ. ಇದು ಈ ದೇಶದ ಮುಂದೆ ಇರುವ ಅನೇಕ ಸವಾಲುಗಳಲ್ಲಿ ಒಂದು. ಇದಕ್ಕೆ ಅನೇಕ ಕಾರಣಗಳು ಇವೆ. ಇವುಗಳಲ್ಲಿ ಕೆಲವು - ಕೇಂದ್ರ ಸರಕಾರ ತನ್ನ ವಾರ್ಷಿಕ ಆಯವ್ಯಯದಲ್ಲಿ ಶಿಕ್ಷಣಕ್ಕೆ ನೀಡುವ ಅನುದಾನ ವರ್ಷ ದಿಂದ ವರ್ಷಕ್ಕೆ ಕಮ್ಮಿಯಾಗುತ್ತಿದೆ ಎಂದು ತಿಳಿಸಿದರು.

ಉದಾಹರಣೆಗೆ ಕಳೆದ ವರ್ಷದ ಅನುದಾನ ಹಾಗೂ ಈ ವರ್ಷದ ಪರಿಷ್ಕೃತ ಅಂದಾಜು ಪಟ್ಟಿಗೆ ಹೋಲಿಸಿದರೆ, ಕೇಂದ್ರೀಯ ವಿಶ್ವ ವಿದ್ಯಾಲಯ ಅನುದಾನ ಆಯೋಗಕ್ಕೆ ನೀಡುವ ಅನುದಾನ ಶೇ. 53 ಕ್ಕಿಂತ ಕಮ್ಮಿಯಾಗಿದೆ. ಇದರಿಂದ ಸರ್ಕಾರಿ ಸಂಸ್ಥೆ ಗಳ ಮೇಲೆ ಅವಲಂಬನ ಆಗಿರುವ ಬಡವರ ಬದುಕು ದುರ್ಬರ ವಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಖಾಸಗಿಕರಣ ನಡೆಯುತ್ತಿದೆ. ಇದರಿಂದ ಬಡವರು, ಪರಿಶಿಷ್ಟ ಜಾತಿ ಮತ್ತು ವರ್ಗ , ಗ್ರಾಮೀಣ ಪ್ರದೇಶದ ಯುವಕ, ಯುವತಿಯರು ಹಾಗೂ ಹಿಂದುಳಿದ, ಅವಕಾಶ ವಂಚಿತ ಜಾತಿಯ ಯುವಕರಿಗೆ ಅನ್ಯಾಯ ವಾಗುತ್ತಿದೆ. ಇದಕ್ಕೆ ಪರಿಹಾರ ಏನು ? ಎಂದು ನಾನು ನಿಮ್ಮ ಮೂಲಕ ಕೇಂದ್ರ ಶಿಕ್ಷಣ ಸಚಿವರನ್ನು ಕೇಳಲು ಬಯಸುತ್ತೇನೆ ಎಂದರು.

ಇನ್ನು ಕಳೆದ ಕೆಲ ವರ್ಷಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆ ಗಳಲ್ಲಿ ವಿದ್ಯಾರ್ಥಿ ಗಳ ಸೇರ್ಪಡೆ ಹಾಗೂ ಉದ್ಯೋಗಕ್ಕಾಗಿ ನಡೆಸುವ ಪರೀಕ್ಷೆ ಗಳಲ್ಲಿ ಅನೇಕ ಅವ್ಯವಹಾರ ನಡೆದು, ಯುವ ಜನರ ಭವಿಷ್ಯ ಡೋಲಾಯಮಾನವಾಗಿದೆ. 15 ರಾಜ್ಯ ಗಳಲ್ಲಿ ನೀಟ ಹಾಗೂ ಇತರ ಪರೀಕ್ಷೆ ಗಳು ಸರಿಯಾಗಿ ನಡೆದಿಲ್ಲ. ಅದರಲ್ಲಿ ಅನೇಕ ತಪ್ಪುಗಳು ನಡೆದಿವೆ. ಯುವ ಜನರು ವ್ಯವಸ್ಥೆ ಯನ್ನು ನಂಬಬಾರದು ಎನ್ನುವಂತೆ ಆಗಿದೆ. ಇದಕ್ಕೆ ಪರಿಹಾರ ಏನು ಎಂದು ನಾನು ನಿಮ್ಮ ಮೂಲಕ ಕೇಂದ್ರ ಶಿಕ್ಷಣ ಸಚಿವ ರನ್ನು ಕೇಳಲು ಬಯಸುತ್ತೇನೆ. ಇನ್ನು ನನ್ನ ಜಿಲ್ಲೆಯ ಗೋಕಾಕ ಹಾಗೂ ಅಥಣಿ ಗಳಿಗೆ ಹೊಸ ಕೇಂದ್ರೀಯ ವಿದ್ಯಾಲಯ ಮಂಜೂರು ಮಾಡುವಂತೆ ನಾವು ಕೇಂದ್ರ ವನ್ನು ಕೇಳಿಕೊಂಡಿದ್ದೇವೆ. ಆದರೆ ಕೇಂದ್ರದಿಂದ ಉತ್ತರ ದೊರೆತಿಲ್ಲ. ಅವುಗಳನ್ನು ಬೇಗ ಆರಂಭ ಮಾಡುವಂತೆ ನಾನು ನಿಮ್ಮ ಮೂಲಕ ಕೇಂದ್ರ ಶಿಕ್ಷಣ ಸಚಿವರನ್ನು ಕೇಳಲು ಬಯಸುತ್ತೇನೆ ಎಂದರು.

ಮಾನ್ಯರೇ, ನನ್ನ ಕ್ಷೇತ್ರ ದಲ್ಲಿ ಪ್ರವಾಹ ಬಂದಿದೆ . ಅನೇಕ ಶಾಲೆ ಕಟ್ಟಡ ಗಳು ಬಿದ್ದು ಹೋಗಿವೆ ಅಥವಾ ಶಿಥಿಲ ಅವಸ್ಥೆ ಗೆ ಬಂದಿವೆ. ಇವನ್ನೂ ಮರು ನಿರ್ಮಾಣ ಮಾಡಲು ಕೇಂದ್ರ ಪ್ರತಿ ಶಾಲೆಗೆ ರು. 2 ಲಕ್ಷ ಧನ ಸಹಾಯ ಮಾಡುತ್ತದೆ. ಆದರೆ ನನ್ನ ಕ್ಷೇತ್ರಕ್ಕೆ ಈ ಹಣ ಬಂದಿಲ್ಲ. ಆದಷ್ಟು ಬೇಗ ಅದನ್ನು ಬಿಡುಗಡೆ ಮಾಡಬೇಕು. ಅಲ್ಲದೆ, ಈ ಧನ ರಾಶಿ ಯನ್ನು ಹೆಚ್ಚು ಮಾಡಿ ಎಂದು ನಾನು ಕೋರುತ್ತೇನೆ ಎಂದು ಸಭಾಧ್ಯಕ್ಷರಿಗೆ ಕೋರಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ73ನೇ ಸಹಕಾರ ಸಪ್ತಾಹ–2026ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ ಮದ್ಯ ಕಳ್ಳಸಾಗಣೆಗ್ರಾಮೀಣ ಸಮುದಾಯಗಳಲ್ಲಿ ದೃಷ್ಟಿ ರಕ್ಷಿಸಲು ಬೆಳಗಾವಿಯ ರೋಟರಿ ಕ್ಲಬ್ ಸಂಚಾರಿ ಮಧುಮೇಹ ರೆಟಿನೋಪತಿ ತಪಾಸಣಾ ಯೋಜನೆಯನ್ನು ಪ್ರಾರಂಭಿಸಿದೆಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆ