11/12/2025
IMG-20250620-WA0005

ಅಮಹದಾಬಾದ್-20:‌ ಯು ಮುಂಬಾ ತಂಡವು ಅಲ್ಟಿಮೇಟ್‌ ಟೇಬಲ್‌ ಟಿನಿಸ್‌ (ಯುಟಿಟಿ) ಟೂರ್ನಿಯ 6ನೇ ಅವೃತ್ತಿಯ ಕಿರೀಟವನ್ನು ಮಡಿಗೇರಿಸಿಕೊಂಡಿತು.

ಇ.ಕೆ.ಎ. ಅರೆನಾದಲ್ಲಿ ಇತ್ತೀಚೆಗೆ ನಡೆದ ಫೈನಲ್‌ನಲ್ಲಿ ಮುಂಬಾ ತಂಡವು 8-4 ಅಂತರದಿಂದ ಜೈಪುರ ಪೇಟ್ರಿಯಾಟ್ಸ್ ತಂಡವನ್ನು ಸೋಲಿಸಿ, ತನ್ನ ಚೊಚ್ಚಲ ಪ್ರಶಸ್ತಿಯನ್ನು ಗೆದ್ದುಕೊಂಡಿತು.

IMG 20250620 WA0004 - IMG 20250620 WA0004

ಚಾಂಪಿಯನ್ ಆಗಿ ಹೊರಹೊಮ್ಮಿದ ಯು ಮುಂಬಾ ತಂಡಕ್ಕೆ 60 ಲಕ್ಷ ಮತ್ತು ರನ್ನರ್ ಅಪ್ ಜೈಪುರ ತಂಡ 40ಲಕ್ಷ ಹಾಗೂ ಸೆಮಿಫೈನಲ್‌ ತಲುಪಿದ್ದ ದಬಾಂಗ್ ಡೆಲ್ಲಿ ಟಿಟಿಸಿ ಮತ್ತು ಗೋವಾರ ಚಾಲೆಂಜರ್ಸ್ ತಂಡಗಳು ತಲಾ 17.5 ಲಕ್ಷ ಪಡೆದವು. ಹಾಲಿ ಆವೃತ್ತಿಯಲ್ಲಿ ಒಟ್ಟು ಎಂಟು ತಂಡಗಳು ಪ್ರಶಸ್ತಿಗೆ ಸೆಣಸಾಟ ನಡೆಸಿದ್ದವು.

ಗೆಲುವಿನ ಯಶಸ್ಸು ತಂದ ಕೊಟ್ಟ ಯಶಸ್ವಿನಿ: ಕರ್ನಾಟಕದ ಯುವ ತಾರೆ ಯಶಸ್ವಿನಿ ಘೋರ್ಪಡೆ ಬೆಳಗಾವಿಯ ಮೂಲದವರಾಗಿದ್ದು, ಸತತ 2ನೇ ವರ್ಷವೂ ಯುಟಿಟಿಯಲ್ಲಿ ಪ್ರಶಸ್ತಿ ಎತ್ತಿಹಿಡಿದಿದ್ದಾರೆ. ಯಶಸ್ವಿನಿ ಕಳೆದ ಆವೃತ್ತಿಯಲ್ಲಿ ಚಾಂಪಿಯನ್ ಡೆಂಪೊ ಗೋವಾ ಚಾಲೆಂಜರ್ಸ್ ತಂಡದ ಸದಸ್ಯೆಯಾಗಿದ್ದರು. ಅಲ್ಲದೇ ಇವರು ಮಹಿಳೆಯರ ವಿಭಾಗದಲ್ಲಿ ಪ್ರಸ್ತುತ ಭಾರತ 2 ನೇ ಸ್ಥಾನ, ಯುವ ಭಾರತ 1 ನೇ ಸ್ಥಾನ, ಯುವ ಡಬಲ್ಸ್ ಪದ 1 ನೇ ಸ್ಥಾನ, ಪ್ರಸ್ತುತ ವಿಶ್ವದಲ್ಲಿ 81 ನೇ ಸ್ಥಾನ ಪಡೆದಿದ್ದು, ಇವರು22-23ಸಾಲಿನ ಕರ್ನಾಟಕ ಸರ್ಕಾರದ ಏಕಲವ್ಯ ಪ್ರಶಸ್ತಿ ಸೇರಿದಂತೆ 50 ರಾಷ್ಟ್ರೀಯ ಪದಕ ಹಾಗೂ 50ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ.

ಸಾಧನೆಗೈದ ಯಶಸ್ವಿನಿಗೆ ಶುಭಾಷಯಗಳ ಮಹಾಪೂರ: ಟೇಬಲ್‌ ಟೆನಿಸ್ ದಲ್ಲಿ ಸಾಧನೆ ಮಾಡಿದ ಕರ್ನಾಟಕದ ಯುವ ತಾರೆ ಯಶಸ್ವಿನಿ ಘೋರ್ಪಡೆ ಅವರಿಗೆ ಕಲಿತ ಶಾಲೆ, ಕ್ರೀಡಾ ತರಬೇತಿದಾರು ಸೇರಿದಂತೆ ಬೆಳಗಾವಿ ಹಾಗೂ ಗದಗದ ಅವರ ಕುಟುಂಬಸ್ಥರು ಶುಭ ಹಾರೈಸಿದ್ದಾರೆ. ಇವರ ಸಾಧನೆ ಇನ್ನೆ ಆಕಾಶಕ್ಕೆತರಕ್ಕೆ ಎರಲಿ ಎಂಬುವುದು ಅವರ ಅಭಿಮಾನಿಗಳ ಆಶಯಗಳಾಗಿವೆ.

error: Content is protected !!