ಬೆಳಗಾವಿ-20:ಮಾ.21 ರಿಂದ ಆರಂಭವಾಗುವ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳ ಭಯ ಬಿಟ್ಟು ನಿಶ್ಚಿಂತೆಯಿಂದ ಪರೀಕ್ಷೆ ಎದುರಿಸಿ ಎಂದು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಗಡಿಬಿಡಿ, ಮಾನಸಿಕ ಒತ್ತಡ, ಉದ್ವೇಗ ಬಿಟ್ಟು ಸಂಯಮದಿಂದ ಪರೀಕ್ಷೆ ಎದುರಿಸಿ, ಪರೀಕ್ಷೆ ದಿನ ಹತ್ತಿರ ಬರುತ್ತಿದ್ದಂತೆ ಸಾಮಾನ್ಯವಾಗಿ ವಿದ್ಯಾರ್ಥಿಗಳು ಆತಂಕಕ್ಕೊಳಗಾಗುತ್ತಾರೆ. ಕೆಲವರು ಮಾನಸಿಕವಾಗಿ ಚಿಂತಾಕ್ರಾಂತರಾಗಿ ಓದಲು ಶುರು ಮಾಡುತ್ತಾರೆ. ಕೆಲವರು ನಿದ್ದೆಬಿಟ್ಟು ಓದುವುದರಿಂದ ಪರೀಕ್ಷೆ ದಿನ ಬರೆಯಲು ಅಸಹಾಯಕರಾಗುವ ಸಂಭವವಿರುತ್ತದೆ. ಹಾಗಾಗಿ, ಮೊದಲು ಭಯ ಬಿಟ್ಟು ನಿಶ್ಚಿಂತೆಯಿಂದ ಪರೀಕ್ಷೆ ಬರೆಯಲು ಮುಂದಾಗಬೇಕು ಎಂದು ಶ್ರೀಗಳು ಪ್ರಕಟಣೆಯಲ್ಲಿ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.