11/12/2025
IMG-20250418-WA0002

ನೇಸರಗಿ-18:ಸಮೀಪದ ಮತ್ತಿಕೊಪ್ಪ ಗ್ರಾಮದ ಶ್ರೀ ಗ್ರಾಮದೇವತೆಯರ ಹಾಗೂ ಶ್ರೀ ಕಲ್ಮೇಶ್ವರ ದೇವರ ಜಾತ್ರಾ ಮಹೋತ್ಸವವು ಮಂಗಳವಾರ ದಿ. 22-04-2025 ರಿಂದ 02-05-2025 ರವರೆಗೆ ಅದ್ದೂರಿಯಾಗಿ ನೆರವೇರಲಿದೆ.ಜಾತ್ರಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಇಂಚಲ ಸಾಧು ಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳು ಮತ್ತು ದತ್ತವಾಡದ ಶ್ರೀ ಹೃಷಕೇಶಾನಂದ ಬಾಬಾ ಮಹಾರಾಜರು ವಹಿಸುವರು.
ದಿ. 22 ರಂದು ಮಲ್ಲಾಪೂರ ಶ್ರೀ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಶ್ರೀ ಕಲ್ಮೇಶ್ವರ ರುದ್ರಾಭಿಷೇಕ,ಬೆಳಿಗ್ಗೆ 9 ಘಂಟೆಗೆ ರಥದ ಕಳಸಾರೋಹಣ, ಶ್ರೀ ಅಡವಿ ಸಿದ್ದೇಶ್ವರ ಮಠದಿಂದ ಸರ್ವ
ಸುಮಂಗಲೆಯರಿಂದ ಸಕಲ ವಾದ್ಯ ಮೇಳದೊಂದಿಗೆ ಕುಂಭಮೇಳ,ಇಂಚಲ ಮಠದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳ ಮತ್ತು ಬೆಳಗಾವಿಯ ಶ್ರೀ ಗಂಗಾ ಮಾತೋಶ್ರೀ ಇವರ ಸಾನಿಧ್ಯದಲ್ಲಿ ದೈವದ ವತಿಯಿಂದ ಉಡಿ ತುಂಬುವದು, ರಾತ್ರಿ 9 ಕ್ಕೆ ಭಾರತೀಯ ಸೇನಾ ಪಡೆ ವತಿಯಿಂದ ರಸಮಂಜರಿ ಕಾರ್ಯಕ್ರಮ ನಡೆಯುತ್ತದೆ.
ದಿ. 23 ರಂದು ಗ್ರಾಮದ ಎಲ್ಲ ಬಾಬತ್ತುದಾರರ ಮನೆಗಳಲ್ಲಿ ಉಡಿ ತುಂಬುವದು,ಸಂಜೆ 4 ಘಂಟೆಗೆ ಹೊನ್ನಾಟ್, ರಾತ್ರಿ ದೇಸಾಯಿ ಅವರ ಮನೆಯಲ್ಲಿ ವಾಸ್ತವ್ಯ,ಮಹಾಪ್ರಸಾದ, ಭಜನೆ ಮನೋರಂಜನೆ ಕಾರ್ಯಕ್ರಮಗಳು ನೆರವೇರುತ್ತವೆ. ದಿ. 24 ರಂದು ಬೆಳ್ಳಿಗ್ಗೆ ಗ್ರಾಮದೇವಿಯರಿಗೆ ಉಡಿ ತುಂಬುವದು, ರಾತ್ರಿ ಗೌಡರ ಮನೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ. ದಿ. 25 ರಂದು ಉಡಿ ತುಂಬುವದು, 4 ಘಂಟೆಗೆ ಹೊನ್ನಾಟ್, ರಾತ್ರಿ 7 ರಿಂದ 9 ರ ವರೆಗೆ ಕಾದರವಳ್ಳಿಯ ಪಾಲಾಕ್ಷ ಶಿವಯೋಗಿಗಳು ಹಾಗೂ ಬೆಣವಾಡದ ರಾಮಣ್ಣ ಶರಣರಿಂದ ಪ್ರವಚನ ಕಾರ್ಯಕ್ರಮ ನಡೆಯಲಿದೆ. ದಿ. 26 ರಂದು ಉಡಿ ತುಂಬುವದು, 4 ಘಂಟೆಗೆ ಶ್ರೀ ಮಾರುತಿ ಓಂಕಾರೋತ್ಸವ, ಮಲ್ಲಾಪೂರ ಗಾಳೇಶ್ವರ ಮಠದ ಚಿದಾನಂದ ಶ್ರೀಗಳು,ಸುತಗಟ್ಟಿಯ ಶ್ರೀ ಸಿದ್ದಲಿಂಗ ಶ್ರೀಗಳು, ಮದನಬಾವಿಯ ಮಾತೋಶ್ರೀ ಶಿವದೇವಿ ತಾಯಿ, ರಾಮಣ್ಣ ಶರಣರಿಂದ ಪ್ರವಚನ ದಿ. 27 ರಂದು ಉಡಿ ತುಂಬುವದು, 4 ಘಂಟೆಗೆ ಹೊನ್ನಾಟ, ರಾತ್ರಿ 7 ರಿಂದ 9 ರವರೆಗೆ ಬೈಲಹೊಂಗಲದ ಪ್ರಭು ನೀಲಕಂಠ ಮಹಾಸ್ವಾಮಿಗಳು, ಸಿಂಗಳಾಪುರ ಶಿವಾನಂದ ಶ್ರೀಗಳಿಂದ ಪ್ರವಚನ, ದಿ. 28 ರಂದು ಉಡಿ ತುಂಬುವದು, 4 ಕ್ಕೆ ಹೊನ್ನಾಟ, ರಾತ್ರಿ ಗ್ರಾಮದ ರಂಗಮಂದಿರದಲ್ಲಿ ವಾಸ್ತವ್ಯ, ರಾತ್ರಿ 7 ರಿಂದ 9 ರವರೆಗೆ ಮುರಗೋಡದ ಶ್ರೀ ನೀಲಕಂಠ ಶ್ರೀಗಳು, ಯರಝರ್ವಿಯ ಶ್ರೀ ಅವಧುತ ಚಿದಾನಂದ ಶ್ರೀಗಳ ಪ್ರವಚನ ನಡೆಯಲಿದೆ. ರಾತ್ರಿ 10 ಘಂಟೆಗೆ ಬಾಳು ಬೆಳಗಿದ ಮನೆ ( ಸ್ವಾಮಿನಿಷ್ಟ ಸಹೋದರರು) ಎಂಬ ಸುಂದರ ಸಾಮಾಜಿಕ ನಾಟಕ ನೆರವೇರಲಿದೆ. ದಿ. 29 ರಂದು ಬೆಳಿಗ್ಗೆ 8 ರಿಂದ ಸಂಜೆ 5 ಘಂಟೆಗೆ ವರೆಗೆ ಜೋಡೆತ್ತಿನ ಖಾಲಿ ಗಾಡಾ (ಚಕ್ಕಡಿ ) ಓಡಿಸುವ ಶರ್ಯತ್ತು ನಡೆಯಲಿವೆ. ರಾತ್ರಿ 7 ರಿಂದ 9 ರವರೆಗೆ ಅಂಕಲಗಿಯ ಅಮರ ಸಿದ್ದೇಶ್ವರ ಶ್ರೀಗಳು, ಅರಳಿಕಟ್ಟಿಯ ಶಿವಮೂರ್ತಿ ಶ್ರೀಗಳ ಪ್ರವಚನ ನಡೆಯಲಿದೆ. ದಿ. 30 ರಂದು ಶ್ರೀ ಕಲ್ಮೇಶ್ವರ ರುದ್ರಾಭಿಷೇಕ, ಮಹಾಪ್ರಸಾದ, ಸಂಜೆ 4-00 ಘಂಟೆಗೆ ಮಮದಾಪುರದ ಶ್ರೀ ಮೌನ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಶ್ರೀ ಕಲ್ಮೇಶ್ವರ ರಥೋತ್ಸವ, ರಾತ್ರಿ 9 ಕ್ಕೆ ಶ್ರೀ ಸದ್ಗುರು ಮಹಾರಾಜರ ಶ್ರೀ ಕೃಷ್ಣ ಪಾರಿಜಾತ ನಡೆಯಲಿದ್ದು, ದಿ. 01-05-2025 ರಂದು ಸಂಜೆ 4 ಘಂಟೆಗೆ ಹೊನ್ನಾಟ್ ನಂತರ ಗ್ರಾಮದೇವಿಯರು ಸೀಮೆಗೆ ಹೋಗುವರು ಎಂದು ಮತ್ತಿಕೊಪ್ಪ ಗ್ರಾಮದ ಶ್ರೀ ಗ್ರಾಮದೇವಿ ಜಾತ್ರಾ ಕಮಿಟಿಯ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!