18 Nov 2026, 12:47:08 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

25 ನೇ ವರ್ಷದ ಕಾರ್ಗಿಲ್ ವಿಜಯ ದಿವಸ್ ಪೂರ್ವಭಾವಿ ಸಭೆ

ಬೈಲಹೊಂಗಲ-08: ಪಟ್ಟಣದ ಮುರಗೋಡ ರಸ್ತೆಯಲ್ಲಿರುವ ಪೃಥ್ವಿ ಗಾರ್ಡನ್ ದಲ್ಲಿ 25 ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಜು26 ರಂದು ಅದ್ದೂರಿಯಾಗಿ ನಡೆಸಲಾಗುವದು ಎಂದು ತಾಲೂಕಾ ಮಾಜಿ ಸೈನಿಕರ ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಸೈನಿಕ ಬಿ.ಬಿ.ಬೊಗೂರ ಹೇಳಿದರು.
ಪಟ್ಟಣದ ಹೊಸೂರ ರಸ್ತೆಯ ವಿಜಯ ಸೋಸಿಯಲ್ ಕ್ಲಬ್ ನಲ್ಲಿ 25 ನೇ ವರ್ಷದ ಕಾರ್ಗಿಲ್ ವಿಜಯ ದಿವಸ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸೈನಿಕರ ವೃತ್ತಿ ಜೀವನದಲ್ಲಿ ಯುದ್ದ ನಡೆದರೆ ಸೈನಿಕ ವೃತ್ತಿಯಲ್ಲಿ ಅದೊಂದು ಸುದೈವ. ತಾಯಿ ರಕ್ಷಣೆಯಲ್ಲಿ ತೊಡಗಿದಾಗ ವೈರಿಪಡೆಯ ಹೆಡಮೂರಿ ಕಟ್ಟಲು ಸೈನಿಕರಿಗೆ ಅದೊಂದು ಸುಸಂಧಿ. ಅಂತಹ ಕಾರ್ಗಿಲ್ ಯುದ್ದದ ದಿನಗಳನ್ನು ಪ್ರತಿವರ್ಷ ನೆನಪಿಸುವ
ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಅವರು ಕಾರ್ಗಿಲ್ ವಿಜಯ ದಿವಸ ಆಚರಿಸಿಕೊಂಡು ಬಂದಿದ್ದು ಅಂದು ಸೈನಿಕರಿಗೆ ಸತ್ಕಾರ, ಕಾರ್ಗಿಲ್ ಯುದ್ದದ ಸಾಧನೆಯ ಅನಾವರ ಹಾಗೂ ಯುದ್ಧದಲ್ಲಿ ಭಾಗವಹಿಸಿದ್ದ ಅನೇಕರ ಸತ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಈ ಭಾಗದ ಸೈನಿಕರಿಗೆ ಗೌರವ ತಂದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಜು26 ರಂದು ಅತ್ಯಂತ ವಿಜೃಂಭಣೆಯಿಂದ ಕಾರ್ಗಿಲ್ ವಿಜಯ ದಿವಸ್ ಆಚರಿಸಲಿದ್ದು ಅಂದು ಭಾರತೀಯ ರಕ್ಷಣಾ ಪಡೆ ಪಾಕಿಸ್ತಾನದ ವಿರುದ್ದ ಗೆಲವು ಸಾಧಿಸಿ 25ವರ್ಷಗಳು ಸಂದಲಿವೆ. ಈ ನಿಟ್ಟಿನಲ್ಲಿ ಮಾಜಿ ಸೈನಿಕರ ಸತ್ಕಾರ, ಸೈನಿಕ ಕುಟುಂಬದ ಸಾಧನೆಗಾರರ ಸತ್ಕಾರ ಹಾಗೂ ನಗರದಲ್ಲಿ ಅಂದು ಮಾಜಿ ಸೈನಿಕರ ಪೇರೆಡ್ ನಡೆಸಲಾಗುವದು. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಮಾಜಿ ಸೈನಿಕರು ಸಂಪರ್ಕ ಮಾಡಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಕೊರಿದರು.
ಅತಿಥಿಯಾಗಿ ಆಗಮಿಸಿದ್ದ ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಕಾರ್ಗಿಲ್ ಯುದ್ದಕ್ಕೆ 25 ವಸಂತ ಪೊರೈಸುವ ಈ ಸಂದರ್ಭದಲ್ಲಿ ಹೊರಾಟದ ನಾಡು ಬೈಲಹೊಂಗಲದ ಭಾಗದಿಂದ ಅನೇಕ ಸೈನಿಕರು ಕಾರ್ಗಿಲ್ ಯುದ್ದದಲ್ಲಿ ಭಾಗವಹಿಸಿದ್ದು ಅವರ ಸಾಧನೆ ಹಾಗೂ ಕುಟುಂಬವನ್ನೆಲ್ಲ ಬಿಟ್ಟು ದೇಶ ಸೇವೆಗೈದ ಸೈನಿಕರನ್ನು ಗೌರವಿಸುವ ಉದ್ದೇಶದಿಂದ ಅನೇಕ ವರ್ಷಗಳಿಂದ ಹಮ್ಮಿಕೊಂಡು ಬರುತ್ತಿರುವ ಕಾರ್ಗಿಲ್ ವಿಜಯ ದಿವಸ್ ಅತ್ಯಂತ ವಿಜೃಂಭಣೆಯಿಂದ ಪಟ್ಟಣದಲ್ಲಿ ಆಚರಿಸಲಾಗುವದು. ಈ ಕಾರ್ಯಕ್ರಮಕ್ಕೆ ಈ ನಾಡಿನ ಎಲ್ಲ ಮಾಜಿ ಹಾಗೂ ರಜೆಗೆ ಬಂದಿರೂವ ಸೈನಿಕರು ಹಾಗು ಕುಟುಂಬ ವರ್ಗ ಆಗಮಿಸಬೇಕೆಂದರು.

*ಸಂಪರ್ಕ:ಪಟ್ಟಣದಲ್ಲಿ ನಡೆಯುವ ಬೆಳ್ಳಿ ಹಬ್ಬ ಕಾರ್ಗಿಲ್ ವಿಜಯ ದಿವಸಕ್ಕೆ ಆಗಮಿಸುವ ಮಾಜಿ ಹಾಗೂ ರಜೆಯಲ್ಲಿರುವ ಯೋಧರು ಹಾಗೂ ಸೈನಿಕರ ಕುಟುಂಬದಲ್ಲಿ ವಿಶೇಷ ಸಾಧನೆ ಮಾಡಿದವರು ತಮ್ಮ ವಿವರವನ್ನು ಪೋನ್ ಮೂಲಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಿ.ಬಿ‌. ಬೋಗೂರ 97395 05451 ಶೇಖರ ನವಲಗಟ್ಟಿ9844514127 ಇವರಿಗೆ ತಿಳಿಸಲು ವಿನಂತಿ ಮಾಡಿದರು*

ಪೂರ್ವಭಾವಿ ಸಭೆಯಲ್ಲಿ ಮಾಜಿ ಸೈನಿಕರಾದ ಗಂಗಪ್ಪ ಗುಗ್ಗರಿ, ಚಂದ್ರಶೇಖರ ನೇಸರಗಿ, ಶಿವಾನಂದ ಹಡಪದ, ಟಿ.ಬಿ.ಮಾವಿನಕಟ್ಟಿ, ಶೇಖರ ನವಲಗಟ್ಟಿ, ಚನ್ನಪ್ಪ ಬೇವಿನಕೊಪ್ಪ, ಸುರೇಶ ಕಮ್ಮಾರ, ಮಂಜುನಾಥ ಬಾಗೇವಾಡಿ, ಎಲ್.ಎಸ್.ಪಾಟೀಲ, ರಾಜಶೇಖರ ಸವಟಗಿ, ದೇಮನಗೌಡ ಪಾಟೀಲ, ಸೋಮನಿಂಗ ವಕ್ಕುಂದ ಮಹಾದೇವ ತುರಮರಿ, ದೇಮಪ್ಪ ಶಿರಗಾಂವಿ, ಉಳವಪ್ಪ ದೇಗಾಂವಿ, ಹಣಮಂತ ಹಳ್ಳಿ, ಬಸವರಾಜ ವಕ್ಕುಂದ, ಕೆ.ಎಲ್.ಪಾಟೀಲ, ಚಂದ್ರಗೌಡ ಗೌಡರ, ಗಂಗಾಧರ ತಿಗಡಿ, ಬಾಬು ವಾಲಿಕಾರ, ಶಿವಾನಂದ ಕುಂಬಾರ ಸೇರಿದಂತೆ ನೂರಾರು ಮಾಜಿ ಸೈನಿಕ ಪಾಲ್ಗೊಂಡಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ73ನೇ ಸಹಕಾರ ಸಪ್ತಾಹ–2026ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ ಮದ್ಯ ಕಳ್ಳಸಾಗಣೆಗ್ರಾಮೀಣ ಸಮುದಾಯಗಳಲ್ಲಿ ದೃಷ್ಟಿ ರಕ್ಷಿಸಲು ಬೆಳಗಾವಿಯ ರೋಟರಿ ಕ್ಲಬ್ ಸಂಚಾರಿ ಮಧುಮೇಹ ರೆಟಿನೋಪತಿ ತಪಾಸಣಾ ಯೋಜನೆಯನ್ನು ಪ್ರಾರಂಭಿಸಿದೆಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆ