ಬೆಳಗಾವಿ-03:ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟದ ಫಲವಾಗಿ ನಮ್ಮ ಅಮಾಯಕ ಕನ್ನಡಿಗ ಕಂಡಕ್ಟರ ಮಹದೇವ ಅವರ ಮೇಲಿನ ಫೋಕ್ಸೋ ಕೇಸ ಅನ್ನು ಪೊಲೀಸ್ ಇಲಾಖೆ ಹಿಂಪಡೆದಿದ್ದು, ಅದೇ ರೀತಿ ಆ ಫೋಕ್ಸೋ ಕೇಸ ದಾಖಲಿಸಿದ ಅಧಿಕಾರಿಯನ್ನು ಸಹ ವರ್ಗಾವಣೆ ಮಾಡಿದ್ದು ಹೋರಾಟಕ್ಕೆ ಸಿಕ್ಕಂತಹ ಪ್ರತಿಫಲ.
ಹೋರಾಟದ ಯಶಸ್ಸಿನ ಸಲುವಾಗಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ಅಭಿಲಾಷ್ ಅವರ ನೇತ್ರತ್ವದಲ್ಲಿ ಶ್ರೀ ನಗರ ಜನತಾ ಅಪಾರ್ಟಮೆಂಟನಲ್ಲಿ ಭೋಜನಕೂಟ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದ್ದರು.
ಈ ವೇಳೆ ಕರವೇ ಮುಖಂಡರಾದ ಬಾಳಸಾಹೇಬ್ ಉದಗಟ್ಟಿ, ಜೋಹೆಲ ಜಸ್ಟಿನ್, ಆಕಾಶ ಕುಲಗೋಡ ಮುಂತಾದವರು ಉಪಸ್ಥಿತರಿದ್ದರು
