15/12/2025

ಮೂಡಲಗಿ-12 : ಪಟ್ಟಣದಲ್ಲಿ ಮಾ : ೧೩ ರಂದು ಕಾಮದಹನ, ಹೋಳಿ ಹಬ್ಬ ೧೪ ರಂದು ಆಚರಿಸಲಾಗುವುದು.
ಹೋಳಿ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕೆಂದು ಮೂಡಲಗಿ ಸಿ ಪಿ ಐ ಶ್ರೀಶೈಲ ಬ್ಯಾಕೂಡ್ ಅವರು ಹೇಳಿದರು.

ಮಂಗಳವಾರ ರಂದು ಪೋಲಿಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಹೋಳಿ ಶಾಂತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾವ೯ಜನಿಕರ ಸಹಕಾರ ಅಗತ್ಯವಾಗಿದೆ .

ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಬೇಡಿ ಈ ಸಮಯದಲ್ಲಿ ಶಾಲಾ ಮಕ್ಕಳು ಪರೀಕ್ಷೆ ಇರುವದರಿಂದ ಮಕ್ಕಳಿಗೆ, ಸಾವ೯ಜನಿಕರಿಗೆ, ಮಹಿಳೆಯರಿಗೆ , ವಾಹನ ಸವಾರರ ಮೇಲೆ ಒತ್ತಾಯ ಪೂರ್ವಕವಾಗಿ ಬಣ್ಣ ಎರಚಬಾರದು ಪರಸ್ಪರ ಕೋಮು ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಚಮ೯ಕ್ಕೆ ಹಾನಿಕಾರಕವಲ್ಲದ ನೈಸರ್ಗಿಕ ಬಣ್ಣ ಮಾತ್ರ ಉಪಯೋಗಿಸಬೇಕು ಎಂದರು.

ಶಾಂತಿ ಪಾಲನಾ ಸಭೆಯಲ್ಲಿ ಪಿ ಎಸ್ ಐ ರಾಜು ಪೂಜಾರಿ, ದಲಿತ ಮುಖಂಡ ಶಾಬಪ್ಪ ಸಣ್ಣಕ್ಕಿ , ವಸಂತ ಕ್ಯಾತೆನ್ನವರ , ಬಿಟಿಟಿ ಕಮಿಟಿಯ ಮಲೀಕ ಕಳ್ಳಿಮನಿ, ಅಜೀಜ್ ಡಾಂಗೆ, ಪೋಲಿಸ್ ಠಾಣೆಯ ಸಿಬ್ಬಂದಿಗಳಾದ ಎಲ್ ಬಿ ಗೋಡೆರ, ಎಸ್ ಆರ್ ಚೌಗಲಾ, ಪಿ ವಾಯ್ ಲೋಕುರೆ, ಎ ಜಿ ಚಿಕ್ಕೋಡಿ , ಎಮ್ ವಾಯ್ ನದಾಫ, ಮತ್ತಿತರರು ಉಪಸ್ಥಿತರಿದ್ದರು.

error: Content is protected !!